ಪಾಟ್ನಾ: ಬಿಹಾರದ ನಳಂದ ಜಿಲ್ಲೆಯ ಶಿಟ್ಲಾ ಮಾತಾ ಮಂದಿರದಲ್ಲಿ (Sheetlaashtami Temple) ಇಂದು (ಮಂಗಳವಾರ) ಭೀಕರ ಕಾಲ್ತುಳಿತ (Stampede) ಸಂಭವಿಸಿದೆ. 8 ಭಕ್ತರು ಸಾವನ್ನಪ್ಪಿದ್ದು, 12ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಮೃತರೆಲ್ಲರೂ ಮಹಿಳೆಯರಾಗಿದ್ದಾರೆ.
#WATCH | Bihar: A stampede occurred during puja at Maa Sheetla Mandir in Maghra village of Nalanda. Injuries reported, deaths feared. More details awaited.
Visuals from the spot as an ambulance reaches here. pic.twitter.com/1UU0kwN6OA
— ANI (@ANI) March 31, 2026
ನಳಂದ ಜಿಲ್ಲೆಯ ಬಿಹಾರ (Bihar) ಶರೀಫ್‌ನಿಂದ ಸುಮಾರು 5 ಕಿಲೋಮೀಟರ್ ದೂರದಲ್ಲಿರುವ ಮಾಘ್ರಾ ಗ್ರಾಮದಲ್ಲಿರುವ ಶೀತಲಾದೇವಿ (ಶೀತ್ಲಾಷ್ಟಮಿ) ದೇವಾಲಯದಲ್ಲಿ ಕಾಲ್ತುಳಿತ ಸಂಭವಿಸಿದೆ.

ಇಂದು ಚೈತ್ರ ಮಾಸದ ಕೊನೆಯ ಮಂಗಳವಾರವಾದ್ದರಿಂದ, ದೇವಾಲಯದಲ್ಲಿ ಅಪಾರ ಸಂಖ್ಯೆಯ ಭಕ್ತರು ಜಮಾಯಿಸಿದ್ದರು. ಇದನ್ನೂ ಓದಿ: 900 ಕೆಜಿ ಬಂಕರ್ ಬಸ್ಟರ್ ಬಾಂಬ್‌ನಿಂದ ಅಮೆರಿಕ ದಾಳಿ – ಇರಾನ್‌ನ ಇಸ್ಫಹಾನ್‌ನಲ್ಲಿ ಸರಣಿ ಸ್ಫೋಟ!
ಸದ್ಯ ಘಟನಾ ಸ್ಥಳದಿಂದ ಫೋಟೋಗಳು ಹಲವಾರು ಮಹಿಳೆಯರು ನೆಲದ ಮೇಲೆ ಪ್ರಜ್ಞಾಹೀನರಾಗಿ ಬಿದ್ದಿರುವುದನ್ನು ತೋರಿಸಿವೆ. ಇದನ್ನೂ ಓದಿ: ಅಮೆರಿಕ ಏರ್‌ಸ್ಟ್ರೈಕ್ – ಮಾನವೀಯ ನೆರವು ಸಂಗ್ರಹಿಸಲು ಭಾರತಕ್ಕೆ ತೆರಳುತ್ತಿದ್ದ ವಿಮಾನಕ್ಕೆ ಹಾನಿ

