8 ಬಾರಿ ಶಾಸಕ, ಸತೀಶ್ ಮಹಾನ್ ಮುಂದಿನ ಯುಪಿ ಸ್ಪೀಕರ್‌?

Public TV
1 Min Read
Satish Mahana

ಲಕ್ನೋ: ಉತ್ತರ ಪ್ರದೇಶ ವಿಧಾನಸಭೆಯ ಹೊಸ ಸ್ಪೀಕರ್ ಆಗಿ ಬಿಜೆಪಿ ನಾಯಕ ಮತ್ತು ಎಂಟು ಬಾರಿ ಶಾಸಕರಾಗಿರುವ ಸತೀಶ್ ಮಹಾನಾ ಅವರು ಆಯ್ಕೆಯಾಗುವ ಸಾಧ್ಯತೆಯಿದೆ.

ಶುಕ್ರವಾರ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಎರಡನೇ ಬಾರಿ ಯೋಗಿ ಆದಿತ್ಯನಾಥ್ ಅವರು ಪ್ರಮಾಣ ವಚನ ಸ್ವೀಕರಿಸಿದರು. ಆದರೆ ಈ ಸಮಾರಂಭದಲ್ಲಿ ನೂತನ ಸಂಪುಟದಲ್ಲಿ ಸತೀಶ್ ಮಹಾನಾ ಅವರನ್ನು ಸಚಿವರನ್ನಾಗಿ ಮಾಡಿಲ್ಲ. ಇದನ್ನೂ ಓದಿ: 2ನೇ ಬಾರಿ ಸಿಎಂ ಆಗಿ ‘ಬುಲ್ಡೋಜರ್ ಬಾಬಾ’ ಚುಕ್ಕಾಣಿ – ಮೋದಿ, ಬಿಜೆಪಿ ಸಿಎಂಗಳ ಸಮ್ಮುಖದಲ್ಲಿ ಪ್ರಮಾಣವಚನ

YOGIADITHYANATH

ಹೊಸದಾಗಿ ಆಯ್ಕೆಯಾಗಿರುವ ಶಾಸಕರಿಗೆ ಮಾರ್ಚ್ 28-29 ರಂದು ಪ್ರಮಾಣ ವಚನ ಬೋಧಿಸಲಿದ್ದಾರೆ. ನಂತರ ಮಾರ್ಚ್ 30 ರಂದು ವಿಧಾನಸಭೆಯಲ್ಲಿ ಸತೀಶ್ ಮಹಾನಾ ಅವರನ್ನು ಹೊಸ ಸ್ಪೀಕರ್ ಎಂದು ಘೋಷಿಸಬಹುದು. ಯೋಗಿ ಆದಿತ್ಯನಾಥ್ ಅವರ ಮೊದಲ ಸಂಪುಟದಲ್ಲಿ ಸತೀಶ್ ಮಹಾನಾ ಅವರು ಕೈಗಾರಿಕಾ ಅಭಿವೃದ್ಧಿ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಇದನ್ನೂ ಓದಿ: ಮೂರ್ಖರು, ಹುಚ್ಚರು, ಬುದ್ಧಿಇಲ್ಲದವರಿಗೆ ಉತ್ತರಿಸಬಾರದು – ಕೇಜ್ರಿವಾಲ್‍ಗೆ ಅಗ್ನಿಹೋತ್ರಿ ಪರೋಕ್ಷ ಟಾಂಗ್

ಶುಕ್ರವಾರ ಲಕ್ನೋದ ಏಕನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಯೋಗಿ ಆದಿತ್ಯನಾಥ್ ಅವರು ಉತ್ತರ ಪ್ರದೇಶದಲ್ಲಿ 2ನೇ ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಇವರೊಂದಿಗೆ 52 ಶಾಸಕರು ಕೂಡ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ಈ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ಜೆ.ಪಿ.ನಡ್ಡಾ, ಅಮಿತ್ ಶಾ ಪಾಲ್ಗೊಂಡಿದ್ದರು. ಇವರೊಂದಿಗೆ ವಿವಿಧ ರಾಜ್ಯಗಳ ಬಿಜೆಪಿ ಸಿಎಂಗಳೂ ಸಮಾರಂಭಕ್ಕೆ ಸಾಕ್ಷಿಯಾಗಿದ್ದರು. ಕರ್ನಾಟಕದ ಸಿಎಂ ಬಸವರಾಜ ಬೊಮ್ಮಾಯಿ, ಉದ್ಯಮಿಗಳು, ಬಾಲಿವುಡ್ ನಟ, ನಟಿಯರು ಭಾಗವಹಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *