ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಯುವಕರ ಗುಂಪೊಂದು ಸಿಖ್ ಯುವತಿಯನ್ನು ಅಪಹರಣ ಮಾಡಿ ಬಲವಂತವಾಗಿ ಮದುವೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 8 ಮಂದಿಯನ್ನು ಬಂಧಿಸಿದ್ದಾರೆ.
ಈ ಪ್ರಕರಣಕ್ಕೆ ಒತ್ತಡ ಹೆಚ್ಚುತ್ತಿದ್ದಂತೆಯೇ ಯುವತಿಯನ್ನು ಆಕೆಯ ಮನೆಗೆ ಕಳುಹಿಸಿದ್ದರು. ಪಂಜಾಬ್ ಪ್ರಾಂತ್ಯದ ನಂಕನಾ ಸಾಹಿಬ್ ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಟು ಮಂದಿ ಆರೋಪಿಯನ್ನು ಬಂಧಿಸಿದ್ದಾರೆ. ಗುರುವಾರ ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಪಾಕಿಸ್ತಾನದ ಜೊತೆ ಭಾರತದಲ್ಲೂ ವಿರೋಧ ವ್ಯಕ್ತವಾಗಿತ್ತು. ಅಲ್ಲದೆ ಕೇಂದ್ರ ಸರ್ಕಾರ ಶುಕ್ರವಾರ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನ ಸರ್ಕಾರದ ಜೊತೆ ಮಾತುಕತೆ ನಡೆಸಿ ಶೀಘ್ರದಲ್ಲೇ ಕ್ರಮಕೈಗೊಳ್ಳಿ ಎಂದು ಒತ್ತಾಯಿಸಿದೆ. ಇದನ್ನೂ ಓದಿ: ಪಾಕ್‍ನಲ್ಲಿ ಸಿಖ್ ಯುವತಿಯ ಕಿಡ್ನಾಪ್ – ಮತಾಂತರಗೊಳಿಸಿ ಬಲವಂತವಾಗಿ ಮದುವೆ
ವರದಿಗಳ ಪ್ರಕಾರ, ಯುವತಿಯನ್ನು ಮದುವೆಯಾದ ಮೊಹಮ್ಮದ್ ಹಸನ್ ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಹಫೀಸ್ ಸಯ್ಯದ್ ಸಂಘಟನೆಯಾದ ಜಮಾತ್ ಉದ್-ದವಾ ಸದಸ್ಯ ಎಂಬು ಹೇಳಲಾಗುತ್ತಿದೆ.
ನಡೆದಿದ್ದೇನು?
ಪಾಕಿಸ್ತಾನದಲ್ಲಿ ಯುವಕರ ಗುಂಪು ಸಿಖ್ ಯುವತಿಯನ್ನು ಅಪಹರಣ ಮಾಡಿ ಬಲವಂತವಾಗಿ ಮತಾಂತರಗೊಳಿಸಿ ಮದುವೆ ಮಾಡಿದ್ದಾರೆ. ಈ ವಿಷಯದ ಕುರಿತು ಯುವತಿಯ ಕುಟುಂಬಸ್ಥರು ಪ್ರಧಾನಿ ಇಮ್ರಾನ್ ಖಾನ್ ಅವರ ಮೊರೆ ಹೋಗಿದ್ದರು. ಗುರುವಾರ ಶಿರೋಮಣಿ ಅಕಾಲಿ ದಳ ಶಾಸಕ ಮಂಜಿಂದರ್ ಎಸ್ ಸಿರ್ಸಾ ಅವರು ವಿಡಿಯೋವನ್ನು ಹಂಚಿಕೊಂಡಿದ್ದರು. ಈ ವಿಡಿಯೋದಲ್ಲಿ ಯುವತಿಯ ಕುಟುಂಬಸ್ಥರು, ತನ್ನ ಸಹೋದರ ಹಾಗೂ ತಂದೆಯನ್ನು ಗುಂಡಿಕ್ಕಿ ಕೊಲೆ ಮಾಡುವುದಾಗಿ ಬೆದರಿಸಿ ಯುವತಿಯನ್ನು ಬಲವಂತವಾಗಿ ಮತಾಂತರಗೊಳಿಸಿದ್ದಾರೆ ಎಂದು ಆರೋಪಿಸಿದ್ದರು.
Sikhs of Pakistan seek help from @ImranKhanPTI
I urge @narendramodi Ji & @DrSJaishankar Ji to raise this issue at global level bcos forced conversions happening in Pakistan have angered all the Sikhs
This issue must be taken up at @UN as it threatens Sikhs freedom of religion pic.twitter.com/lsDsKg4ZHZ
— Manjinder Singh Sirsa (@mssirsa) August 29, 2019
ಗುರುವಾರ ಅಪಹರಣ ಆದ ಯುವತಿ ನನ್ನ ಸಹೋದರಿ. ಇಸ್ಲಾಂ ಧರ್ಮವನ್ನು ಒಪ್ಪಲಿಲ್ಲ ಎಂದು ತನ್ನ ತಂದೆ ಹಾಗೂ ಸಹೋದರನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಅಲ್ಲದೆ ನನ್ನ ಸಹೋದರಿಯನ್ನು ಹಿಂತಿರುಗಿ ಕರೆದುಕೊಂಡು ಬರಲು ನಾನು ಪ್ರಧಾನಿ ಇಮ್ರಾನ್ ಖಾನ್ ಹಾಗೂ ಪಾಕಿಸ್ತಾನದ ಸೇನಾ ಮುಖ್ಯಸ್ಥ ಬಜ್ವಾ ಅವರ ಬಳಿ ಸಹಾಯ ಕೇಳುತ್ತೇನೆ ಎಂದು ಯುವತಿಯ ಸಹೋದರ ಮನ್‍ಮೋಹನ್ ಸಿಂಗ್ ಅವರು ವಿಡಿಯೋದಲ್ಲಿ ತಿಳಿಸಿದ್ದರು.