ಅಬುಧಾಬಿ: ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ 8 ವಿಕೆಟ್ ಭರ್ಜರಿ ಜಯ ಪಡೆದಿದ್ದು, ಆ ಮೂಲಕ 12 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದೆ.
ಕೆಕೆಆರ್ ನೀಡಿದ 149 ರನ್‍ಗಳ ಸುಲಭ ಗುರಿಯನ್ನು ಬೆನ್ನಟ್ಟಿದ್ದ ಮುಂಬೈ ಇಂಡಿಯನ್ಸ್ ತಂಡ 16.5 ಓವರ್ ಗಳಲ್ಲೇ 2 ವಿಕೆಟ್ ಕಳೆದುಕೊಂಡು 149 ರನ್ ಗಳಿಸಿ ಜಯ ಪಡೆಯಿತು. ಪಂದ್ಯದಲ್ಲಿ 44 ಎಸೆತಗಳಲ್ಲಿ 78 ರನ್ ಸಿಡಿಸಿದ ಡಿ ಕಾಕ್ ಮುಂಬೈ ಗೆಲುವಿಗೆ ಮಹತ್ವ ಕಾಣಿಕೆ ನೀಡಿದರು. ಉಳಿದಂತೆ ನಾಯಕ ರೋಹಿತ್ ಶರ್ಮಾ 35 ರನ್ ಗಳಿಸಿದರೆ, ಸೂರ್ಯ ಕುಮಾರ್ ಯಾದವ್ 10 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದರು. 11 ಎಸೆತಗಳಲ್ಲಿ 21 ರನ್ ಗಳಿಸಿದ ಹಾರ್ದಿಕ್ ಪಾಂಡ್ಯ ಅಜೇಯರಾಗಿ ಉಳಿದರು.
Advertisement
A comprehensive win for the @mipaltan here in Abu Dhabi. They win by 8 wickets against #KKR.
Quinton de Kock remains unbeaten on 78.#Dream11IPL. pic.twitter.com/BDhMILSKI0
— IndianPremierLeague (@IPL) October 16, 2020
Advertisement
2019ರಿಂದ ಮುಂಬೈ ಇಂಡಿಯನ್ಸ್ ಪರ ಡಿ ಕಾಕ್ 7 ಅರ್ಧ ಶತಕಗಳನ್ನು ಗಳಿಸಿದರೆ, ರೋಹಿತ್ ಶರ್ಮಾ ಮತ್ತು ಸೂರ್ಯ ಕುಮಾರ್ ಯಾದವ್ ತಲಾ 4 ಅರ್ಧ ಶತಗಳನ್ನು ಗಳಿಸಿದ್ದಾರೆ.
Advertisement
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಕೆಕೆಆರ್ ತಂಡ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 149 ಗಳಿಸಿತ್ತು. ಕೋಲ್ಕತ್ತಾ ಪರ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಇಳಿದ ಕಮ್ಮಿನ್ಸ್ ಸ್ಫೋಟಕ ಅರ್ಧ ಶತಕ ಸಿಡಿದರು. 36 ಎಸೆತಗಳಲ್ಲಿ 5 ಬೌಂಡರಿ, 2 ಸಿಕ್ಸರ್ ನೆರವಿನಿಂದ 53 ರನ್ ಗಳಿಸಿ ಅಜೇಯರಾಗಿ ಉಳಿದರು. ಉಳಿದಂತೆ ಕಮ್ಮಿನ್ಸ್ ಗೆ ಉತ್ತಮ ಸಾಥ್ ನೀಡಿದ ನಾಯಕ ಇಯಾನ್ ಮಾರ್ಗನ್ 29 ಎಸೆತಗಳಲ್ಲಿ 39 ರನ್ ಗಳಸಿ ಅಜೇಯರಾಗಿ ಉಳಿದರು. ಈ ಜೋಡಿ 6ನೇ ವಿಕೆಟ್‍ಗೆ 87 ರನ್ ಕಾಣಿಕೆ ನೀಡಿತ್ತು.
Advertisement
FIFTY!
A maximum to bring up a half-century for @QuinnyDeKock69. His 3rd in #Dream11IPL 2020.
Live – https://t.co/5TECAYrHLB #Dream11IPL pic.twitter.com/ywTH2Ul5y0
— IndianPremierLeague (@IPL) October 16, 2020
ಉಳಿದಂತೆ ಆರಂಭಿಕ ಶುಭ್‍ಮನ್ ಗಿಲ್ 21 ಗಳಿಸಿದ್ದರೆ, ಬೇರೆ ಯಾವುದೇ ಆಟಗಾರ ಮುಂಬೈ ಬೌಲರ್ ಗಳ ದಾಳಿಯನ್ನು ಎದುರಿಸಲು ಯಶಸ್ವಿಯಾಗಲಿಲ್ಲ. ತ್ರಿಪಾಠಿ 7, ರಾಣಾ 5, ದಿನೇಶ್ ಕಾರ್ತಿಕ್ 4, ರುಸೇಲ್ 12 ರನ್ ಗಳಿಸಿ ನಿರಾಸೆ ಮೂಡಿಸಿದ್ದರು.
ಮುಂಬೈ ಪರ ಉತ್ತಮ ಬೌಲಿಂಗ್ ದಾಳಿ ನಡೆಸಿದ ರಾಹುಲ್ ಚಹರ್ 4 ಓವರ್ ಗಳಲ್ಲಿ 18 ರನ್ ನೀಡಿ 2 ವಿಕೆಟ್ ಪಡೆದರು. ಟ್ರೆಂಟ್ ಬೌಲ್ಟ್, ಬುಮ್ರಾ, ನಾಥನ್ ಕೌಲ್ಟರ್ ನೈಲ್ ತಲಾ 1 ವಿಕೆಟ್ ಪಡೆದರು. ಆದರೆ ನಾಥನ್ ಕೌಲ್ಟರ್ ನೈಲ್ ಪಂದ್ಯದಲ್ಲಿ 51 ರನ್ ಗಳನ್ನು ಬಿಟ್ಟುಕೊಡುವ ಮೂಲಕ ದುಬಾರಿಯಾದರು. ಯುಎಇನಲ್ಲಿ ಮುಂಬೈ ತಂಡದ ಬೌಲರ್ ಇನ್ನಿಂಗ್ಸ್ ಒಂದರಲ್ಲಿ ಅತಿ ಹೆಚ್ಚು ರನ್ ಬಿಟ್ಟುಕೊಟ್ಟ ಬೌಲರ್ ಎಂಬ ಬೇಡದ ದಾಖಲೆ ಬರೆದರು. ಈ ಹಿಂದೆ ಬೆಂಗಳೂರು ತಂಡದ ವಿರುದ್ಧ ಜೇಮ್ಸ್ ಪ್ಯಾಟಿನ್‍ಸನ್ 33 ರನ್ ನೀಡಿದ್ದರು.