ಅಂಡರ್‌ಗ್ರೌಂಡ್‌ನಲ್ಲಿ ಕಂತೆ ಕಂತೆ ನೋಟು ಬಚ್ಚಿಟ್ಟಿದ್ದ ಉದ್ಯಮಿ – ಇವನ ಆಸ್ತಿ ಬಗ್ಗೆ ಮಾಹಿತಿ ನೀಡಿದ್ರೆ 10,000 ಬಹುಮಾನ

Public TV
1 Min Read
shankar rai 1

ಭೋಪಾಲ್: ಮಧ್ಯಪ್ರದೇಶದ ಉದ್ಯಮಿಯೊಬ್ಬರ ಮನೆ ಮೇಲೆ ಆದಾಯ ತೆರಿಗೆ ಇಲಾಖೆ (ಐಟಿ) ಅಧಿಕಾರಿಗಳು ದಾಳಿ ನಡೆಸಿದ್ದು, ಬರೋಬ್ಬರಿ 8 ಕೋಟಿಯನ್ನು ವಶಪಡಿಸಿಕೊಂಡಿದ್ದಾರೆ. ಕಂತೆ ಕಂತೆ ಹಣವನ್ನು ಬ್ಯಾಗ್‌ನಲ್ಲಿ ತುಂಬಿ ಮನೆಯ ಸುರಂಗದ ವಾಟರ್‌ ಟ್ಯಾಂಕ್‌ನಲ್ಲಿ ಬಚ್ಚಿಡಲಾಗಿತ್ತು.

ಅಧಿಕಾರಿಗಳು ಕಂತೆ ಕಂತೆ ನೋಟುಗಳನ್ನು ವಶಕ್ಕೆ ಪಡೆದು ಒಣಗಿಸುತ್ತಿರುವ ದೃಶ್ಯದ ವೀಡಿಯೋ ಎಲ್ಲೆಡೆ ವೈರಲ್‌ ಆಗಿದೆ. ಉದ್ಯಮಿ ಮನೆಯಲ್ಲಿ 5 ಕೋಟಿ ರೂ. ಮೌಲ್ಯದ ಚಿನ್ನಾಭರಣಗಳನ್ನು ಸಹ ವಶಕ್ಕೆ ಪಡೆಯಲಾಗಿದೆ. ಇದನ್ನೂ ಓದಿ: ಕುತ್ತಿಗೆ ಮೇಲೆ ಮೂಡಿರುವ ಲವ್ ಬೈಟ್ ಫೋಟೋ ಬಗ್ಗೆ ಜಾಕ್ವೆಲಿನ್ ಹೇಳಿದ್ದೇನು?

shankar rai

ದಾಮೋಹ್‌ ಜಿಲ್ಲೆಯ ಉದ್ಯಮಿ ಶಂಕರ್‌ ರೈ ಮತ್ತು ಆತನ ಕುಟುಂಬದವರ ಮನೆಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಉದ್ಯಮಿ ಮನೆಯಿಂದ ವಶಕ್ಕೆ ಪಡೆಯಲಾದ ಅಘೋಷಿತ 8 ಕೋಟಿಯಲ್ಲಿ 1 ಕೋಟಿ ನಗದು ಆಗಿತ್ತು. ಅದನ್ನು ಬ್ಯಾಗ್‌ನಲ್ಲಿ ತುಂಬಿ ಸುರಂಗದ ವಾಟರ್‌ ಟ್ಯಾಂಕ್‌ನಲ್ಲಿ ಬಚ್ಚಿಡಲಾಗಿತ್ತು. ಜೊತೆಗೆ 3 ಕೆ.ಜಿ. ಚಿನ್ನಾಭರಣವನ್ನೂ ವಶಪಡಿಸಿಕೊಳ್ಳಲಾಗಿದೆ. ದಾಖಲೆಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಲಾಗುತ್ತಿದೆ.

ಉದ್ಯಮಿಯ ಮನೆ ಮೇಲೆ ಗುರುವಾರ ಸಂಜೆ 5 ಗಂಟೆ ಸಮಯದಲ್ಲಿ ದಾಳಿ ನಡೆಸಲಾಗಿತ್ತು. ಸತತ 39 ಗಂಟೆಗಳ ಕಾಲ ಅಧಿಕಾರಿಗಳು ಶೋಧ ಕಾರ್ಯಾಚರಣೆ ನಡೆಸಿದ್ದರು. ಮಧ್ಯಪ್ರದೇಶ ಅಥವಾ ಇನ್ಯಾವುದೇ ಸ್ಥಳದಲ್ಲಿರುವ ರಾಯ್‌ ಕುಟುಂಬದ ಆಸ್ತಿ ಬಗ್ಗೆ ಹೆಚ್ಚಿನ ಮಾಹಿತಿ ನೀಡುವವರಿಗೆ 10,000 ಬಹುಮಾನವನ್ನು ಇಲಾಖೆ ಘೋಷಿಸಿದೆ. ಇದನ್ನೂ ಓದಿ: ಹಿಮದಲ್ಲಿ ದೃಢವಾಗಿ ನಿಂತ ಯೋಧನಿಗೆ ಒಂದು ಸೆಲ್ಯೂಟ್ – ವೀಡಿಯೋ ವೈರಲ್

damoh

ಉದ್ಯಮಿ ಶಂಕರ್‌, ಕಾಂಗ್ರೆಸ್‌ ಬೆಂಬಲದೊಂದಿಗೆ ದಾಮೋಹ್‌ ನಗರ ಪಾಲಿಕೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಸಹೋದರ ಕಮಲ್‌ ರೈ ಈ ಹಿಂದೆ ಬಿಜೆಪಿಯ ಬೆಂಬಲದೊಂದಿಗೆ ಪಾಲಿಕೆ ಉಪಾಧ್ಯಕ್ಷರಾಗಿದ್ದರು.

Share This Article
Leave a Comment

Leave a Reply

Your email address will not be published. Required fields are marked *