– ಒಂದು ಪಂದ್ಯ ಇರುವಂತೆಯೇ ಸರಣಿ ಜಯ
– ದೀಪಕ್ ಚಹರ್, ಸೂರ್ಯಕುಮಾರ್ ಯಾದವ್ ಚೊಚ್ಚಲ ಅರ್ಧಶತಕ
ಕೊಲಂಬೋ: ಸೋಲಿನತ್ತ ಮುಖ ಮಾಡಿದ್ದ ಟೀಂ ಇಂಡಿಯಾ ಮೂರು ವಿಕೆಟ್ಗಳಿಂದ ಎರಡನೇ ಪಂದ್ಯವನ್ನು ಕೊನೆಯ ಓವರಿನಲ್ಲಿ ರೋಚಕವಾಗಿ ಜಯಗಳಿಸಿದೆ. ಈ ಮೂಲಕ ಇನ್ನು ಒಂದು ಪಂದ್ಯ ಇರುವಂತೆಯೇ ಏಕದಿನ ಸರಣಿಯನ್ನು ಗೆದ್ದುಕೊಂಡಿದೆ.
Advertisement
ಗೆಲ್ಲಲು 276 ರನ್ ಗಳ ಗುರಿಯನ್ನು ಪಡೆದ ಭಾರತ ಸೂರ್ಯ ಕುಮಾರ್ ಯಾದವ್, ದೀಪಕ್ ಚಹರ್ ಅವರ ಅರ್ಧಶತಕದಿಂದ 49.1 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 277 ರನ್ ಹೊಡೆದು ಜಯಗಳಿಸಿತು.
Advertisement
Just silently sits in a corner to sip some water post his batting heroics ????????????????????
What a knock tonight from Deepak Chahar ???????? #TeamIndia #SLvIND pic.twitter.com/mWr2DY1zPA
— BCCI (@BCCI) July 20, 2021
Advertisement
193 ರನ್ ಗಳಿಸಿದ್ದಾಗ ಸೂರ್ಯಕುಮಾರ್ ಯಾದವ್ 7ನೇಯವರಾಗಿ ಔಟಾದಾಗ ಭಾರತ ಸೋಲಿನತ್ತ ಮುಖಮಾಡಿತ್ತು. ಆದರೆ ಮುರಿಯದ 8ನೇ ವಿಕೆಟಿಗೆ ದೀಪಕ್ ಚಹರ್ ಮತ್ತು ಭುವನೇಶ್ವರ್ ಕುಮಾರ್ 84 ಎಸೆತಗಳಲ್ಲಿ 84 ರನ್ ಜೊತೆಯಾಟವಾಡಿ ಭಾರತ ಸರಣಿ ಗೆಲ್ಲುವಂತೆ ಮಾಡಿದರು.
Advertisement
ಇದಕ್ಕೂ ಮೊದಲು 6ನೇ ವಿಕೆಟಿಗೆ ಸೂರ್ಯಕುಮಾರ್ ಯಾದವ್ ಮತ್ತು ಕೃನಾಲ್ ಪಾಂಡ್ಯ 44 ರನ್ ನಂತರ 7ನೇ ವಿಕೆಟಿಗೆ ಕೃನಾಲ್ ಪಾಂಡ್ಯ ಮತ್ತು ಚಹರ್ 49 ರನ್ ಜೊತೆಯಾಟವಾಡಿ ಪಂದ್ಯವನ್ನು ಭಾರತದತ್ತ ತಿರುಗಿಸಿದರು.
Rahul Bhai to Deepak Chahar.#INDvSL pic.twitter.com/kAyZe0ks7e
— Virender Sehwag (@virendersehwag) July 20, 2021
ಭಾರತದ ಪರ ಸೂರ್ಯಕುಮರ್ ಯಾದವ್ 53 ರನ್(44 ಎಸೆತ, 6 ಬೌಂಡರಿ), ಮನೀಷ್ ಪಾಂಡೆ 37 ರನ್(31 ಎಸೆತ, 3 ಬೌಂಡರಿ) ಹೊಡೆದು ಔಟಾದರು. ದೀಪಕ್ ಚಹರ್ ಔಟಾಗದೇ 69 ರನ್(82 ಎಸೆತ, 7 ಬೌಂಡರಿ, 1 ಸಿಕ್ಸರ್), ಭುವನೇಶ್ವರ್ ಕುಮಾರ್ ಔಟಾಗದೇ 19 ರನ್(28 ಎಸೆತ, 2 ಬೌಂಡರಿ) ಹೊಡೆದರು.
Wow ! Even some of our bench strength is good enough to beat an international side !! What a win lads ???????????????? @deepak_chahar9 you can bat ???????? @surya_14kumar got a find a place for this talent in top 11 !congratulations skipper @SDhawan25 #rahuldravid and the whole team #INDvSL
— Yuvraj Singh (@YUVSTRONG12) July 20, 2021
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿ ಶ್ರೀಲಂಕಾ ಆವಿಷ್ಕಾ ಫೆರ್ನಾಂಡೋ 50 ರನ್(71 ಎಸೆತ, 4 ಬೌಂಡರಿ, 1 ಸಿಕ್ಸರ್), ಮಿನೋದ್ ಭನುಕಾ 36 ರನ್(42 ಎಸೆತ, 6 ಬೌಂಡರಿ), ಧನಂಜಯ ಡಿಸಿಲ್ವಾ 32 ರನ್(45 ಎಸೆತ, 1 ಬೌಂಡರಿ), ಚರಿತ್ ಅಸಲಂಕಾ 65 ರನ್(68 ಎಸೆತ, 6 ಬೌಂಡರಿ) ಹೊಡೆದರೆ ಕೊನೆಯಲ್ಲಿ ಚಮಿಕಾ ಕರುಣರತ್ನೆ 44 ರನ್(33 ಎಸೆತ, 5 ಬೌಂಡರಿ) ಹೊಡೆದ ಪರಿಣಾಮ ತಂಡ 275 ರನ್ ಗಳಿಸಿತು.
The legend in work #INDvSL #IndianCricketTeam #rahuldravid pic.twitter.com/dRJhsKewVd
— Kumar Nikhil (@kumar_nikhil57) July 20, 2021
ಭಾರತ ಇತರೇ ರೂಪದಲ್ಲಿ 21 ರನ್( ಲೆಗ್ಬೈ 6, ನೋಬಾಲ್ 2, 13 ವೈಡ್) ಬಿಟ್ಟುಕೊಟ್ಟಿತ್ತು. ಶುಕ್ರವಾರ ಮೂರನೇ ಹಾಗೂ ಕೊನೆಯ ಪಂದ್ಯ ಕೊಲಂಬೋದಲ್ಲಿ ನಡೆಯಲಿದೆ.