ಉಡುಪಿ: ಕೃಷಿ ಸಹವಾಸ ಸಾಕು ಅಂತ ಜನ ಎಲ್ಲ ಊರು ಬಿಟ್ಟು ಸಿಟಿ ಸೇರುತ್ತಿದ್ದಾರೆ. ಆದರೆ ಎಂಟು ವರ್ಷದ ಹುಡುಗ ಕೆಸರು ಗದ್ದೆಯಲ್ಲಿ ಕೋಣಗಳಿಂದ ಉಳುಮೆ ಮಾಡಿಸಿ ಅಚ್ಚರಿ ಮೂಡಿಸಿದ್ದಾನೆ.
ರಿತ್ವಿಕ್(8) ತನ್ನ ವಯಸ್ಸಿಗೂ ಮೀರಿದ ಸಾಧನೆ ತೋರೋ ಬಾಲಕ. ರಿತ್ವಿಕ್ ಉಡುಪಿಯ ಕೊಡವೂರು ಗ್ರಾಮದವನಾಗಿದ್ದು, ಮಲ್ಪೆಯ ಫ್ಲವರ್ ಆಫ್ ಪ್ಯಾರಡೈಸ್ ಶಾಲೆಯಲ್ಲಿ 2ನೇ ತರಗತಿ ಓದುತ್ತಿದ್ದಾನೆ. ರಿತ್ವಿಕ್, ಗಣೇಶ್ ಹಾಗೂ ಪುಷ್ಪ ದಂಪತಿಯ ಪುತ್ರನಾಗಿದ್ದು, ಬಾಲ್ಯದಿಂದಲೇ ಕೃಷಿ ಚಟುವಟಿಕೆ ಮೇಲೆ ವಿಶೇಷ ಆಸಕ್ತಿ ಇದೆ ಎಂದು ರಿತ್ವಿಕ್ ಪೋಷಕರು ಹೇಳಿದ್ದಾರೆ.
Advertisement
ಹಿರಿಯರು ಗದ್ದೆಗೆ ಇಳಿದು ಉಳುಮೆ ಮಾಡ್ತಿದ್ರೆ ತಾನೂ ಅವರ ಜೊತೆ ಉಳುಮೆ ಮಾಡ್ತಾನೆ. ಅಲ್ಲದೇ, ತನಗಿಂತ ಸಾವಿರ ಪಟ್ಟು ಬಲಶಾಲಿಯಾದ ಕೋಣಗಳನ್ನು ಪಳಗಿಸೋದಕ್ಕೆ ಈ ಬಾಲಕ ಮುಂದಾಗ್ತಾನೆ. ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುವ ಹಾಗೆ ರಿತ್ವಿಕ್ ಕೂಡಾ ಮನೆಯವರನ್ನು ಅನುಸರಿಸುತ್ತಾನೆ.
Advertisement
ಮನೆ ಮಂದಿ ಬೇಡಾ ಅಂದ್ರೂ ತಾನೇ ಗದ್ದೆಗೆ ಇಳಿತಾನೆ ಹಾಗೂ ಉಳುಮೆ ಮಾಡುತ್ತಾನೆ. ಇದರ ಜೊತೆಗೆ ರಿತ್ವಿಕ್ ಹಾರೆ ಹಿಡಿದು ಕೆಲಸಾನೂ ಮಾಡುತ್ತಾನೆ. ರಿತ್ವಿಕ್ ರಜೆ ಸಿಕ್ಕರೆ ನೇಗಿಲು ಹಿಡಿದು ಹೊರಡುತ್ತಾನೆ. ಸದ್ಯ ರಿತ್ವಿಕ್ ಗದ್ದೆಯಲ್ಲಿ ಉಳುಮೆ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪುಟಾಣಿಯ ಕೃಷಿ ಪ್ರೇಮಕ್ಕೆ ಸಾರ್ವಜನಿಕರಿಂದಲೂ ಪ್ರಶಂಸೆ ವ್ಯಕ್ತವಾಗಿದೆ.