-ಬೆಂಗಳೂರಿನಲ್ಲಿ ಕೊರೊನಾ ಸ್ಫೋಟ
-ಕೊರೊನಾ ಸೋಂಕಿತೆ ಹೃದಯಾಘಾತದಿಂದ ಸಾವು
-ಹೌಸ್ ಕೀಪರ್, ಕೂಲಿ ಕಾರ್ಮಿಕನಿಗೆ ಡೆಡ್ಲಿ ವೈರಸ್
ಬೆಂಗಳೂರು: ಇಂದು 8 ಮಂದಿಗೆ ಕೊರೊನಾ ತಗುಲಿರೋದು ದೃಢಪಟ್ಟಿದ್ದು, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 659ಕ್ಕೇರಿಕೆಯಾಗಿದೆ. ಕೊರೊನಾ ಪ್ರಕರಣದಿಂದ ಮುಕ್ತವಾಗಿ ಹಸಿರು ವಲಯದಲ್ಲಿದ್ದ ಉತ್ತರ ಕನ್ನಡ ಜಿಲ್ಲೆಯ ಯುವಕನಿಗೆ ಕೊರೊನಾ ಸೋಂಕು ತಗುಲಿರೋದು ದೃಢಪಟ್ಟಿದೆ. ಎರಡು ದಿನಗಳ ಹಿಂದೆ ಯುವಕನಿಗೆ ಕೊರೊನಾ ಲಕ್ಷಣಗಳು ಕಾಣಿಸಿಕೊಂಡಿದ್ದವು.
Advertisement
ಬೆಂಗಳೂರಿನ ಶಿವಾಜಿನಗರದಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದ 40 ವರ್ಷದ ವ್ಯಕ್ತಿಗೆ ಕೊರೊನಾ ಸೋಂಕು ತಗುಲಿದೆ. ಈ ವ್ಯಕ್ತಿ ವಾಸವಾಗಿದ್ದ ಒಂದೇ ಕೋಣೆಯಲ್ಲಿ 7 ಜನರು ವಾಸವಾಗಿರುವ ಆತಂಕಕಾರಿ ವಿಷಯ ಬೆಳಕಿಗೆ ಬಂದಿದೆ. ಸೋಂಕಿತ ವ್ಯಕ್ತಿ ಕ್ವಾರಂಟೈನ್ ಮಾಡಿದ್ದ ಹೋಟೆಲ್ ನಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡಿಕೊಂಡಿದ್ದು, ಇಲ್ಲಿ 72 ಜನರು ಉಳಿದುಕೊಂಡಿದ್ದರು. ಸೋಂಕಿತನ ಪ್ರಾಥಮಿಕ ಸಂಪರ್ಕದಲ್ಲಿದ್ದ 13 ಜನರನ್ನು ಗುರುತಿಸಿ ಕ್ವಾರಂಟೈನ್ ಮಾಡಲಾಗಿದೆ. ಆದ್ರೆ ಸೋಂಕು ಹೇಗೆ ತಗುಲಿದೆ ಎಂಬುವುದು ತಿಳಿದು ಬಂದಿಲ್ಲ.
Advertisement
Advertisement
ಬೆಂಗಳೂರಿನ ಮಂಗಮ್ಮನ ಪಾಳ್ಯದ 45 ವರ್ಷದ ಕೂಲಿ ಕಾರ್ಮಿಕನಿಗೆ ಸೋಂಕು ತಗುಲಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಜಯನಗರದ ಜನರಲ್ ಆಸ್ಪತ್ರೆಯಿಂದ ವಿಕ್ಟೋರಿಯಾದ ಕೋವಿಡ್-19 ಘಟಕಕ್ಕೆ ಶಿಫ್ಟ್ ಮಾಡಲಾಗಿದೆ. ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಕಾರ್ಮಿಕ ಐದು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದನು.
Advertisement
ಸೋಂಕಿತರ ವಿವರ:
1. ರೋಗಿ 652: ಬೆಂಗಳೂರಿನ 30 ವರ್ಷದ ಮಹಿಳೆ. ಸೋಂಕು ಸಂಪರ್ಕ ಮಾಹಿತಿಯನ್ನು ಪತ್ತೆ ಹಚ್ಚಲಾಗುತ್ತಿದೆ.
2. ರೋಗಿ 653: ಬೆಂಗಳೂರಿನ 40 ವರ್ಷದ ಪುರುಷ. ರೋಗಿ 420ರ ಜೊತೆ ಸಂಪರ್ಕ
3. ರೋಗಿ 654: ಬೆಂಗಳೂರಿನ 45 ವರ್ಷದ ಪುರುಷ. ಜ್ವರದ ಲಕ್ಷಣಗಳು ಕಾಣಿಸಿಕೊಂಡಿವೆ.
4. ರೋಗಿ 655: ಬಾಗಲಕೋಟೆಯ 29 ವರ್ಷದ ಮಹಿಳೆ. ರೋಗಿ 367 ಮತ್ತು 368ರ ಸಂಪರ್ಕದಲ್ಲಿದ್ದರು.
5. ರೋಗಿ 656: ಬಾಗಲಕೋಟೆಯ 29 ವರ್ಷದ ಪುರುಷ. ರೋಗಿ 367 ಮತ್ತು 368ರ ಸಂಪರ್ಕದಲ್ಲಿದ್ದರು.
6. ರೋಗಿ 657: ಬಳ್ಳಾರಿ 43 ವರ್ಷದ ಪುರುಷ. ಉತ್ತರಾಖಂಡಕ್ಕೆ ಪ್ರಯಾಣದ ಹಿನ್ನೆಲೆ
7. ರೋಗಿ 658: ದಕ್ಷಿಣ ಕನ್ನಡ 51 ವರ್ಷದ ಪುರುಷ. ರೋಗಿ 536ರ ಜೊತೆ ಸಂಪರ್ಕದಲ್ಲಿದ್ದರು.
8. ರೋಗಿ 659: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ 28 ವರ್ಷದ ಯುವಕ. ಜ್ವರದ ಲಕ್ಷಣಗಳು ಕಾಣಿಸಿಕೊಂಡಿವೆ.
ಇಂದು ಬೆಳಗ್ಗೆ ಬಿಡುಗಡೆಯಾದ ಬುಲೆಟಿನ್ ನಲ್ಲಿ ಬೆಂಗಳೂರು 3, ಬಾಗಲಕೋಟೆ 2, ಬಳ್ಳಾರಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ತಲಾ ಒಂದು ಪ್ರಕರಣ ಬೆಳಕಿಗೆ ಬಂದಿವೆ. ಇಂದು ಮೂವರು ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಬಳ್ಳಾರಿಯ ಕೌಲ್ ಬಜಾರ್ ಪ್ರದೇಶದ ವ್ಯಕ್ತಿಗೆ ಕೊರೊನಾ ಸೋಂಕು ತಗುಲಿದೆ. ಈ ವ್ಯಕ್ತಿ 18 ಜನರ ತಂಡದೊಂದಿಗೆ ಉತ್ತರಾಖಂಡ ಪ್ರವಾಸಕೈಗೊಂಡಿದ್ದರು. ಸೋಂಕಿತನ ಸಂಪರ್ಕದಲ್ಲಿದ್ದ 12 ಜನರ ಆರೋಗ್ಯದ ಮೇಲೆ ನಿಗಾ ಇಡಲಾಗಿದ್ದು, ಜಿಲ್ಲಾಡಳಿತ ಎಲ್ಲರ ವರದಿಗಾಗಿ ಕಾಯುತ್ತಿದೆ.
ರೋಗಿ ನಂಬರ್ 640 (62 ವರ್ಷ)ದ ಮಹಿಳೆ ಕೊರೊನಾಗೆ ಬಲಿಯಾಗಿದ್ದಾರೆ. ಇವರು ಅಸ್ತಮಾ, ಶ್ವಾಸಕೋಶ ಕಾಯಿಲೆ, ಬೊಜ್ಜು ಸೇರಿ ನಾನಾ ಕಾಯಿಲೆಗಳಿಂದ ಬಳಲುತ್ತಿದ್ದು, 3-4 ದಿನಗಳ ಹಿಂದೆ ವಿಜಯಪುರ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಸೋಮವಾರ ಬೆಳಗ್ಗೆ ಈ ವೃದ್ಧೆಯಲ್ಲಿ ಕೊರೊನಾ ಸೋಂಕು ಇರುವುದು ಪತ್ತೆಯಾಗಿತ್ತು. ಆದರೆ ಇಂದು ಬೆಳಗ್ಗಿನ ಜಾವ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಇವರಿಗೆ ರೋಗಿ ನಂಬರ್ 228 (13 ವರ್ಷ)ದ ಬಾಲಕನ ದ್ವಿತೀಯ ಸಂಪರ್ಕಕ್ಕೆ ಬಂದ ಹಿನ್ನೆಲೆ ಸೋಂಕು ತಗುಲಿದ್ದು ಧೃಢಪಟ್ಟಿದೆ. ಸಕಲ ವೈದ್ಯಕೀಯ, ಧಾರ್ಮಿಕ ಶಿಷ್ಠಾಚಾರದಂತೆ ವೃದ್ಧೆಯ ಅಂತ್ಯಕ್ರಿಯೆಯನ್ನು ಅಧಿಕಾರಿಗಳು ನೆರವೇರಿಸಿದ್ದಾರೆ.