– ರಜೆ ಕೊಟ್ಟರೂ ನಿರಾಕರಣೆ
– ಭಾರೀ ತೂಕದ ಬ್ಯಾಗ್, ಕೈಯಲ್ಲಿ ರೈಫಲ್ ಹಿಡಿದು ಗಸ್ತು
ಚತ್ತೀಸ್‍ಗಢ: ಸಾಮಾನ್ಯವಾಗಿ ತುಂಬು ಗರ್ಭಿಣಿಯರಿಗೆ ವೈದ್ಯರು ಆದಷ್ಟೂ ವಿಶ್ರಾಂತಿ ಪಡೆಯಿರಿ ಎಂದು ಹೇಳುತ್ತಾರೆ. ಆದರೆ 8 ತಿಂಗಳ ಕಮಾಂಡರ್ ಗರ್ಭಿಣಿಯೊಬ್ಬರು ಬಂದೂಕು ಹಿಡಿದುಕೊಂಡು ಅಪಾಯಕಾರಿ ಕಾಡಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಸುನೈನಾ ಪಟೇಲ್ ಅವರು 8 ತಿಂಗಳ ಗರ್ಭಿಣಿಯಾದರೂ ಕರ್ತವ್ಯ ಪಾಲನೆ ಮಾಡುತ್ತಿದ್ದಾರೆ. ಅದರಲ್ಲೂ ಸುನೈನಾ ಅಪಾಯಕಾರಿ ಎಂದು ಕರೆಯಲ್ಪಡುವ ದಾಂತೇವಾಡದ ಕಾಡುಗಳಲ್ಲಿ ನಕ್ಸಲರ ವಿರುದ್ಧ ಹೋರಾಡುತ್ತಿದ್ದಾರೆ. ಈ ಮೂಲಕ ಇವರು ಲಕ್ಷಾಂತರ ಮಹಿಳೆಯರಿಗೆ ಮಾದರಿಯಾಗಿದ್ದಾರೆ.
Advertisement
Sunaina Patel, 8-month-old pregnant woman deployed as Danteshwari fighter in District Reserve Guard to combat Naxals in Chhattisgarh's Dantewada: I was 2-months pregnant when I joined. I never refused to perform my duties. Today also if I'm asked I'll do it with utmost sincerity. pic.twitter.com/6tUOruZsbz
— ANI (@ANI) March 8, 2020
Advertisement
ಸುನೈನಾ ಪಟೇಲ್ ಅವರು ದಾಂತೇವಾಡ ಜಿಲ್ಲೆಯ ನಕ್ಸಲ್ ನಿಗ್ರಹ ಮೀಸಲು ಪಡೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಎಂಟು ತಿಂಗಳ ಗರ್ಭಿಣಿಯಾದರೂ ಕೂಡ ಎಂದಿನಂತೆ ಪ್ಯಾಟ್ರೋಲಿಂಗ್ ಕೆಲಸ ಮಾಡುತ್ತಾರೆ. ದಟ್ಟವಾದ ಕಾಡುಗಳಲ್ಲಿ ಗಸ್ತು ತಿರುಗುತ್ತಿದ್ದಾರೆ. ಜೊತೆಗೆ ಹೆಗಲ ಮೇಲೆ ಭಾರೀ ತೂಕದ ಬ್ಯಾಗ್ ಮತ್ತು ಕೈಯಲ್ಲಿ ಭಾರವಾದ ರೈಫಲ್ ಹಿಡಿದುಕೊಂಡು ಕರ್ತವ್ಯ ಪಾಲನೆ ಮಾಡುತ್ತಿದ್ದಾರೆ.
Advertisement
ಸುನೈನಾ ಅವರು ಎರಡು ತಿಂಗಳ ಗರ್ಭಿಣಿಯಾಗಿದ್ದಾಗ ನಕ್ಸಲ್ ನಿಗ್ರಹ ಪಡೆಗೆ ಸೇರಿಕೊಂಡರು. ಆದರೂ ಕೆಲಸ ಮಾಡಲು ನಿರಾಕರಿಸಿಲ್ಲ. ಜೊತೆಗೆ ತಾವು ಗರ್ಭಿಣಿ ಎಂಬ ಕಾರಣಕ್ಕೆ ಕೆಲಸದಲ್ಲಿ ಯಾವುದೇ ವಿನಾಯಿತಿ ಪಡೆದುಕೊಳ್ಳಲಿಲ್ಲ. ಅದರಂತೆಯೇ ತಮ್ಮ ಕೆಲಸವನ್ನು ಅಷ್ಟೇ ನಿಷ್ಠೆಯಿಂದ ನಿರ್ವಹಿಸುತ್ತಿದ್ದಾರೆ. ಇವರ ಪ್ರಮಾಣಿಕತೆಯನ್ನು ನೋಡಿ ಹಿರಿಯ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Advertisement
ಈ ಹಿಂದೆ ಒಮ್ಮೆ ಗಸ್ತು ತಿರುಗುತ್ತಿದ್ದಾಗ ಸುನೈನಾ ಅವರಿಗೆ ಗರ್ಭಪಾತವಾಗಿತ್ತು. ಆದರೆ ಇಂದಿಗೂ ಅವರು ರಜೆ ತೆಗೆದುಕೊಳ್ಳಲು ನಿರಾಕರಿಸಿದ್ದಾರೆ. ಹೀಗಾಗಿ ಇವರು ಅನೇಕ ಮಹಿಳೆಯರಿಗೆ ಸ್ಫೂರ್ತಿಯಾಗಿದ್ದಾರೆ. ಸುನೈನಾ ಕಮಾಂಡರ್ ಆಗಿ ಅಧಿಕಾರ ವಹಿಸಿಕೊಂಡಾಗಿನಿಂದ ಮಹಿಳಾ ಕಮಾಂಡೋಗಳ ಸಂಖ್ಯೆ ದ್ವಿಗುಣಗೊಂಡಿದೆ ಎಂದು ದಾಂತೇವಾಡ ಎಸ್‍ಪಿ ಅಭಿಷೇಕ್ ಪಲ್ಲವ ಹೇಳಿದ್ದಾರೆ.