ಕಾರವಾರ: ಪೋಷಕರ ನಿರ್ಲಕ್ಷ್ಯದಿಂದಾಗಿ ಮೊಬೈಲ್ ಚಾರ್ಜರ್ನಿಂದ (Mobile Charger) ಶಾಕ್ ಹೊಡೆದು 8 ತಿಂಗಳ ಮಗು ಸಾವನ್ನಪ್ಪಿರುವ ಮನಕಲಕುವ ಘಟನೆ ಉತ್ತರ ಕನ್ನಡ (Uttara Kannada) ಜಿಲ್ಲೆಯ ಕಾರವಾರದ ಸಿದ್ದರದಲ್ಲಿ ನಡೆದಿದೆ.
ಸಂತೋಷ್ ಕಲ್ಗುಟ್ಕರ್ ಹಾಗೂ ಸಂಜನಾ ಎಂಬವರ 8 ತಿಂಗಳ ಮಗು ಸಾನಿಧ್ಯ ವಿದ್ಯುತ್ ಶಾಕ್ಗೆ ಬಲಿಯಾದ ಕಂದಮ್ಮ. ಮೊಬೈಲ್ ಚಾರ್ಜ್ ಮಾಡಿದ ಬಳಿಕ ಪೋಷಕರು ಪ್ಲಗ್ಅನ್ನು ಆಫ್ ಮಾಡದೇ ನಿರ್ಲಕ್ಷ್ಯವಹಿಸಿದ್ದರು. ಇದನ್ನೂ ಓದಿ: ಆಟೋಗೆ ಸೈಡ್ ಬಿಡಲಿಲ್ಲ ಅಂತ KSRTC ಚಾಲಕನ ಮೇಲೆ ಹಲ್ಲೆ – ಮೂವರು ಅರೆಸ್ಟ್
Advertisement
Advertisement
ಮಗು ಆಟವಾಡುತ್ತಾ ಚಾರ್ಜರ್ ಪಿನ್ ಅನ್ನು ಬಾಯಿಗೆ ಹಾಕಿಕೊಂಡಿತ್ತು. ಇದರಿಂದಾಗಿ ಶಾಕ್ ಹೊಡೆದು ಮಗು ಸಾವನ್ನಪ್ಪಿದೆ. ಘಟನೆ ಸಂಬಂಧ ಕಾರವಾರ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: 4 ರಾಷ್ಟ್ರ ಪ್ರಶಸ್ತಿ ಪಡೆದಿದ್ದ ಕಲಾನಿರ್ದೇಶಕ ದೇಸಾಯಿ ನೇಣಿಗೆ ಶರಣು
Advertisement
Web Stories