– ಜಿಲ್ಲೆಯ ಜನರು ಎಚ್ಚರಿಕೆ ತಪ್ಪಬೇಡಿ ಎಂದ ಈಶ್ವರಪ್ಪ
ಶಿವಮೊಗ್ಗ: ಇಷ್ಟು ದಿನ ಗ್ರೀನ್ ಝೋನ್‍ನಲ್ಲಿದ್ದ ಶಿವಮೊಗ್ಗ ಜಿಲ್ಲೆ ಈಗ ರೆಡ್ ಝೋನ್‍ಗೆ ಬಂದಿದ್ದು, ಗುಜರಾತ್‍ನ ಅಹಮದಾಬಾದ್‍ನಿಂದ ಜಿಲ್ಲೆಗೆ ವಾಪಸ್ ಬಂದಿದ್ದ 9 ಮಂದಿ ತಬ್ಲಿಘಿಗರಲ್ಲಿ 8 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.
ಇಷ್ಟು ದಿನ ಜಿಲ್ಲಾಡಳಿತ, ತಾಲೂಕಾಡಳಿತ ಹಾಗೂ ಗ್ರಾಮ ಪಂಚಾಯ್ತಿ ಸಿಬ್ಬಂದಿ ಜಿಲ್ಲೆಯಲ್ಲಿ ಕೊರೊನಾ ವೈರಸ್ ಪ್ರಕರಣಗಳು ವರದಿಯಾಗದಂತೆ ಎಚ್ಚರಿಕೆ ವಹಿಸಿದ್ದರು. ಆದರೆ ಈಗ ಹೊರ ರಾಜ್ಯದಿಂದ ಜಿಲ್ಲೆಗೆ ವಾಪಸ್ ಬಂದಿರುವ ಮಂದಿಯಿಂದ ಜಿಲ್ಲೆಯಲ್ಲಿ ಕೊರೊನಾ ಭೀತಿ ಆರಂಭವಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಈಶ್ವರಪ್ಪನವರು ಜಿಲ್ಲೆಯಲ್ಲಿ ಕೊರೊನಾ ಸೋಂಕಿತ ಪ್ರಕರಣಗಳು ವರದಿಯಾಗಿದೆ. ಹೀಗಾಗಿ ಜಿಲ್ಲೆಯ ಜನರು ಎಚ್ಚರಿಕೆ ತಪ್ಪಬಾರದು. ಸಾಮಾಜಿಕ ಅಂತರ ಕಾಯ್ದುಕೊಂಡು ಸುರಕ್ಷಿತವಾಗಿರಿ ಎಂದು ಎಚ್ಚರಿಸಿದ್ದಾರೆ.
Advertisement
Advertisement
289 ಮಂದಿ ಹೊರ ರಾಜ್ಯಗಳಿಂದ ಜಿಲ್ಲೆಗೆ ವಾಪಸ್ ಬಂದಿದ್ದಾರೆ. ಅವರೆಲ್ಲರನ್ನೂ ಕ್ವಾರಂಟೈನ್‍ನಲ್ಲಿ ಇಡಲಾಗಿದೆ. ಕೊರೊನಾ ದೃಢಪಟ್ಟ 8 ಸೋಂಕಿತರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕ್ವಾರಂಟೈನ್‍ನಲ್ಲಿ ಇರುವ ಉಳಿದವರನ್ನು ಬೇರೆ ಬೇರೆ ಜಾಗದಲ್ಲಿ ಇರಿಸಲಾಗಿದೆ. ಅಹಮ್ಮದಾಬಾದ್‍ನಿಂದ ಬಂದವರಿಂದ ಈ ಪಾಸಿಟಿವ್ ಪ್ರಕರಣ ವರದಿಯಾಗಿದೆ. ಜನರು ಜಿಲ್ಲಾಡಳಿತದ ಸಲಹೆ, ನಿಯಮವನ್ನು ಪಾಲಿಸಿ ಸಹಕರಿಸಿ ಎಂದು ಸಚಿವರು ಹೇಳಿದ್ದಾರೆ.
Advertisement
Advertisement
ಸೋಂಕಿತರ ವಿವರ:
ರೋಗಿ 808: ಶಿವಮೊಗ್ಗದ ಶಿಕಾರಿಪುರದ 65 ವರ್ಷದ ವೃದ್ಧ. ಅಹಮದಾಬಾದ್, ಗುಜರಾತ್‍ಗೆ ಪ್ರಯಾಣಿಸಿದ್ದರು.
ರೋಗಿ 809: ಶಿವಮೊಗ್ಗದ ಶಿಕಾರಿಪುರದ 65 ವರ್ಷದ ವೃದ್ಧ. ಅಹಮದಾಬಾದ್, ಗುಜರಾತ್‍ಗೆ ಪ್ರಯಾಣಿಸಿದ್ದರು.
ರೋಗಿ-810: ಶಿವಮೊಗ್ಗ ಶಿಕಾರಿಪುರದ 18 ವರ್ಷದ ಯುವಕ. ಗುಜರಾತ್‍ನ ಅಹಮದಾಬಾದ್‍ಗೆ ಪ್ರಯಾಣ ಮಾಡಿರುವ ಹಿನ್ನೆಲೆ.
ರೋಗಿ-811: ಶಿವಮೊಗ್ಗ ಶಿಕಾರಿಪುರದ 56 ವರ್ಷದ ಪುರುಷ. ಗುಜರಾತ್‍ನ ಅಹಮದಾಬಾದ್‍ಗೆ ಪ್ರಯಾಣ ಮಾಡಿರುವ ಹಿನ್ನೆಲೆ.
ರೋಗಿ-812: ಶಿವಮೊಗ್ಗ ಶಿಕಾರಿಪುರದ 43 ವರ್ಷದ ಪುರುಷ. ಗುಜರಾತ್‍ನ ಅಹಮದಾಬಾದ್‍ಗೆ ಪ್ರಯಾಣ ಮಾಡಿರುವ ಹಿನ್ನೆಲೆ.
ರೋಗಿ-813: ಶಿವಮೊಗ್ಗ ಶಿಕಾರಿಪುರದ 25 ವರ್ಷದ ಯುವಕ. ಗುಜರಾತ್‍ನ ಅಹಮದಾಬಾದ್‍ಗೆ ಪ್ರಯಾಣ ಮಾಡಿರುವ ಹಿನ್ನೆಲೆ.
ರೋಗಿ-814: ಶಿವಮೊಗ್ಗ ತೀರ್ಥಹಳ್ಳಿಯ 27 ವರ್ಷದ ಯುವಕ. ಗುಜರಾತ್‍ನ ಅಹಮದಾಬಾದ್‍ಗೆ ಪ್ರಯಾಣ ಮಾಡಿರುವ ಹಿನ್ನೆಲೆ.
ರೋಗಿ-815: ಶಿವಮೊಗ್ಗ ಶಿಕಾರಿಪುರದ 20 ವರ್ಷದ ಯುವಕ. ಗುಜರಾತ್‍ನ ಅಹಮದಾಬಾದ್‍ಗೆ ಪ್ರಯಾಣ ಮಾಡಿರುವ ಹಿನ್ನೆಲೆ.