– 49 ಸಾವಿರ ಮಂದಿಗೆ ಸೋಂಕು, 740 ಬಲಿ
ನವದೆಹಲಿ: ದೇಶದೆಲ್ಲೆಡೆ ಕೊರೊನಾ ಅಬ್ಬರಿಸುತ್ತಿದ್ದು, ದಿನದ ಸೋಂಕಿತರ ದಾಖಲೆ ಬರೆದಿದ್ದು, 49,310 ಮಂದಿಗೆ ಸೋಂಕು ದೃಢಪಟ್ಟಿದೆ. ಪರಿಣಾಮ ಒಟ್ಟು ಸೋಂಕಿತರ ಸಂಖ್ಯೆ 12,87,945ಕ್ಕೇರಿದೆ.
Advertisement
ದೇಶದಲ್ಲಿ ಇಂದು ಕೂಡ 740 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಪರಿಣಾಮ ಸೋಂಕಿಗೆ ಬಲಿಯಾದವರ ಸಂಖ್ಯೆ 30 ಸಾವಿರ ದಾಟಿದೆ. ಜಗತ್ತಿನ ಕೊರೊನಾ ಸಾವುಗಳ ಪಟ್ಟಿಯಲ್ಲಿ ಫ್ರಾನ್ಸ್ ದೇಶವನ್ನು ಹಿಂದಿಕ್ಕಿದ ಭಾರತ 6ನೇ ಸ್ಥಾನಕ್ಕೆ ಜಿಗಿದಿದೆ. ಕಳೆದ ವಾರ 25 ಸಾವಿರ ಇದ್ದ ಸಾವಿನ ಸಂಖ್ಯೆ 30 ಸಾವಿರ ಗಡಿದಾಟಿದೆ. ಗುರುವಾರ ಮಹಾರಾಷ್ಟ್ರದಲ್ಲಿ 298 ಮಂದಿಗೆ ಸೋಂಕಿಗೆ ಬಲಿಯಾಗಿದ್ದಾರೆ. ಒಟ್ಟಾರೆ ದೇಶದ ಸಾವಿನ ಪ್ರಕರಣಗಳಲ್ಲಿ ಶೇ.40 ರಷ್ಟು ಮಹಾರಾಷ್ಟ್ರದಿಂದಲೇ ವರದಿಯಾಗಿದೆ. ಮುಂಬೈ ನಗರದಲ್ಲಿ ಇದುವರೆಗೂ 5,930 ಮಂದಿ ಸಾವನ್ನಪ್ಪಿದ್ದಾರೆ.
Advertisement
Highest single-day spike of 49,310 cases and 740 deaths reported in India in the last 24 hours.
Total #COVID19 positive cases stand at 12,87,945 including 4,40,135 active cases, 8,17,209 cured/discharged/migrated & 30,601 deaths: Health Ministry pic.twitter.com/veE2V1JgH9
— ANI (@ANI) July 24, 2020
Advertisement
ದೇಶದಲ್ಲಿ ಚೇತರಿಕೆ ಪ್ರಮಾಣ 63.13ರಷ್ಟಿದ್ದು, ಮರಣ ಪ್ರಮಾಣ 2.41ರಷ್ಟಿದೆ. ದೇಶದ 19 ರಾಜ್ಯಗಳ ಕೊರೊನಾ ಚೇತರಿಕೆಯಲ್ಲಿ ರಾಷ್ಟ್ರೀಯ ಸರಾಸರಿಗಿಂತಲೂ ಹೆಚ್ಚಿದೆ. ಉತ್ತರಖಂಡಾ 67.99, ಹಿಮಾಚಲ ಪ್ರದೇಶ 64.72, ಲಡಾಖ್ 84.31, ಪಂಜಾಬ್ 67.86, ಚಂಡೀಗಢ 68.97, ಹರಿಯಾಣ 72.50, ಗುಜರಾತ್ 72.30, ಡಿಯು ಡಮಾನ್ 65.67, ತಮಿಳುನಾಡು 70.12, ಮಧ್ಯ ಪ್ರದೇಶ 67.47, ಬಿಹಾರ 63.95, ಮಣಿಪುರ 69.48, ಒಡಿಸ್ಸಾ 70.96, ಚತ್ತೀಸ್‍ಗಢ 71.81, ಅಂಡಮಾನ್ ನಿಕೋಬರ್ 75, ತೆಲಂಗಾಣ 78.37 ರ ಸರಾಸರಿ ಪ್ರಮಾಣದಲ್ಲಿ ಕೋವಿಡ್ ಸೋಂಕಿತರು ಚೇತರಿಸಿಕೊಳ್ಳುತ್ತಿದ್ದಾರೆ.
Advertisement
ಉಳಿದಂತೆ 4,40,135 ಮಂದಿ ಸೋಂಕಿತರು ಚೇತರಿಸಿಕೊಳ್ಳುತ್ತಿದ್ದಾರೆ. ದೇಶದಲ್ಲಿ ಇದುವರೆಗೂ 1,54,28,170 ಕೊರೊನಾ ಮಾದರಿಗಳ ಪರೀಕ್ಷೆ ನಡೆಸಲಾಗುತ್ತಿದೆ. ಜುಲೈ 23 ರಂದು ದೇಶದ್ಯಾಂತ 3,52,801 ಮಾದರಿಗಳ ಪರೀಕ್ಷೆ ನಡೆಸಲಾಗಿದೆ.
The total number of #COVID19 samples tested up to 23rd July is 1,54,28,170 including 3,52,801 samples tested yesterday: Indian Council of Medical Research (ICMR) pic.twitter.com/Qbxrxw7e0B
— ANI (@ANI) July 24, 2020