Connect with us

ಅವ್ರು ಮಾಡಿದ ತಪ್ಪಿಗೆ ನನ್ನ ಹೆಸ್ರು ಹೇಳಿ ಸರ್ ಕೈಲಿ ಹೊಡೆಸ್ತಾರೆ: ಕ್ಲಾಸ್‍ಮೇಟ್ಸ್ ಹೆಸರು ಬರೆದಿಟ್ಟು ಬಾಲಕ ಆತ್ಮಹತ್ಯೆ

ಅವ್ರು ಮಾಡಿದ ತಪ್ಪಿಗೆ ನನ್ನ ಹೆಸ್ರು ಹೇಳಿ ಸರ್ ಕೈಲಿ ಹೊಡೆಸ್ತಾರೆ: ಕ್ಲಾಸ್‍ಮೇಟ್ಸ್ ಹೆಸರು ಬರೆದಿಟ್ಟು ಬಾಲಕ ಆತ್ಮಹತ್ಯೆ

ಬೆಂಗಳೂರು: 14 ವರ್ಷದ ಬಾಲಕನೊಬ್ಬ ಡೆತ್‍ನೋಟ್‍ನಲ್ಲಿ ತನ್ನ ಸಹಪಠಿಗಳ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರೋ ಘಟನೆ ನಗರದ ಹೊರವಲಯ ನೆಲಮಂಗಲದ ದಾಸನಪುರ ಗ್ರಾಮದಲ್ಲಿ ನಡೆದಿದೆ.

ವಿಕಾಸ್ ಆತ್ಮಹತ್ಯೆಗೆ ಶರಣಾದ ಬಾಲಕ. ವಿಕಾಸ್ ಆಚಾರ್ಯ ಗುರುಪರಂಪರ ಶಾಲೆಯಲ್ಲಿ 7ನೆ ತರಗತಿ ವ್ಯಾಸಂಗ ಮಾಡುತ್ತಿದ್ದ. ಅವರು ಮಾಡಿದ ತಪ್ಪಿಗೆ ನನ್ನ ಹೆಸರು ಹೇಳಿ ಶಿಕ್ಷಕರಿಂದ ಹೊಡೆಸುತ್ತಾರೆ ಎಂದು ವಿಕಾಸ್ ಡೆತ್‍ನೋಟ್‍ನಲ್ಲಿ ತನ್ನ ಸಹಪಾಠಿಗಳ ಹೆಸರು ಬರೆದಿಟ್ಟು ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಡೆತ್‍ನೋಟ್‍ನಲ್ಲಿ ಏನಿದೆ: ಅಮ್ಮ..ನೀವು ಎಲ್ಲರೂ ಹೋಗು ಹೋಗು ಅಂತಾ ಹೇಳುತ್ತಿದ್ದೀರಿ. ಡೈರೆಕ್ಟಾಗಿ ಮೇಲಕ್ಕೆ ಹೋಗಿದ್ದಿನಿ. ನಿಮಗೆ ಸಮಧಾನ ಆಯಿತು. ನಮ್ಮ ಸ್ಕೂಲ್‍ನಲ್ಲಿ ನಾನು ಏನು ಮಾಡದಿದ್ರು ಅವರು ಮಾಡಿದ ತಪ್ಪಿಗೆ ನನ್ನ ಹೆಸರು ಸೇರಿಸಿ ಸರ್ ಕೈಯಲ್ಲಿ ಹೊಡೆಸ್ತಾರೆ. ನನ್ನ ಸಾವಿಗೆ ಹರಿಣಿ, ಚೇತನ್ ಜಿ.ಟಿ, ಶಶಾಂಕ್, ಭಾರತಿ ಸಿ., ಇವರೆಲ್ಲ ಕಾರಣ
ಇಂತಿ ನಿಮ್ಮ,
ವಿಕಾಸ್

ಘಟನೆಯ ಸಂಬಂಧ ಮಾದನಾಯಕನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Advertisement
Advertisement