ಚಾಮರಾಜನಗರ: ವಿಷಕಾರಿ ಹಣ್ಣು ತಿಂದು ಎಂಟು ಮಕ್ಕಳು ಹಾಗೂ ಓರ್ವ ಮಹಿಳೆ ಅಸ್ವಸ್ಥಗೊಂಡ ಘಟನೆ ಚಾಮರಾಜನಗರದಲ್ಲಿ ನಡೆದಿದೆ.
ಅಸ್ವಸ್ಥಗೊಂಡವರನ್ನು ಚಿಕಿತ್ಸೆಗಾಗಿ ಚಾಮರಾಜನಗರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಕಬ್ಬು ಕಡಿಯಲು ಮಹಾರಾಷ್ಟ್ರದಿಂದ ಕಾರ್ಮಿಕರ ಮಕ್ಕಳು ಬಂದಿದ್ದರು.
ಯಳಂದೂರಿನಲ್ಲಿ ಕಾರ್ಮಿಕರು ಬೀಡುಬಿಟ್ಟಿದ್ದರು. ಜಮೀನಿನ ಬೇಲಿಯಲ್ಲಿದ್ದ ಕಾಡು ಹಣ್ಣನ್ನು ವಿಷಕಾರಿ ಎಂದು ತಿಳಿಯದೆ ತಿಂದಿರುವ ಮಕ್ಕಳು ಹಾಗೂ ಮಹಿಳೆ, ಹಣ್ಣು ತಿಂದ ಕೆಲ ಹೊತ್ತಲ್ಲೇ ವಾಂತಿ ಕಾಣಿಸಿಕೊಂಡಿತ್ತು. ವಾಂತಿಯಿಂದ ಮಕ್ಕಳು ಹಾಗೂ ಮಹಿಳೆ ಅಸ್ವಸ್ಥಗೊಂಡಿದ್ದಾರೆ.