ಮಂಗಳೂರು: ಕಂಬಳದ ಉಸೇನ್ ಬೋಲ್ಟ್ ಖ್ಯಾತಿಯ ಶ್ರೀನಿವಾಸ್ ಗೌಡ ಭಾನುವಾರ ಹೊಸ ದಾಖಲೆ ಬರೆದಿದ್ದಾರೆ. 8.78 ಸೆಕೆಂಡ್ ನಲ್ಲಿ 100 ಮೀಟರ್ ಓಡಿ ವಿಶ್ವದಾಖಲೆ ಬರೆದಿದ್ದಾರೆ. ಬಂಟ್ವಾಳದ ಕಕ್ಕೆಪದವುನಲ್ಲಿ ನಡೆದ ಕಂಬಳ ಕೂಟ ಈ ದಾಖಲೆಗೆ ಸಾಕ್ಷಿಯಾಯ್ತು.
ಸತ್ಯ-ಧರ್ಮ ಜೋಡುಕರೆ ಕಂಬಳದಲ್ಲಿ ಶ್ರೀನಿವಾಸ್ ಗೌಡ ದಾಖಲೆ ಬರೆದಿದ್ದಾರೆ, ಕೆಲ ದಿನಗಳ ಹಿಂದೆ ವೇಣೂರಿನಲ್ಲಿ ನಡೆದಿದ್ದ 8.89 ಸೆಕೆಂಡ್ ಗಳಲ್ಲಿ 100 ಮೀಟರ್ ಗುರಿಯನ್ನ ತಲುಪಿದ್ದರು. ಇದೀಗ ತಮ್ಮ ದಾಖಲೆಯನ್ನ ಬ್ರೇಕ್ ಮಾಡಿದ್ದಾರೆ.
ಕಳೆದ ವರ್ಷ 15 ಕಂಬಳಗಳಲ್ಲಿ 45 ಪದಕಗಳನ್ನ ಶ್ರೀನಿವಾಸ್ ಗೌಡರು ತಮ್ಮದಾಗಿಸಿಕೊಳ್ಳುವ ಮೂಲಕ ಚಾಂಪಿಯನ್ ಆಗಿದ್ದರು. ಮೂರು ಕಂಬಳಗಳ ನಾಲ್ಕು ವಿಭಾಗಗಳಲ್ಲಿ ಪದಕ ಗೆಲ್ಲುವ ಮೂಲಕ ದಾಖಲೆ ಬರೆದಿದ್ದರು.