Latest

ಪಟಾಕಿ ಫ್ಯಾಕ್ಟರಿಯಲ್ಲಿ ಸ್ಫೋಟ- 8 ಸಾವು, 25 ಜನರಿಗೆ ಗಾಯ

Published

on

Share this

ಜಾರ್ಖಂಡ್: ಪಟಾಕಿ ಫ್ಯಾಕ್ಟರಿಯಲ್ಲಿ ಸ್ಫೋಟ ಸಂಭವಿಸಿದ ಪರಿಣಾಮ 8 ಮಂದಿ ಸಾವನ್ನಪ್ಪಿರುವ ದಾರುಣ ಘಟನೆ ಜಾರ್ಖಂಡ್‍ನ ಕುಮಾರ್‍ದುಬಿಯಲ್ಲಿ ನಡೆದಿದೆ.

ಫ್ಯಾಕ್ಟರಿಯ ಗೋಡೌನ್‍ನಲ್ಲಿ ಸ್ಫೋಟ ಸಂಭವಿಸಿದೆ. ಘಟನೆಯಲ್ಲಿ 8 ಮಂದಿ ಸಾವನ್ನಪ್ಪಿದ್ದು, 25 ಜನರಿಗೆ ಗಾಯವಾಗಿದೆ. ಈ ಫ್ಯಾಕ್ಟರಿಯನ್ನ ಕಟ್ಟಡವೊಂದರಲ್ಲಿ ಅನಧಿಕೃತವಾಗಿ ನಡೆಸಲಾಗುತ್ತಿತ್ತು ಎಂದು ವರದಿಯಾಗಿದೆ.

ಗಾಯಾಳುಗಳನ್ನು ಕಮ್ಯುನಿಟಿ ಹೆಲ್ತ್ ಸೆಂಟರ್‍ಗೆ ರವಾನಿಸಲಾಗಿದೆ ಎಂದು ಎಸ್‍ಪಿ ಪ್ರಭಾತ್ ಕುಮಾರ್ ತಿಳಿಸಿದ್ದಾರೆ. 5 ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ದೌಡಾಯಿಸಿದ್ದು ಬೆಂಕಿ ನಂದಿಸುವ ಕಾರ್ಯ ಮಾಡಿವೆ.

ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ. ಘಟನೆಯ ನಂತರ ಮನೆಯ ಮಾಲೀಕ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಈ ಹಿಂದೆಯೂ ಈ ಕಟ್ಟಡದಲ್ಲಿ ಸಣ್ಣ ಪುಟ್ಟ ಸ್ಫೋಟ ಸಂಭವಿಸಿದ್ದವು. ಆದ್ರೆ ಆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿರಲಿಲ್ಲ ಎಂದು ಸ್ಥಳೀಯ ನಿವಾಸಿಗಳು ಹೇಳಿದ್ದಾರೆ.

ಈ ಪ್ರದೇಶ ಬಂಗಾಳದ ಗಡಿಗೆ ಹತ್ತಿರದಲ್ಲಿದೆ. ಈ ಪ್ರದೇಶದಲ್ಲಿ ಹಲವಾರು ಪಟಾಕಿ ಫ್ಯಾಕ್ಟರಿಗಳನ್ನ ಅನಧಿಕೃತವಾಗಿ ನಡೆಸಲಾಗ್ತಿದೆ. ಇಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಹಾಗೂ ಹತ್ತಿರದ ನಿವಾಸಿಗಳಿಗೆ ಇದರಿಂದ ಅಪಾಯವಿದ್ದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಈ ಅನಧಿಕೃತ ಫ್ಯಾಕ್ಟರಿಯಲ್ಲಿ ಕೆಲಸ ಮಾಡುವ ಬಹುತೇಕ ಸಾರ್ಮಿಕರು ಬಂಗಾಳದಿಂದ ಬಂದವರು ಎಂದು ಸ್ಥಳೀಯ ನಿವಾಸಿಯೊಬ್ಬರು ಹೇಳಿದ್ದಾರೆ.

Click to comment

Leave a Reply

Your email address will not be published. Required fields are marked *

Advertisement
Advertisement