– ನಿಲ್ಲಲು ಜಾಗ ಇರದಿದ್ರೂ ಜೋತು ಬಿದ್ದ ಊರಿಗೆ ಹೊರಟ ಜನ
ಬೆಂಗಳೂರು: ಒಂದೆಡೆ ಕೊರೊನಾ ಸ್ಫೋಟವಾಗುತ್ತಿದ್ರೆ ಮತ್ತೊಂದಡೆ ಸಾರಿಗೆ ನೌಕರರ ಮುಷ್ಕರ ಮುಂದುವರಿದಿದೆ. ಸಾರಿಗೆ ಬಸ್ ಗಳಿಲ್ಲದ ಹಿನ್ನೆಲೆ ಯುಗಾದಿಗೆ ಊರಿಗೆ ತೆರಳುತ್ತಿರುವ ಜನರು ಕೊರೊನಾ ಇರೋದನ್ನ ಮರೆತು ಸಿಕ್ಕ ಸಿಕ್ಕ ವಾಹನಗಳಲ್ಲಿ ಮುಗಿ ಬಿದ್ದು ಪ್ರಯಾಣಿಸುತ್ತಿದ್ದಾರೆ.
ಬಸ್ ನಲ್ಲಿ ಜೋತು ಬಿದ್ದು, ಟಾಪ್ ಮೇಲೆ ಕುಳಿತು ಜನರು ಊರುಗಳಿಗೆ ಹೊರಟಿದ್ದಾರೆ. ಬೆಂಗಳೂರು ಹೊರವಲಯ 8 ನೇ ಮೈಲ್, ನವಯುಗ ಟೋಲ್, ಮೈಸೂರು ರಸ್ತೆಗಳಲ್ಲಿ ಪ್ರಯಾಣಿಕರು ಪರದಾಡುತ್ತಿದ್ದಾರೆ. ರಸ್ತೆಗೆ ಬರುವ ಬೆರಳಣಿಕೆ ಬಸ್ ಏರಲು ನಾ ಮುಂದು ತಾ ಮುಂದು ಎಂದು ಮುಗಿಬಿದ್ದ ಹತ್ತುತ್ತಿದ್ದಾರೆ.
Advertisement
Advertisement
ಸ್ಯಾಟಲೈಟ್ ಬಸ್ ನಿಲ್ದಾಣದಿಂದ ಐರಾವತ ಬಸ್ ಮಾತ್ರ ಓಡಾಟ ಆರಂಭಿಸಿವೆ. ಖಾಸಗಿ ಬಸ್ ಗಳಲ್ಲಿ ಸಾಮಾಜಿಕ ಅಂತರ, ಸ್ವಚ್ಛತೆ, ಮಾಸ್ಕ್ ಸೇರಿದಂತೆ ಎಲ್ಲ ಕೊರೊನಾ ನಿಯಮಗಳನ್ನು ಬ್ರೇಕ್ ಮಾಡಲಾಗುತ್ತಿದೆ. ಯುಗಾದಿ ಬಳಿಕ ಮಹಾಮಾರಿ ಕೊರೊನಾ ವೇಗ ಅಧಿಕ ಆಗುವ ಸಾಧ್ಯತೆಗಳಿವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.