ಕೌಲಾಲಂಪುರ್: ನಗರದ ಕ್ಯಾಂಪ್ ಪ್ರದೇಶದ ಬಳಿ ಬೆಳಗ್ಗಿನ ಜಾವ ಸಂಭವಿಸಿದ ಭೂಕುಸಿತಕ್ಕೆ (Landslide) 8 ಮಂದಿ ಬಲಿಯಾಗಿದ್ದು, 50ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ.
Advertisement
ಮಲೇಷ್ಯಾದ (Malaysia) ರಾಜಧಾನಿ ಕೌಲಾಲಂಪುರ್‌ನ (KualaLumpur) ಕ್ಯಾಂಪ್ ಪ್ರದೇಶದಲ್ಲಿ ಬೆಳಗ್ಗಿನ ಜಾವ 3 ಗಂಟೆ ಸುಮಾರಿಗೆ ಭೂಕುಸಿತ ಸಂಭವಿಸಿದೆ. ಕ್ಯಾಂಪಿಂಗ್ ಪ್ರದೇಶವಾಗಿರುವ ಸೆಲಂಗೋರ್‌ನಲ್ಲಿ ಬೆಳಗ್ಗಿನ ಜಾವ 3 ಗಂಟೆ ಸುಮಾರಿಗೆ ಭೂಕುಸಿತ ಸಂಭವಿಸಿದ್ದು, ಈಗಾಗಲೇ 8 ಮಂದಿಯ ಮೃತ ದೇಹ ಸಿಕ್ಕಿದೆ. 50ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ ಎಂದು ಅಗ್ನಿಶಾಮಕ ದಳ ಮತ್ತು ರಕ್ಷಣಾ ಪಡೆ ಮಾಹಿತಿ ಹಂಚಿಕೊಂಡಿದೆ. ಇದನ್ನೂ ಓದಿ: ಹೊಸ ವರ್ಷಾಚರಣೆಗೆ ಹೆಚ್ಚಿನ ಸಮಯ ಫಿಕ್ಸ್? – ಮಧ್ಯರಾತ್ರಿ 2 ಗಂಟೆವರೆಗೂ ಅವಕಾಶ ಸಾಧ್ಯತೆ
Advertisement
Kejadian Tanah Runtuh Fathers Organik Farms Gohtong
Pasukan Khas Pertahanan Awam (PASPA) dan APM Hulu Selangor bersama membantu pasukan keselamatan untuk bersama dalam operasi mencari dan menyelamat mangsa tanah runtuh di Fathers Organik Farms Gohtong, Batang Kali, pic.twitter.com/2WmMmBH9lq
— Official Angkatan Pertahanan Awam Malaysia (@APMtwiter) December 16, 2022
Advertisement
ಕ್ಯಾಂಪ್ ಪ್ರದೇಶದ 30 ಮೀಟರ್ ಎತ್ತರದಿಂದ ಭೂಕುಸಿತ ಸಂಭವಿಸಿದ್ದು, ಒಂದು ಎಕರೆಯಷ್ಟು ಪ್ರದೇಶದಲ್ಲಿ ಮಣ್ಣು ಆವರಿಸಿದೆ. 79ಕ್ಕೂ ಅಧಿಕ ಮಂದಿ ಭೂಕುಸಿತ ಸಂಭವಿಸಿದ ಪ್ರದೇಶದಲ್ಲಿ ಸಿಲುಕಿಕೊಂಡಿದ್ದರು. ಈವರೆಗೆ 23ಕ್ಕೂ ಅಧಿಕ ಜನರನ್ನು ರಕ್ಷಿಸಲಾಗಿದೆ. ಮೂವರಿಗೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಹೆಚ್ಚಿದೆ. ರಕ್ಷಣಾ ಕಾರ್ಯಚರಣೆ ಭರದಿಂದ ಸಾಗಿದೆ. ಇದನ್ನೂ ಓದಿ: ಚಿಕ್ಕಮಗಳೂರು ಸರ್ಕಾರಿ ಹಾಸ್ಟೆಲ್‌ನಲ್ಲಿ PUC ವಿದ್ಯಾರ್ಥಿನಿಗೆ ಹೆರಿಗೆ