– ಚಳಿಯಲ್ಲಿ ನಡುಗುತ್ತಾ ಮನೆ ಮುಂದೆ ಮಲಗಿದ ವೃದ್ಧೆ
ಚಂಡೀಗಢ: ಸೊಸೆಯೊಬ್ಬಳು 80 ವರ್ಷದ ಅತ್ತೆಯನ್ನು ಮನೆಯಿಂದ ಹೊರಗೆ ಹಾಕಿ ವೃದ್ಧೆಯ ವಸ್ತುಗಳನ್ನು ಹೊರಗೆ ಎಸೆದಿರುವ ಘಟನೆ ಹರಿಯಾಣದ ಹಿಸಾರ್‍ನ ಆಜಾದ್ ನಗರದಲ್ಲಿ ನಡೆದಿದೆ.
ಹಲ್ಲೆಗೊಳಗಾದ ವೃದ್ಧೆಯನ್ನು ಚನ್ನೋ (80) ಎಂದು ಗುರುತಿಸಲಾಗಿದೆ. ಸೊಸೆ ಶಕುಂತಲಾ ವಯಸ್ಸಾದ ಅತ್ತೆಯ ಮೇಲೆ ಹಲ್ಲೆ ಮಾಡಿದ್ದಾಳೆ ಮತ್ತು ವಸ್ತುಗಳನ್ನು ಮನೆಯಿಂದ ಹೊರಗೆ ಎಸೆದಿದ್ದಾಳೆ. ಈ ಚಳಿ ವಾತಾವರಣದಲ್ಲಿ ವಯಸ್ಸಾದ ಮಹಿಳೆ ಮನೆಯ ಹೊರಗೆ ಮಲಗಿರುವ ಸ್ಥಿತಿ ಕರುಣಾಜನಕವಾಗಿತ್ತು.
ವಸ್ತುಗಳನ್ನು ಸಹ ಹೊರಗೆ ಎಸೆದಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನಂತರ ಪೊಲೀಸರು ಆರೋಪಿ ಮಹಿಳೆ ಶಕುಂತಲಾಳನ್ನು ಸೆಕ್ಷನ್ 323(ಸ್ವಯಂಪ್ರೇರಣೆಯಿಂದ ನೋವನ್ನುಂಟುಮಾಡುವುದು, ಸೆಕ್ಷನ್ 506(ಬೆದರಿಕೆ), 509 ಸೆಕ್ಷನ್( ಮಹಿಳೆಗೆ ಸನ್ನೆ, ಶಬ್ದ, ವಸ್ತು ಬಳಸಿ ಅವಮಾನಿಸುವುದು) ಅಡಿಯಲ್ಲಿ ಬಂಧಿಸಿದ್ದಾರೆ. ಡಿಎಸ್ಪಿ ಜೋಗೇಂದ್ರ ಶರ್ಮಾ ಆರೋಪಿ ಮಹಿಳೆಯ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಪೊಲೀಸ್ ಠಾಣೆಯ ಉಸ್ತುವಾರರಿಗೆ ಆದೇಶಿಸಿದ್ದಾರೆ.
ವೃದ್ಧ ಮಹಿಳೆಯನ್ನು ಮನೆಯಿಂದ ಹೊರಗೆ ಹಾಕಿ ಹೊಡೆಯುವ ವಿಡಿಯೋ ವೈರಲ್ ಆಗಿತ್ತು. ನಾವು ವಿಚಾರಣೆ ನಡೆಸಿದಾಗ ಈ ಸಂದರ್ಭದಲ್ಲಿ, ವೃದ್ದೆ ಸೊಸೆ ತನ್ನ ಮೇಲೆ ಹಲ್ಲೆ ನಡೆಸಿ ಮನೆಯಿಂದ ಹೊರಗೆ ಓಡಿಸಿದಳು ಮತ್ತು ತನ್ನ ಸಾಮಾನುಗಳನ್ನು ಸಹ ರಸ್ತೆಗೆ ಎಸೆದಳು ಎಂದು ತಿಳಿಸಿದ್ದಾಳೆ. ನಾವು ಸ್ಥಳಕ್ಕೆ ಹೋದಾಗ ವೃದ್ಧೆ ಮನೆಯ ಹೊರಗೆ ಇದ್ದಳು. ಈಗ ತನ್ನ ಎರಡನೇ ಮಗನ ಮನೆಗೆ ಕರೆದೊಯ್ಯಲಾಗಿದೆ ಎಂದು ಆಜಾದ್ ನಗರ ಪೊಲೀಸ್ ಠಾಣೆಯ ಉಸ್ತುವಾರಿ ರೋಹ್ತಾಶ್ ತಿಳಿಸಿದ್ದಾರೆ.
https://youtu.be/DWbFXH3cSbs