ಬೆಂಗಳೂರು: 80 ಅಡಿಯ ಬೃಹತ್ತಾದ ಕನ್ನಡ ಧ್ವಜವನ್ನು ಬೆಟ್ಟದ ತುತ್ತ ತುದಿಯಲ್ಲಿ ಹಾರಿಸುವ ಮೂಲಕ ಯುವಕರ ತಂಡ ನಾಡಪ್ರೇಮ ಮೆರೆದಿದ್ದಾರೆ.
ಮಾಗಡಿ ತಾಲೂಕಿನ ಕುದೂರು ಬಳಿ ಇರುವ ಐತಿಹಾಸಿಕ ಭೈರವದುರ್ಗ ಬೆಟ್ಟದ ತುತ್ತತುದಿಯಲ್ಲಿ ಡಾ.ರಾಜ್ ಕುಮಾರ್ ಅಭಿಮಾನಿ ಬಳಗ ಸತತ ಹನ್ನೇರಡು ವರ್ಷಗಳಿಂದ ಬೃಹತ್ತಾದ ಕನ್ನಡದ ಬಾವುಟವನ್ನು ಹಾರಿಸುತ್ತಿದ್ದಾರೆ.
Advertisement
Advertisement
ವರನಟ ಡಾ. ರಾಜ್ ಕುಮಾರ್ ಸೇರಿದಂತೆ ಕನ್ನಡದ ಕಟ್ಟಾಳುಗಳಿಗೆ ಜಯಘೋಷಗಳನ್ನು ಕೂಗುವುದರ ಮೂಲಕ ಯುವಕರ ತಂಡ ಬೆಟ್ಟದ ತುತ್ತ ತುದಿಯಲ್ಲಿ ಕನ್ನಡ ಬಾವುಟವನ್ನು ಹಾರಿಸಿ ಕನ್ನಡ ಅಭಿಮಾನವನ್ನು ಮೆರೆದಿದ್ದಾರೆ. ಭೈರವದುರ್ಗ ಬೆಟ್ಟದ ತಪ್ಪಲಿನಿಂದ ಕನ್ನಡ ಬಾವುಟ ಹಾಗೂ ಧ್ವಜ ಸ್ತಂಭವನ್ನು ಗ್ರಾಮಸ್ಥರು ಹೆಗಲ ಮೇಲೆ ಎತ್ತಿಕೊಂಡು ಹೋಗಿ ಬೆಟ್ಟದ ಮೇಲೆ ಸ್ಥಾಪಿಸಿ ತಮ್ಮ ಕನ್ನಡ ಅಭಿಮಾನವನ್ನು ಮೆರೆದರು.
Advertisement
Advertisement
ಡಾ. ರಾಜ್ ಅಭಿಮಾನಿಗಳು ಪ್ರತಿ ವರ್ಷದಂತೆ ಈ ವರ್ಷವೂ ಸಹ ಗಿಡಗಳನ್ನು ನೆಟ್ಟು, ಗಿಡಗಳಿಗೆ ನೀರು ಎರೆಯುವ ಮೂಲಕ ಪರಿಸರ ಪ್ರಜ್ಞೆಯ ಜೊತೆಗೆ ಬೆಟ್ಟದ ತುದಿಯಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv