– ಬೆಂಗಳೂರಿನಲ್ಲಿ 2,207 ಮಂದಿಗೆ ಕೊರೊನಾ
– 49,931 ಸಕ್ರಿಯ, 29,310 ಮಂದಿ ಬಿಡುಗಡೆ
ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಇಂದು ಮೊದಲ ಬಾರಿಗೆ 5 ಸಾವಿರ ಗಡಿ ದಾಟಿದರೆ, ಬಿಡುಗಡೆಯಾವರ ಸಂಖ್ಯೆ 2 ಸಾವಿರ ದಾಟಿದೆ. ಇಂದು 5,030 ಮಂದಿಗೆ ಸೋಂಕು ಬಂದಿದ್ದರೆ ಆಸ್ಪತ್ರೆಯಿಂದ 2,071 ಮಂದಿಗೆ ಡಿಸ್ಚಾರ್ಜ್ ಆಗಿದ್ದಾರೆ. ಈ ಮೂಲಕ ಸೋಂಕಿತರ ಸಂಖ್ಯೆ ಬಿಡುಗಡೆಯಾದವರ ಸಂಖ್ಯೆಯಲ್ಲಿ ಕರ್ನಾಟಕ ದಾಖಲೆ ಬರೆದಿದೆ.
Advertisement
ಕರ್ನಾಟಕದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 80,863ಕ್ಕೆ ಏರಿಕೆಯಾಗಿದೆ. ಈ ಪೈಕಿ 49,931 ಸಕ್ರಿಯ ಪ್ರಕರಣಗಳಿದ್ದರೆ 29,310 ಮಂದಿ ಬಿಡುಗಡೆಯಾಗಿದ್ದಾರೆ.
Advertisement
Advertisement
Advertisement
ಇಂದು 97 ಮಂದಿ ಮೃತಪಟ್ಟಿದ್ದು, ಒಟ್ಟು ಮೃತರಾದವರ ಸಂಖ್ಯೆ 1,616ಕ್ಕೆ ಏರಿಕೆಯಾಗಿದೆ. ಐಸಿಯುನಲ್ಲಿ 640 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೆಂಗಳೂರಿನಲ್ಲಿ 2,207, ರಾಯಚೂರು 258, ಕಲಬುರಗಿ 229, ದಕ್ಷಿಣ ಕನ್ನಡ 218, ಬೆಳಗಾವಿ 214, ಧಾರವಾಡ 183, ಬಳ್ಳಾರಿ 164, ಬೆಂಗಳೂರು ಗ್ರಾಮಾಂತರ 161, ಉಡುಪಿ 160 ಮಂದಿಗೆ ಸೋಂಕು ಬಂದಿದೆ.
ಬೆಂಗಳೂರಿನಲ್ಲಿ ಇಂದು 1,038, ದಕ್ಷಿಣ ಕನ್ನಡ 301, ಉತ್ತರ ಕನ್ನಡ 84, ಧಾರವಾಡ 76, ಉಡುಪಿ 65, ವಿಜಯಪುರ 57, ಚಿಕ್ಕಮಗಳೂರು 53, ಕೋಲಾರ 50 ಮಂದಿ ಬಿಡುಗಡೆಯಾಗಿದ್ದಾರೆ.
ಇಂದು ಬೆಂಗಳೂರಿನಲ್ಲಿ 48, ಮೈಸೂರು 8, ದಕ್ಷಿಣ ಕನ್ನಡ 7, ಬಳ್ಳಾರಿ 5, ಬೆಳಗಾವಿಯಲ್ಲಿ 4 ಮಂದಿ ಮೃತಪಟ್ಟಿದ್ದಾರೆ. ಒಟ್ಟು 640 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈ ಪೈಕಿ ಬೆಂಗಳೂರು 361, ಕಲಬುರಗಿ 37, ಧಾರವಾಡ 33, ಬಳ್ಳಾರಿ 21, ಹಾಸನ 19, ಮಂಡ್ಯ 17, ರಾಯಚೂರು 17, ರಾಯಚೂರು 17, ಗದಗದಲ್ಲಿ 16 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.