ಮುಂಬೈ: ಮಹಾರಾಷ್ಟ್ರದ ಭಂಡಾರ ಜಿಲ್ಲೆಯ ಆರ್ಡಿನೆನ್ಸ್ ಕಾರ್ಖಾನೆಯಲ್ಲಿ (ordnance factory) (ಮಿಲಿಟರಿ ಶಸ್ತ್ರಾಸ್ತ್ರಗಳನ್ನು ತಯಾರಿಸುವ ಕಾರ್ಖಾನೆ) ಸಂಭವಿಸಿದ ಭಾರೀ ಸ್ಫೋಟದಲ್ಲಿ (Massive Explosion) ಕನಿಷ್ಠ 8 ಮಂದಿ ಸಾವನ್ನಪ್ಪಿದ್ದು, 7 ಮಂದಿ ಗಾಯಗೊಂಡಿರುವುದಾಗಿ ಕೇಂದ್ರ ಸಚಿವ ನಿತಿನ್ ಗಡ್ಕರಿ (Nitin gadkari) ತಿಳಿಸಿದ್ದಾರೆ.
Advertisement
ನಾಗ್ಪುರ ಸಮೀಪದಲ್ಲಿರುವ ಕಾರ್ಖಾನೆಯಲ್ಲಿ ಇಂದು (ಶುಕ್ರವಾರ) ಬೆಳಗ್ಗೆ 10:30ರ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ. ಸ್ಥಳದಲ್ಲಿ ರಕ್ಷಣಾ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಅಮೆರಿಕದ ಇತಿಹಾಸದಲ್ಲೇ ಬೃಹತ್ ಗಡಿಪಾರು ಕಾರ್ಯಾಚರಣೆ – 538 ಅಕ್ರಮ ವಲಸಿಗರು ಅರೆಸ್ಟ್, ನೂರಾರು ಮಂದಿ ಗಡಿಪಾರು
Advertisement
Advertisement
ಪ್ರಾಥಮಿಕ ವರದಿಗಳ ಪ್ರಕಾರ, ಕಾರ್ಖಾನೆಯ ಎಲ್‌ಟಿಪಿ ವಿಭಾಗದಲ್ಲಿ ಸ್ಫೋಟ ಸಂಭವಿಸಿದೆ. ಸ್ಫೋಟದ ಸಮಯದಲ್ಲಿ ಛಾವಣಿ ಕುಸಿದಿದ್ದು ಅದರ ಅಡಿಯಲ್ಲಿ 12 ಮಂದಿ ಸಿಲುಕಿದ್ದರು. ಈ ಪೈಕಿ ಇಬ್ಬರನ್ನು ರಕ್ಷಿಸಲಾಗಿದ್ದು, ಉಳಿದವರು ಅವಶೇಷಗಳ ಅಡಿಯಲ್ಲಿ ಸಿಲುಕಿದ್ದಾರೆ ಎನ್ನಲಾಗಿದೆ.
Advertisement
ಇನ್ನೂ ಸ್ಫೋಟದ ತೀವ್ರತೆ ಎಷ್ಟಿತ್ತೆಂದರೆ ಸುಮಾರು 5 ಕಿಮೀ ವರೆಗೂ ಶಬ್ಧ ಕೇಳಿಸಿದೆ. ಸ್ಥಳದಲ್ಲಿ ದಟ್ಟ ಹೊಗೆ ಮುಗಿಲೆತ್ತರಕ್ಕೆ ವ್ಯಾಪಿಸಿರುವುದು ವಿಡಿಯೋ, ಫೋಟೋಗಳಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಮಂಡ್ಯದಲ್ಲಿ ಇಂದಿನಿಂದ 5 ದಿನ ಫಲಪುಷ್ಪ ಪ್ರದರ್ಶನ – ಪ್ರತಿ ದಿನ ರಾತ್ರಿ 10 ಗಂಟೆವರೆಗೆ ಪ್ರವೇಶ
ಈಗಾಗಲೇ ಅಗ್ನಿಶಾಮಕ ದಳ, ವೈದ್ಯಕೀಯ ತಂಡಗಳು ಸ್ಥಳಕ್ಕೆ ಧಾವಿಸಿದ್ದು ರಕ್ಷಣಾ ಕಾರ್ಯ ನಡೆಯುತ್ತಿದೆ ಎಂದು ಭಂಡಾರ ಜಿಲ್ಲೆಯ ಜಿಲ್ಲಾಧಿಕಾರಿ ಸಂಜಯ್ ಕೋಲ್ಟೆ ತಿಳಿಸಿದ್ದಾರೆ. ಇದನ್ನೂ ಓದಿ: ಇನ್‌ಸ್ಟಾಗ್ರಾಂ ಪ್ರೀತಿ ತಂದ ಫಜೀತಿ – ಪತಿ ಬಿಟ್ಟು ಬಂದಿದ್ದ ಗೃಹಿಣಿ ಬಾಡಿಗೆ ಮನೆಯಲ್ಲಿ ಆತ್ಮಹತ್ಯೆ