– ರಾಯಚೂರಿನಲ್ಲಿ ಪೈಪ್ ಒಡೆದು ಅಪಾರ ಪ್ರಮಾಣದ ನೀರು ಪೋಲು
ಬೆಳಗಾವಿ/ರಾಯಚೂರು: ಕಲುಷಿತ ನೀರು ಸೇವಿಸಿ ಮೂರು ಮಕ್ಕಳು ಸೇರಿದಂತೆ 8 ಜನರು ಅಸ್ವಸ್ಥರಾದ ಘಟನೆ ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಯಮಕನಮರಡಿ ಗ್ರಾಮದಲ್ಲಿ ನಡೆದಿದೆ.
ಕಳೆದ ರಾತ್ರಿ ಬೋರ್‍ವೆಲ್ ನೀರು ಸೇವಿಸಿದ್ದರಿಂದ ಈ ಘಟನೆ ನಡೆದಿದೆ ಎಂದು ಸ್ಥಳಿಯರು ಹೇಳುತ್ತಿದ್ದಾರೆ. ಏಕಾಏಕಿ ವಾಂತಿ ಭೇಧಿ ಆರಂಭವಾಗಿದ್ದು ಸ್ಥಳೀಯ ಆಸ್ಪತ್ರೆಯಲ್ಲಿ 5 ಜನ ಹಾಗೂ ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಎರಡು ಮಕ್ಕಳು ಹಾಗೂ ಓರ್ವ ಯುವಕ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Advertisement
ರಾಯಚೂರು ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ರಾಂಪುರ ಕೆರೆ ಪಂಪಹೌಸ್ ಬಳಿ ರೈಸಿಂಗ್ ಲೈನ್ ಪೈಪ್ ಒಡೆದಿದ್ದು ಅಪಾರ ಪ್ರಮಾಣದ ನೀರು ಪೋಲಾಗುತ್ತಿದೆ. ಬೆಳಿಗ್ಗೆ ಮೂರು ಗಂಟೆಯಿಂದ ನೀರನ್ನ ಹರಿಸಲಾಗುತ್ತಿದ್ದು, ಆಗಿನಿಂದಲೇ ಪೈಪ್ ಒಡೆದುಹೋಗಿದೆ. ಅಕ್ಕಪಕ್ಕದ ಜಮೀನು ಹಾಗೂ ರಸ್ತೆಗೆ ನೀರು ಹರಿದಿದ್ದು ಅಪಾರ ಪ್ರಮಾಣದ ನೀರು ವ್ಯರ್ಥವಾಗಿದೆ.
Advertisement
Advertisement
ಪಂಪ್ ಹೌಸ್ ಪಕ್ಕದ ಹೊಸೂರು ಗ್ರಾಮಸ್ಥರು ನೀರು ಪೋಲಾಗುತ್ತಿರುವುದನ್ನ ಗಮನಿಸಿ ನಗರಸಭೆ ಗಮನಕ್ಕೆ ತಂದಿದ್ದರೂ ಪ್ರಯೋಜನವಾಗಿಲ್ಲ. ಈಗಾಗಲೇ ನೀರಿನ ಕೊರತೆಯಿಂದಾಗಿ ರಾಯಚೂರು ನಗರದಕ್ಕೆ ಮೂರು ದಿನಗಳಿಗೆ ಒಮ್ಮೆ ನೀರನ್ನ ಸರಬರಾಜು ಮಾಡಲಾಗುತ್ತಿದೆ. ಸುಮಾರು ನಾಲ್ಕೈದು ಬಡಾವಣೆಗಳಿಗೆ ಸರಬರಾಜು ಮಾಡಬಹುದಾದಷ್ಟು ನೀರು ಪೋಲಾಗಿಹೋಗಿದೆ.
Advertisement