ಪಾಟ್ನಾ: ಬಿಹಾರದ ಗೋಪಾಲ್ಗಂಜ್ ನಲ್ಲಿ ಸೇತುವೆ ಉದ್ಘಾಟನೆಯಾದ 29 ದಿನದಲ್ಲಿ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿದೆ. ಸೇತುವೆ ಕೊಚ್ಚಿಕೊಂಡ ಹೋದ ಪರಿಣಾಮ ಚಂಪಾರಣ ತಿರಹುತ್ ಮತ್ತು ಸಾರಣ್ ಜಿಲ್ಲೆಗಳ ನಡುವಿನ ಸಂಪರ್ಕ ಕಡಿತಗೊಂಡಿದೆ.
ಜೂನ್ 16ರಂದು ಬಿಹಾರದ ಮುಖ್ಯಮಂತ್ರಿ ನಿತಿಶ್ ಕುಮಾರ್ ಈ ಸೇತುವೆಯನ್ನು ಉದ್ಘಾಟಿಸಿದ್ದರು. 263.47 ಕೋಟಿ ವೆಚ್ಚದಲ್ಲಿ ಈ ಸೇತುವೆಯನ್ನು ನಿರ್ಮಿಸಲಾಗಿತ್ತು. ಸೇತುವೆ ನಿರ್ಮಾಣಕ್ಕೆ ಎಂಟು ವರ್ಷ ಸಮಯ ತೆಗೆದುಕೊಂಡಿತ್ತು.
Advertisement
Advertisement
ಗಂಢಕ್ ನದಿಗೆ ಅಡ್ಡಲಾಗಿ ಗೋಪಾಲಗಂಜ್ ಜಿಲ್ಲೆಯ ಸತ್ತರಗಢ ಎಂಬಲ್ಲಿ ಈ ಸೇತುವೆಯನ್ನು ನಿರ್ಮಿಸಲಾಗಿತ್ತು. ಉದ್ಘಾಟನೆಗೊಂಡ 29 ದಿನದಲ್ಲಿಯೇ ಸೇತುವೆ ಕೊಚ್ಚಿ ಹೋಗಿರುವುದಕ್ಕೆ ವಿಪಕ್ಷಗಳು ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಕಳಪೆ ಕಾಮಗಾರಿಯ ಪ್ರತಿಫಲ ಇದಾಗಿದ್ದು, ಈ ಸಂಬಂಧ ತನಿಕೆ ನಡೆಯಬೇಕೆಂದು ವಿಪಕ್ಷಗಳು ಆಗ್ರಹಿಸಿವೆ.
Advertisement