Advertisements

ದಟ್ಟ ಮಂಜಿನಿಂದ 50 ವಾಹನಗಳ ನಡ್ವೆ ಸರಣಿ ಅಪಘಾತ – 8 ಮಂದಿ ಸಾವು, ಹಲವರಿಗೆ ಗಾಯ

ರೋಹ್ಟಕ್: ಮುಂಜಾನೆ ದಟ್ಟ ಮಂಜು ಆವರಿಸಿದ್ದ ಪರಿಣಾಮ ಸುಮಾರು 50 ವಾಹನಗಳ ನಡುವೆ ಸರಣಿ ಅಪಘಾತ ಸಂಭವಿಸಿ, 8 ಮಂದಿ ಸಾವನ್ನಪ್ಪಿ ಹಲವು ಮಂದಿ ಗಾಯಗೊಂಡಿರುವ ಘಟನೆ ಹರಿಯಾಣದ ರೋಹ್ಟಕ್ – ರೆವಾರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

Advertisements

ಸರಣಿ ಅಪಘಾತಕ್ಕೆ ಮುಂಜಾನೆ ದಟ್ಟ ಮಂಜು ಆವರಿಸಿದ್ದೆ ಕಾರಣ ಎಂದು ತಿಳಿದು ಬಂದಿದೆ. ಹೆದ್ದಾರಿಯಲ್ಲಿ ವೇಗವಾಗಿ ಚಲಿಸುತ್ತಿದ್ದ ವಾಹನ ನಡುವೆ ಸರಣಿ ಅಪಘಾತ ನಡೆದ ಪರಿಣಾಮ ಹೆಚ್ಚಿನ ಜೀವ ಹಾನಿಯಾಗಿದೆ. ಕಾರು, ಬಸ್ಸು, ಲಾರಿ ಹಾಗೂ ಶಾಲಾ ಬಸ್ ಸೇರಿದಂತೆ ಹಲವು ವಾಹನಗಳ ನಡುವೆ ಅಪಘಾತ ಸಂಭವಿದ್ದು, ಗಾಯಗೊಂಡವರನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸುವ ಕಾರ್ಯ ನಡೆದಿದೆ. ಘಟನೆಯಲ್ಲಿ ಮೃತ ಪಟ್ಟಿರುವ 8 ಮಂದಿಯಲ್ಲಿ 6 ಮಂದಿ ಮಹಿಳೆಯರು ಎನ್ನುವ ಮಾಹಿತಿ ಲಭಿಸಿದ್ದು, ಗಾಯಗೊಂಡವರ ಸಂಖ್ಯೆ ತಿಳಿದು ಬಂದಿಲ್ಲ.

Advertisements

ಸರಣಿ ಅಪಘಾತ ನಡೆದ ಪರಿಣಾಮ ಮೃತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದ್ದು, ಹೆದ್ದಾರಿಯಲ್ಲಿ ವಾಹನ ಸಂಚಾರ ನಿಧಾನ ಗತಿಯಲ್ಲಿ ಸಾಗಿದೆ. ಕಳೆದ ಕೆಲ ದಿನಗಳಿಂದ ಉತ್ತರ ಭಾರತ ಶೀತ ಗಾಳಿಗೆ ತತ್ತರಿಸಿ ಹೋಗಿದ್ದು, ಹರಿಯಾಣದ ಕಾರ್ನಾಲ್ ಪ್ರದೇಶದಲ್ಲಿ 0 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Advertisements
Advertisements
Exit mobile version