ಲಕ್ನೋ: ಕ್ರಿಕೆಟ್ ನೋಡಲು ಲಕ್ನೋಗೆ ಬಂದ ಅಫ್ಘಾನಿಸ್ತಾನದ ಕ್ರಿಕೆಟ್ ಅಭಿಮಾನಿಯೊಬ್ಬರು ಉಳಿದುಕೊಳ್ಳಲು ಹೋಟೆಲ್ ರೂಮ್ ಸಿಗದೆ ಪರದಾಡಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಲಕ್ನೋದಲ್ಲಿ ನಡೆಯುತ್ತಿರುವ ಅಫ್ಘಾನಿಸ್ತಾನ ಮತ್ತು ವೆಸ್ಟ್ ಇಂಡೀಸ್ ನಡುವಿನ ಏಕದಿನ ಸರಣಿಯನ್ನು ವೀಕ್ಷಿಸಲು ಅಫ್ಘಾನಿಸ್ತಾದಿಂದ ಶೇರ್ ಖಾನ್ ಬಂದಿದ್ದಾರೆ. ಇವರ ಎತ್ತರ 8 ಅಡಿ 2 ಇಂಚು ಇರುವ ಕಾರಣ ಅವರಿಗೆ ಹೋಟೆಲಿನವರು ರೂಮ್ ನೀಡಿರಲಿಲ್ಲ.
Advertisement
Advertisement
ಕ್ರಿಕೆಟ್ ನೋಡಲು ಅಫ್ಘಾನಿಸ್ತಾನದಿಂದ ಭಾರತಕ್ಕೆ ಬಂದು ಹಲವಾರು ಹೋಟೆಲ್‍ಗೆ ತೆರಳಿ ರೂಮ್ ಕೇಳಿದ್ದಾರೆ. ಆದರೆ ಅವರ ಎತ್ತರ ನೋಡಿ ಯಾವ ಹೋಟೆಲ್ ಮಾಲೀಕನು ಉಳಿದುಕೊಳ್ಳಲು ರೂಮ್ ನೀಡಿಲ್ಲ. ಇದರಿಂದ ಬೇಸತ್ತ ಶೇರ್ ಖಾನ್ ನೆರವು ನೀಡುವಂತೆ ಪೊಲೀಸರ ಮೊರೆ ಹೋಗಿದ್ದಾರೆ. ಶೇರ್ ಖಾನ್ ನೆರೆವಿಗೆ ಬಂದ ಪೊಲೀಸರು ನಂತರ ನಾಕಾ ಪ್ರದೇಶದಲ್ಲಿ ರೂಮ್ ಮಾಡಿಕೊಟ್ಟು ತಂಗಲು ವ್ಯವಸ್ಥೆ ಮಾಡಿದ್ದಾರೆ.
Advertisement
ಈ ವೇಳೆ ಈ ಹೋಟೆಲ್‍ನಲ್ಲಿ ಎಂಟು ಆಡಿ ಎತ್ತರದ ಮನುಷ್ಯ ಬಂದಿದ್ದಾನೆ ಎಂದು ತಿಳಿದು ಹೋಟೆಲ್‍ಗೆ ಜನರು ತಂಡ ತಂಡವಾಗಿ ಬಂದು ಅವರನ್ನು ನೋಡಿಕೊಂಡು ಹೋಗಿದ್ದಾರೆ. ಒಂದು ರಾತ್ರಿ ಅಲ್ಲೇ ತಂಗಿದ್ದ ಶೇರ್ ಖಾನ್ ಅನ್ನು ನೋಡಲು ಬೆಳಗ್ಗೆ ಸಮಯದಲ್ಲಿ ಸುಮಾರು 200 ಜನ ಹೋಟೆಲ್ ಬಳಿ ಬಂದಿದ್ದರು. ಹೀಗೆ ಜನ ಬಂದಿದ್ದರಿಂದ ನಮಗೆ ಬಹಳ ಕಷ್ಟವಾಯಿತು ಎಂದು ಹೋಟೆಲ್ ಮಾಲೀಕ ರಾನು ಹೇಳಿದ್ದಾರೆ.
Advertisement
ಹೋಟೆಲ್ ಬಳಿ ಶೇರ್ ಖಾನ್ ನೋಡಲು ಜನ ಬರುತ್ತಿದ್ದಾರೆ ಎಂದು ತಿಳಿದ ಪೊಲೀಸರು ತಕ್ಷಣ ಹೋಟೆಲ್ ಬಳಿ ಬಂದು ಅವರನ್ನು ಕರೆದುಕೊಂಡು ಹೋಗಿ ಅಫ್ಘಾನಿಸ್ತಾನ ಮತ್ತು ವೆಸ್ಟ್ ಇಂಡೀಸ್ ಪಂದ್ಯ ನಡೆಯುತ್ತಿದ್ದ ಎಕಾನಾ ಮೈದಾನಕ್ಕೆ ಬಿಟ್ಟು ಬಂದಿದ್ದಾರೆ. ಶೇನ್ ಖಾನ್ ನಾನು ಇನ್ನೂ ನಾಲ್ಕೈದು ದಿನ ಭಾರತದಲ್ಲೇ ಇರುತ್ತೇನೆ ಎಂದು ಹೇಳಿದ್ದಾರೆ.