ನವದೆಹಲಿ: ಸದಾ ವಿವಾದಗಳಿಂದ ಸದ್ದು ಮಾಡುವ ಸ್ಪೈಸ್ ಜೆಟ್ (Spice Jet) ಏರ್ಲೈನ್ಸ್ ಈಗ ಮತ್ತೊಮ್ಮೆ ಪ್ರಯಾಣಿಕರ ಕೆಂಗಣ್ಣಿಗೆ ಗುರಿಯಾಗಿದೆ. ಪುಣೆಯಿಂದ (Pune) ಅಹಮದಾಬಾದ್ ತೆರಳಬೇಕಿದ್ದ ವಿಮಾನ ತಡವಾಗಿದ್ದು, ಎಂಟೂವರೆ ಗಂಟೆಗಳ ಕಾಲ ಕಾಯಿಸಿದ್ದಲ್ಲದೇ ಕಡೆ ಕ್ಷಣದಲ್ಲಿ ರದ್ದು ಮಾಡಿ ಹೊಸ ಟೀಕೆಗೆ ಕಾರಣವಾಗಿದೆ.
ಬುಧವಾರ ರಾತ್ರಿ 8:30ಕ್ಕೆ ಪುಣೆಯಿಂದ ಅಹಮದಾಬಾದ್ಗೆ ತೆರಳಬೇಕಿದ್ದ ವಿಮಾನ ತಾಂತ್ರಿಕ ಕಾರಣಗಳಿಂದ (Technical Issues) ಎಂಟೂವರೆ ಗಂಟೆಗಳ ಕಾಲ ತಡ ಮಾಡಿತ್ತು. ಬಳಿಕ ಗುರುವಾರ ಮುಂಜಾನೆ 4:30ಕ್ಕೆ ಟೇಕ್ ಆಫ್ ಮಾಡಲಾಗಿತ್ತು. ಆದರೆ ದಟ್ಟವಾದ ಮಂಜಿನ ಕಾರಣ ಹೇಳಿ 10 ನಿಮಿಷಗಳಲ್ಲಿ ಮತ್ತೆ ಲ್ಯಾಂಡ್ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ʼಸರ್ʼ, ʼಮೇಡಂʼ ಅನ್ನುವಂತಿಲ್ಲ.. ʼಟೀಚರ್ʼ ಎನ್ನಬೇಕು – ಕೇರಳ ಮಕ್ಕಳ ಹಕ್ಕುಗಳ ಆಯೋಗ
Advertisement
Advertisement
ಸ್ಪೈಸ್ ಜೆಟ್ ವರ್ತನೆಯಿಂದ ಪ್ರಯಾಣಿಕರು ಗರಂ ಆಗಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ಪ್ರಯಾಣಿಕರೊಬ್ಬರು, ತಾಂತ್ರಿಕ ಕಾರಣದಿಂದ ವಿಮಾನ 4 ಗಂಟೆಗಳ ಕಾಲ ವಿಳಂಬವಾಗಿದೆ ಮತ್ತು 12:30ಕ್ಕೆ ಹೊರಡಲಿದೆ ಎಂದು ಏರ್ಲೈನ್ಸ್ನ ನೆಲದ ಸಿಬ್ಬಂದಿ ನಮಗೆ ತಿಳಿಸಿದ್ದರು. ಬಳಿಕ ವಿಮಾನ ಮಧ್ಯರಾತ್ರಿ 3.30ರ ಸುಮಾರಿಗೆ ಟೇಕ್ಆಫ್ ಆಗಲಿದೆ ಎಂದು ಹೇಳಿದರು. ಆದರೆ ಮುಂಜಾನೆ 4.30ರ ವೇಳೆಗೆ ಟೇಕ್ ಆಫ್ ಮಾಡಲಾಯಿತು ಎಂದು ಹೇಳಿದರು.
Advertisement
ವಿಮಾನ ಹಾರಾಟ ಪ್ರಾರಂಭವಾದರೂ ಅದು ನಿಗದಿತ ಎತ್ತರಕ್ಕೆ ಹಾರಲಿಲ್ಲ. ವಿಮಾನದಲ್ಲಿ ದೊಡ್ಡ ಪ್ರಮಾಣದಲ್ಲಿ ಜರ್ಕ್ ಕಂಡು ಬಂತು. ಇದಾದ 7 ನಿಮಿಷಕ್ಕೆ ಪುಣೆಯಲ್ಲಿ ಮರಳಿ ಲ್ಯಾಂಡ್ ಮಾಡಲಾಯಿತು. ಬಳಿಕ ತಾಂತ್ರಿಕ ಸಮಸ್ಯೆ ಕಂಡು ಬಂದಿದೆ ಎಂದು ವಿಮಾನವನ್ನು ರದ್ದು ಮಾಡಲಾಯಿತು. ಟಿಕೆಟ್ ಹಣವನ್ನು ಮರಳಿಸುವ ಭರವಸೆ ನೀಡಿದ್ದಾರೆ ಎಂದು ಪ್ರಯಾಣಿಕರೊಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ದೆಹಲಿ ಬಳಿಕ ಕರ್ನಾಟಕದಲ್ಲೂ ಆಪ್ `ಟಿಕೆಟ್ ಫಾರ್ ಸೇಲ್’ – ಸುಕೇಶ್ ಚಂದ್ರಶೇಖರ್ ಗಂಭೀರ ಆರೋಪ
Advertisement
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k