ಮುಂಬೈ: ಬಾಲಿವುಡ್ ನಟಿ ದಿಶಾ ಪಟಾನಿ ಸದಾ ತಮ್ಮ ಫಿಟ್ನೆಸ್ ವೀಡಿಯೋಗಳಿಗೆ ಹೆಸರುವಾಸಿ. ಈಗ 80 ಕೆಜಿ ತೂಕ ಎತ್ತಿ ಅದರ ಜೊತೆಗೆ ಸ್ಕ್ವಾಟ್ಸ್ ಮಾಡಿದ್ದಾರೆ. ನಟಿಯ ಈ ವೀಡಿಯೋ ಸಖತ್ ವೈರಲ್ ಆಗಿದ್ದು, ನೆಟ್ಟಿಗರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಸರಳವಾಗಿ ಮಾಡಿ ಶೇಂಗಾ ಹೋಳಿಗೆ
ದಿಶಾ ಪಟಾಣಿ ತುಂಬಾ ಕಷ್ಟಕರವಾದಂತಹ ಕಸರತ್ತುಗಳನ್ನು ಜಿಮ್‍ನಲ್ಲಿ ಮಾಡುತ್ತಿದ್ದು, ಈ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಕಿ ಬಾರ್‍ಬೆಲ್ 80ಕೆಜಿ ತೂಕದ್ದು ಎಂದು ಬರೆದಿದ್ದಾರೆ. ತೂಕದ ಬಾರ್‍ಬೆಲ್ ಅನ್ನು ಎತ್ತಲು ದಿಶಾ ಅವರಿಗೆ ತರಬೇತುದಾರ ರಾಜೇಂದ್ರ ಧೊಲೆ ಸಹಾಯ ಮಾಡುತ್ತಿದ್ದಾರೆ. ದಿಶಾ ಕಪ್ಪು ಬಣ್ಣದ ಜಿಮ್ ಡ್ರೆಸ್ ಅನ್ನು ಧರಿಸಿದ್ದು, ತಮ್ಮ ಸೊಂಟದ ಭಾಗದಲ್ಲಿ ಯಾವುದೇ ಗಾಯಗಳು ಆಗಬಾರದೆಂದು ಬೆಲ್ಟ್ ಅನ್ನು ಧರಿಸಿದ್ದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. 80 ಕೆಜಿ ತೂಕ ಎತ್ತಿದ ದಿಶಾ ಅವರಿಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
View this post on Instagram
ದಿಶಾ ಪಟಾನಿ ಅವರ ಈ ವಿಡಿಯೋ ನೋಡಿ ದಿಶಾ ಸಹೋದರಿ ಖುಷ್ಬೂ ಪಟಾನಿ ತಮ್ಮ ಸಹೋದರಿ ದಿಶಾರನ್ನು ಓ ದೇವರೇ.. ಪುರಾತನ ಕಾಲದ ಬಲಶಾಲಿ ಮಹಿಳೆ ಎಂದು ಪ್ರತಿಕ್ರಿಯಿಸಿದ್ದಾರೆ. ಟ್ರೈನರ್ ರಾಜೇಂದ್ರ ನೇರ ಮತ್ತು ಬಲಿಷ್ಠ ಎಂದು ಕಮೆಂಟ್ ಮಾಡಿದ್ದಾರೆ. ಬಾಲಿವುಡ್‍ನಲ್ಲಿ ದಿಶಾ ಅವರು 80 ಕೆಜಿ ಭಾರವನ್ನು ಎತ್ತಿರುವುದು ಸಖತ್ ಸುದ್ದಿಯಾಗುತ್ತಿದೆ. ಸದಾ ಹಾಟ್ ಫೋಟೋಶೂಟ್, ಸಿನಿಮಾ ಎಂದು ಸುದ್ದಿಯಲ್ಲಿರುವ ದಿಶಾ ಇದೀಗ ಫಿಟ್ನೆಸ್ ವೀಡಿಯೋ ಮೂಲಕವಾಗಿ ಸುದ್ದಿಯಾಗುತ್ತಿದ್ದಾರೆ.