ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಮಹಾ ಎಡವಟ್ಟು ಮಾಡಿದ್ದು, ಕಾಮಗಾರಿ ವೇಳೆ ಕಾಂಕ್ರೀಟ್ ಕುಸಿದು 8 ಮಂದಿ ಗಾಯಗೊಂಡಿದ್ದಾರೆ.
Advertisement
ಮೀರ್ ಖಾಸಿಂ (24) ಕಲ್ಕತ್ತ ಅವರ ಸ್ಥಿತಿ ಗಂಭೀರವಾಗಿದೆ. ಆಸಿಬುಲ್ (22), ಶಿವಪ್ರಸಾದ್ (33), ರೆಹಮಾನ್ ಗೆ ಸಣ್ಣಪುಟ್ಟ ಗಾಯಗಳಾಗಿವೆ. ಬೆಂಗಳೂರಿನ ಶ್ರೀನಗರದ ಕಾಳಿದಾದ ಸರ್ಕಲ್ ಬಳಿ 11:15 ಕ್ಕೆ ಘಟನೆ ನಡೆದಿದೆ. ರಾಜಕಾಲುವೆ ದುರಸ್ತಿ ಕಾರ್ಯದ ವೇಳೆ ಕಳಪೆ ಕಾಮಗಾರಿ ಮಾಡುತ್ತಿರುವುದು ಬಯಲಾಗಿದೆ. ಇದನ್ನೂ ಓದಿ: 5ರೂ. ಡಾಕ್ಟರ್ ಎಂದೇ ಫೇಮಸ್ ಆಗಿದ್ದ ಶಂಕರೇಗೌಡಗೆ ಹೃದಯಾಘಾತ
Advertisement
Advertisement
ಸೋಮವಾರದಿಂದ ಬಿಬಿಎಂಪಿ ರಾಜಕಾಲುವೆಗೆ ಮೇಲೆ ಮೊಲ್ಡಿಂಗ್ ಕಾಮಗಾರಿ ಶುರು ಮಾಡಿಕೊಂಡಿತ್ತು. ಇಂದು ಕಾರ್ಮಿಕರು ಕೆಲಸ ಮಾಡುವ ವೇಳೆಯಲ್ಲಿ ಘಟನೆ ನಡೆದಿದೆ. ರಾಜಕಾಲುವೆ ಕಾಮಗಾರಿ ಸಂದರ್ಭದಲ್ಲೇ ಬ್ರಿಡ್ಜ್ ಕುಸಿದಿದೆ. ಪರಿಣಾಮ 8 ಮಂದಿ ಕಾರ್ಮಿಕರು ಬ್ರಿಡ್ಜ್ ಮೇಲಿಂದ ಬಿದ್ದಿದ್ದಾರೆ. ಹಲವರು ರಾಜಕಾಲುವೆಗೆ ಬಿದ್ದಿರೋ ಶಂಕೆ ವ್ಯಕ್ತವಾಗುತ್ತಿದೆ. ಘಟನೆಯಲ್ಲಿ ಓರ್ವನ ರಕ್ಷಣೆ ಮಾಡಲಾಗಿದೆ.
Advertisement
ಕಳಪೆ ಕಾಮಗಾರಿಯಿಂದ ದುರಂತವೆಂದು ಸ್ಥಳೀಯರು ಆರೋಪಿಸಿದ್ದಾರೆ. ಕಾಮಗಾರಿ ನಡೆಯುತ್ತಿದ್ರೂ ಇಂಜಿನಿಯರ್ ಆಗ್ಲಿ, ಬಿಬಿಎಂಪಿ ಅಧಿಕಾರಿಗಳ್ಯಾರೂ ಸ್ಥಳದಲ್ಲಿ ಇರಲಿಲ್ಲ. ಅಲ್ಲದೆ ಘಟನೆ ನಡೆದರೂ ಯಾವೊಬ್ಬ ಅಧಿಕಾರಿಯೂ ಸ್ಥಳಕ್ಕೆ ಬಂದಿಲ್ಲ. ಸ್ಥಳೀಯರು ಗಾಯಾಳುಗಳನ್ನ ಸ್ವತಃ ತಾವೇ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸುತ್ತಿದ್ದಾರೆ.