ಚೆನ್ನೈ: ವಿಲ್ಲುಪುರಂನಿಂದ ತೊಂಡೈರ್‌ಪೇಟ್‌ಗೆ ತೆರಳುತ್ತಿದ್ದ ಗೂಡ್ಸ್ ರೈಲಿನ (Goods Train) ಎಂಟು ಬೋಗಿಗಳು ತಮಿಳುನಾಡಿನ (Tamil Nadu) ಚೆಂಗಲ್ಪಟ್ಟು (Chengalpattu) ಬಳಿ ಹಳಿತಪ್ಪಿದ್ದು, ರೈಲು ಸೇವೆಯಲ್ಲಿ ವ್ಯತ್ಯಯ ಉಂಟಾಗಿದೆ.
38 ಬೋಗಿಗಳನ್ನು ಹೊಂದಿರುವ ರೈಲಿನಲ್ಲಿ ಕಬ್ಬಿಣದ ಅದಿರು, ಲೋಹದ ಹಾಳೆಗಳು ಮತ್ತು ಕಬ್ಬಿಣದ ರಾಡ್‌ಗಳನ್ನು ತುಂಬಿಸಲಾಗಿತ್ತು. ಚೆಂಗಲ್ಪಟ್ಟುದಿಂದ ಹೊರಟ ವೇಳೆ 38 ಬೋಗಿಗಳಲ್ಲಿ ಎಂಟು ಬೋಗಿಗಳು ಹಳಿತಪ್ಪಿವೆ. ಹಳಿ ತಪ್ಪಿದ ಸಂದರ್ಭದಲ್ಲಿ ಲೋಹದ ಸರಕುಗಳು ಉರುಳಿಬಿದ್ದಿದ್ದರಿಂದ ರೈಲ್ವೆ ಹಳಿಗಳಿಗೆ ಹಾನಿಯಾಗಿದೆ. ಇತರ ರೈಲು ಸೇವೆಗಳಲ್ಲಿ ವ್ಯತ್ಯಯ ಉಂಟಾಗಿದ್ದು, ಚೆಂಗಲ್ಪಟ್ಟು ಮತ್ತು ವಿಲ್ಲುಪುರಂನಿಂದ ತ್ವರಿತ ಪ್ರತಿಕ್ರಿಯೆ ತಂಡಗಳನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ. ಹಳಿ ತಪ್ಪಲು ಕಾರಣವೇನು ಎಂಬ ಬಗ್ಗೆ ತನಿಖೆ ನಡೆಸಲಾಗುವುದು ಎಂದು ರೈಲ್ವೆ ಇಲಾಖೆ ತಿಳಿಸಿದೆ. ಇದನ್ನೂ ಓದಿ: ಸ್ತ್ರೀಯರ ಮೇಲೆ ಆ್ಯಸಿಡ್ ದಾಳಿ – ದೇಶದಲ್ಲೇ ಬೆಂಗಳೂರು ನಂಬರ್ 1
Advertisement
Advertisement
ಅಕ್ಟೋಬರ್‌ನಲ್ಲಿ, ಎಲೆಕ್ಟ್ರಿಕ್ ಮಲ್ಟಿಪಲ್ ಯುನಿಟ್‌ನ (EMU) ನಾಲ್ಕು ಖಾಲಿ ಕೋಚ್‌ಗಳು ಚೆನ್ನೈನ ಉಪನಗರ ಅವಡಿ ಬಳಿ ಹಳಿತಪ್ಪಿತ್ತು. ಈ ಘಟನೆಯಲ್ಲಿ ಯಾವುದೇ ಗಾಯ ಅಥವಾ ಪ್ರಾಣಹಾನಿಯಾನಿ ಉಂಟಾಗಿಲ್ಲ. ರೈಲು ಅನನೂರು ಶೆಡ್‌ನಿಂದ ಹೊರಟು ಬೀಚ್ ನಿಲ್ದಾಣಕ್ಕೆ ತೆರಳುತ್ತಿದ್ದ ಸಂದರ್ಭ ಅವಡಿ ಬಳಿ ಈ ಘಟನೆ ಸಂಭವಿಸಿದೆ. ರೈಲು ಅವಡಿ ನಿಲ್ದಾಣದಲ್ಲಿ ನಿಲ್ಲದೇ ಹಿಂದೂ ಕಾಲೇಜು ನಿಲ್ದಾಣದ ಬಳಿ ಹಳಿ ತಪ್ಪಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಹಳಿ ತಪ್ಪಿದ ಗೂಡ್ಸ್ ರೈಲು – 11 ಎಕ್ಸ್‌ಪ್ರೆಸ್ ರೈಲುಗಳ ಮಾರ್ಗ ಬದಲಾವಣೆ
Advertisement