-ದಾವಣಗೆರೆಯಲ್ಲಿ ಕೊರೊನಾಗೆ ಮತ್ತೊಂದು ಸಾವು
-ಬೆಳಗಾವಿಯ 13ರ ಬಾಲಕಿಗೆ ಸೋಂಕು
ಬೆಂಗಳೂರು: ಇಂದು ಮಂದಿಗೆ ಕೊರೊನಾ ಕಾಣಿಸಿಕೊಂಡಿದ್ದು, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 701ಕ್ಕೇರಿಕೆಯಾಗಿದೆ. ಇಂದು ದಾವಣಗೆರೆಯ 55 ವರ್ಷದ ಮಹಿಳೆ (ರೋಗಿ 694) ಕೊರೊನಾಗೆ ಸಾವನ್ನಪ್ಪಿದ್ದು, ರಾಜ್ಯದಲ್ಲಿ ಸಾವಿನ ಸಂಖ್ಯೆ 30ಕ್ಕೇರಿಕೆಯಾಗಿದೆ. ದಾವಣಗೆರೆಯಲ್ಲಿ ಕೊರೊನಾದಿಂದ ಸಾವನ್ನಪ್ಪಿದ 4ಕ್ಕೇರಿಕೆಯಾಗಿದೆ.
Advertisement
ಇಂದು ಬೆಳಗ್ಗೆ ಬಿಡುಗಡೆಯಾದ ಬುಲೆಟಿನ್ ನಲ್ಲಿ, ದಾವಣಗೆರೆ ಮತ್ತು ಕಲಬುರಗಿಯಲ್ಲಿ ತಲಾ ಮೂರು, ಬೆಂಗಳೂರು ಹಾಗೂ ಬೆಳಗಾವಿಯಲ್ಲಿ ತಲಾ ಒಂದು ಪ್ರಕರಣ ಬೆಳಕಿಗೆ ಬಂದಿವೆ. ಬೆಳಗಾವಿಯ 13 ವರ್ಷದ ಬಾಲಕಿಯಲ್ಲಿಯೂ ಕೊರೊನಾ ಸೋಂಕು ಕಾಣಿಸಿಕೊಂಡಿದೆ.
Advertisement
ಸೋಂಕಿತರ ವಿವರ:
1. ರೋಗಿ 694: ದಾವಣಗೆರೆಯ 55 ವರ್ಷದ ಮಹಿಳೆ. ತೀವ್ರ ಉಸಿರಾಟದ ತೊಂದರೆ
2. ರೋಗಿ 695: ದಾವಣಗೆರೆಯ 53 ವರ್ಷದ ಮಹಿಳೆ. ಜ್ವರದ ಲಕ್ಷಣಗಳು ಕಾಣಿಸಿಕೊಂಡಿವೆ.
3. ರೋಗಿ 696: ದಾವಣಗೆರೆಯ 40 ವರ್ಷದ ಮಹಿಳೆ. ಜ್ವರದ ಲಕ್ಷಣಗಳು ಕಾಣಿಸಿಕೊಂಡಿವೆ.
4. ರೋಗಿ 697: ಕಲಬುರಗಿ 35 ವರ್ಷದ ಪುರುಷ. ರೋಗಿ ನಂಬರ್ 642ರ ಜೊತೆ ಸಂಪರ್ಕ
5. ರೋಗಿ 698: ಕಲಬುರಗಿಯ 36 ವರ್ಷದ ಪುರುಷ. ರೋಗಿ ನಂಬರ್ 641ರ ಜೊತೆ ಸಂಪರ್ಕ.
6. ರೋಗಿ 699: ಕಲಬುರಗಿಯ 41 ವರ್ಷದ ಪುರುಷ. ರೋಗಿ ನಂಬರ್ 641ರ ಜೊತೆ ಸಂಪರ್ಕ.
7. ರೋಗಿ 700: ಬೆಳಗಾವಿ ಜಿಲ್ಲೆಯ ಹೀರೆ ಬಾಗೇವಾಡಿಯ 13 ವರ್ಷದ ಬಾಲಕಿ. ರೋಗಿ ನಂಬರ್ 364ರ ಜೊತೆ ಸಂಪರ್ಕ.
8. ರೋಗಿ 701: ಬೆಂಗಳೂರಿನ 49 ವರ್ಷದ ಮಹಿಳೆ. ಜ್ವರದ ಲಕ್ಷಣಗಳು ಕಾಣಿಸಿಕೊಂಡಿವೆ.
Advertisement
Advertisement
ಸೋಂಕಿತ 49 ವರ್ಷದ ಮಹಿಳೆ (ರೋಗಿ ನಂಬರ್ 701) ಮೂಲತಃ ಪಶ್ಚಿಮ ಬಂಗಾಳದವರಾಗಿದ್ದು, ಯಶವಂತಪುರದ ಸುಬೇದಾರ್ ಪಾಳ್ಯದಲ್ಲಿರುವ ಮಗನ ಮನೆಗೆ ಮಾರ್ಚ್ 12ರಂದು ಬಂದಿದ್ದರು. ಅವರಿಗೆ ಏಪ್ರಿಲ್ 30ರಂದು ಜ್ಚರ ಕಾಣಿಸಿಕೊಂಡಿತ್ತು. ಹೀಗಾಗಿ ಚಿಕನ್ ಗುನ್ಯಾ ಅಂತ ಭಾವಿಸಿ ಯಶವಂತಪುರದ ಖಾಸಗಿ ಆಸ್ಪತ್ರೆಗೆ ಮೇ 1ರಂದು ದಾಖಲಾಗಿದ್ದರು. ಆದರೆ ಅವರಿಗೆ ಕೊರೊನಾ ಲಕ್ಷಣಗಳಿರುವ ಶಂಕೆ ವ್ಯಕ್ತಪಡಿಸಿದ ವೈದ್ಯರು ಚಿಕನ್ ಗುನ್ಯಾ ಟೆಸ್ಟ್ ಜೊತೆಗೆ ಕೋವಿಡ್-19 ಪರೀಕ್ಷೆ ಕೂಡ ಮಾಡಿಸಿದ್ದರು. ಈ ವೇಳೆ ಪಾಸಿಟಿವ್ ಬಂದಿದೆ. ತಕ್ಷಣವೇ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ವ್ಯಕ್ತಿ ಶಿಫ್ಟ್ ಮಾಡಲಾಗಿದೆ. ಮಹಿಳೆಗೆ ಕೊರೊನಾ ಸೋಂಕು ದೃಢಪಡುತ್ತಿದ್ದಂತೆ ಆಸ್ಪತ್ರೆಯನ್ನು ಸೀಲ್ ಡೌನ್ ಮಾಡಲಾಗಿದೆ. ಜೊತೆಗೆ ಆಸ್ಪತ್ರೆಯಿಂದ ಇತರೆ ರೋಗಿಗಳ ಸ್ಥಳಾಂತರಗೊಳಿಸಲಾಗಿದೆ.
ಮಂಗಮ್ಮನಪಾಳ್ಯದ ಕೂಲಿ ಕಾರ್ಮಿಕನ ಪುತ್ರಿ ಹಾಗೂ ಬಾಗಲಕೋಟೆ ಜಿಲ್ಲೆಯ ಬದಾಮಿ ತಾಲೂಕಿನ ಗರ್ಭಿಣಿಯ ಕುಟುಂಬದ 9 ಜನರ ವರದಿ ನೆಗೆಟಿವ್ ಬಂದಿದೆ. ಬೆಂಗಳೂರಿನ ಸುಬೇದಾರ ಪಾಳ್ಯವನ್ನು ಸೀಲ್‍ಡೌನ್ ಮಾಡಲಾಗಿದೆ. ಇತ್ತ 24 ದಿನಗಳ ಬಳಿಕ ಬಾಪೂಜಿನಗರವನ್ನು ಸೀಲ್‍ಡೌನ್ ನಿಂದ ಮುಕ್ತವಾಗಿದೆ.