ಮಡಿಕೇರಿ: ಮನೆಯಲ್ಲಿ ಆಟವಾಡುತ್ತಿದ್ದಾಗ 8 ತಿಂಗಳ ಮಗುವೊಂದು (Baby) ಉಂಗುರ (Ring) ನುಂಗಿ ಮೃತಪಟ್ಟ ಘಟನೆ ಕೊಡಗು (Kodagu) ಜಿಲ್ಲೆಯ ವಿರಾಜಪೇಟೆ ತಾಲೂಕಿನಲ್ಲಿ ನಡೆದಿದೆ.
ಕೊಡಗು ಜಿಲ್ಲೆಯ ವಿರಾಜಪೇಟೆ (Virajpete) ತಾಲೂಕಿನ ಕರಡಿಗೋಡು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮುನೀರ್ ಎನ್ನುವವರ ಮಗು ಮೃತಪಟ್ಟಿದೆ. 8 ತಿಂಗಳ ಮಗು ಬುಧವಾರ ರಾತ್ರಿ ಮನೆಯಲ್ಲಿ ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಉಂಗುರ ನುಂಗಿತ್ತು. ತಕ್ಷಣ ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಮಗುವನ್ನು ದಾಖಲಿಸಿದರೂ ಉಸಿರಾಟದ ಸಮಸ್ಯೆಯಿಂದಾಗಿ ಮಡಿಕೇರಿ (Madikeri) ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಇದನ್ನೂ ಓದಿ: ರೇವಣ್ಣಗೆ ಭವಾನಿಯವರ ಚಿಂತೆ, ಕುಮಾರಣ್ಣನಿಗೆ ನಿಖಿಲ್ ಚಿಂತೆ, ಸಿದ್ದರಾಮಯ್ಯಗೆ ಕ್ಷೇತ್ರದ ಚಿಂತೆ – ಪ್ರತಾಪ್‌ಸಿಂಹ ವ್ಯಂಗ್ಯ
Advertisement
Advertisement
ಜಿಲ್ಲಾ ಆಸ್ಪತ್ರೆಯ ವೈದ್ಯರ ತಂಡ ರಾತ್ರಿ 9 ಗಂಟೆಯಿಂದ ಸುಮಾರು 12 ಗಂಟೆಯವರೆಗೆ ನಿರಂತರವಾಗಿ ಶ್ರಮಪಟ್ಟು ಶಸ್ತ್ರಚಿಕಿತ್ಸೆ ಮೂಲಕ ಉಂಗುರವನ್ನು ಹೊರತೆಗೆಯಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಬೆಳಗ್ಗೆ ಮಗು ಮೃತಪಟ್ಟಿದೆ. ಈ ಬಗ್ಗೆ ವೈದ್ಯರು ಮಾತನಾಡಿದ್ದು, ನಿಮ್ಮ ಮಕ್ಕಳ ಬಗ್ಗೆ ಒಂದಷ್ಟು ಎಚ್ಚರಿಕೆ ಇರುವಂತೆ ಹಾಗೂ ಈ ರೀತಿಯಲ್ಲಿ ಉಂಗುರ ನಾಣ್ಯಗಳನ್ನು ಮಕ್ಕಳ ಮುಂದೆ ಇಡುವ ಮುಂಚೆ ಎಚ್ಚರಿಕೆ ಇರುವಂತೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಕ್ಷೇತ್ರದಲ್ಲಿ ಸಿಂಪತಿ ಇದೆ, ನನಗೆ ಟಿಕೆಟ್ ಕೊಟ್ಟರೆ ಗೆಲ್ಲುತ್ತೇನೆ: ಅಜ್ಜಂಪೀರ್ ಖಾದ್ರಿ