ಪುಣೆ: ಪ್ರವಾಸಿ ಇಂಗ್ಲೆಂಡ್ ವಿರುದ್ಧದ ಅಂತಿಮ ಏಕದಿನ ಪಂದ್ಯಾಟದಲ್ಲಿ ಭಾರತ ಶಿಖರ್ ಧವನ್, ರಿಷಬ್ ಪಂತ್ ಮತ್ತು ಹಾರ್ದಿಕ್ ಪಾಂಡ್ಯ ಅವರ ಅರ್ಧಶತಕದ ನೆರವಿನಿಂದ ಭಾರತ ತಂಡ ಇಂಗ್ಲೆಂಡ್ಗೆ 330 ರನ್ಗಳ ಬೃಹತ್ ಟಾರ್ಗೆಟ್ ನೀಡಿದೆ.
ಭಾರತ ಪರ ಉತ್ತಮ ಆರಂಭ ನೀಡಿದ ಧವನ್ ಮತ್ತು ರೋಹಿತ್ ಜೊಡಿ ಮೊದಲ ವಿಕೆಟ್ಗೆ 103 ರನ್ಗಳ ಜೊತೆಯಾಟವಾಡಿ ಆರಂಭಿಕ ಮೇಲುಗೈ ತಂದುಕೊಟ್ಟರು. ಈ ವೇಳೆ ಉತ್ತಮ ಬ್ಯಾಟ್ ಬೀಸುತ್ತಿದ್ದ ರೋಹಿತ್ ಶರ್ಮಾ 37 ರನ್(37 ಎಸೆತ, 6 ಬೌಂಡರಿ) ಸಿಡಿಸಿ ಔಟ್ ಆದರು. ಆದರೆ ಒಂದು ಬದಿಯಲ್ಲಿ ಬ್ಯಾಟಿಂಗ್ ಮುಂದುವರಿಸಿದ ಧವನ್ 67 ರನ್ ( 56 ಎಸೆತ, 10 ಬೌಂಡರಿ) ಮಾಡಿ 16.4 ಓವರ್ ವೇಳೆ ಅದೀಲ್ ರಶೀದ್ಗೆ ವಿಕೆಟ್ ಒಪ್ಪಿಸಿದರು.
Advertisement
Advertisement
ನಂತರ ಬಂದ ಕೊಹ್ಲಿ ಮತ್ತು ರಾಹುಲ್ 7 ರನ್ಗಳಿಸಿ ಔಟಾದರೂ ರಿಷಭ್ ಪಂತ್ ಮತ್ತು ಹಾರ್ದಿಕ್ ಪಾಂಡ್ಯ 5ನೇ ವಿಕೆಟಿಗೆ 99 ರನ್ಗಳ ಜೊತೆಯಾಟವಾಡಿ ಇನ್ನಿಂಗ್ಸ್ ಕಟ್ಟಿದರು.
Advertisement
78 ರನ್(62 ಎಸೆತ, 5 ಬೌಂಡರಿ, 4 ಸಿಕ್ಸರ್) ಹೊಡೆದು ರಿಷಭ್ ಪಂತ್ ಔಟಾದಾಗ ಭಾರತದ ಸ್ಕೋರ್ 5 ವಿಕೆಟ್ ನಷ್ಟಕ್ಕೆ 256 ರನ್. 20 ರನ್ ಅಂತರದಲ್ಲಿ 64 ರನ್(44 ಎಸೆತ, 5 ಬೌಂಡರಿ, 4 ಸಿಕ್ಸರ್) ಸಿಡಿಸಿದ್ದ ಹಾರ್ದಿಕ್ ಪಾಂಡ್ಯ ಔಟಾದರು.
Advertisement
ಕೃನಾಲ್ ಪಾಂಡ್ಯ ಮತ್ತು ಶಾರ್ದೂಲ್ ಠಾಕೂರ್ ಉತ್ತಮವಾಗಿ ಆಡುತ್ತಿದ್ದರು. ಶಾರ್ದೂಲ್ ಠಾಕೂರ್ 30 ರನ್ ಗಳಿಸಿ ಔಟಾದ ಬೆನ್ನಲ್ಲೇ ಭಾರತ ದಿಢೀರ್ ಕುಸಿತ ಆರಂಭವಾಯಿತು. 6 ವಿಕೆಟ್ ನಷ್ಟಕ್ಕೆ 321 ರನ್ ಗಳಿಸಿದ್ದ ಭಾರತದ ಕೊನೆಯ 4 ವಿಕೆಟ್ 8 ರನ್ ಅಂತರದಲ್ಲಿ ಪತನವಾದ ಕಾರಣ ಅಂತಿಮವಾಗಿ 48.2 ಓವರ್ಗಳಲ್ಲಿ 329 ರನ್ಗಳಿಗೆ ಆಲೌಟ್ ಆಯ್ತು. ಕೃನಾಲ್ ಪಾಂಡ್ಯ 25 ರನ್ ಹೊಡೆದು ಔಟಾದರು. ಮಾರ್ಕ್ ವುಡ್ 3 ವಿಕೆಟ್ ಕಿತ್ತರೆ, ಆದಿಲ್ ರಷೀದ್ 2 ವಿಕೆಟ್ ಪಡೆದರು.