– 155ಕ್ಕೂ ಹೆಚ್ಚು ಮಂದಿಗೆ ಗಾಯ
ಸ್ಯಾಂಟೊ ಡೊಮಿಂಗೊ: ಡೊಮಿನಿಕನ್ ರಿಪಬ್ಲಿಕ್ (Dominican Republic) ರಾಜಧಾನಿ ಸ್ಯಾಂಟೊ ಡೊಮಿಂಗೊದಲ್ಲಿ (Santo Domingo) ನೈಟ್‌ಕ್ಲಬ್‌ನಲ್ಲಿ ಛಾವಣಿ ಕುಸಿದು ಕನಿಷ್ಠ 79 ಜನರು ಸಾವನ್ನಪ್ಪಿದ್ದು, 155 ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜೆಟ್ ಸೆಟ್ ನೈಟ್‌ಕ್ಲಬ್‌ನಲ್ಲಿ ಸಂಭವಿಸಿದ ದುರಂತದಲ್ಲಿ ಜನಪ್ರಿಯ ಗಾಯಕ, ಪ್ರಾಂತೀಯ ಗವರ್ನರ್ ಮತ್ತು ಇಬ್ಬರು ಮಾಜಿ ಮೇಜರ್ ಲೀಗ್‌ನ ಬೇಸ್‌ಬಾಲ್ (Baseball) ಆಟಗಾರರಾದ ಆಕ್ಟೇವಿಯೊ ಡೋಟೆಲ್ ಮತ್ತು ಟೋನಿ ಬ್ಲಾಂಕೊ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಈ ವರ್ಷವೇ ನನ್ನ ಮದುವೆ: ಹುಡುಗನ ಬಗ್ಗೆ ಅನುಶ್ರೀ ಮಾತು
ಡೊಮಿನಿಕನ್ ರಿಪಬ್ಲಿಕನ್‌ನ ತುರ್ತು ಕಾರ್ಯಾಚರಣೆ ಕೇಂದ್ರದ ಮುಖ್ಯಸ್ಥ ಜುವಾನ್ ಮ್ಯಾನುಯೆಲ್ ಮೆಂಡೆಜ್ ಪ್ರಕಾರ, ಛಾವಣಿ ಕುಸಿತದ ಸಮಯದಲ್ಲಿ ಕ್ಲಬ್ ಒಳಗೆ ಇದ್ದ ಜನರ ನಿಖರ ಸಂಖ್ಯೆ ಸ್ಪಷ್ಟವಾಗಿಲ್ಲ. ಮಧ್ಯರಾತ್ರಿ 12:44 ಕ್ಕೆ ಈ ದುರ್ಘಟನೆ ಸಂಭವಿಸಿದೆ. ಕ್ಲಬ್‌ನಲ್ಲಿ 500 ರಿಂದ 1,000 ಜನರಿದ್ದರು ಕೆಲವು ಮಾಧ್ಯಮಗಳು ತಿಳಿಸಿವೆ ಎಂದರು. ಇದನ್ನೂ ಓದಿ: ಮುಂಬೈ ದಾಳಿಕೋರ ಅಮೆರಿಕದಿಂದ ಗಡಿಪಾರು – ನಾಳೆ ಬೆಳಗ್ಗೆ ಭಾರತಕ್ಕೆ ರಾಣಾ
ಕ್ಲಬ್‌ನಲ್ಲಿ 700 ಜನರು ಕುಳಿತುಕೊಳ್ಳುವ ಮತ್ತು ಸುಮಾರು 1,000 ಜನರು ನಿಲ್ಲುವ ಸಾಮರ್ಥ್ಯವನ್ನು ಹೊಂದಿತ್ತು. ಘಟನೆಯ ವೀಡಿಯೋಗಳು ವೈರಲ್ ಆಗಿದೆ. ಮಧ್ಯರಾತ್ರಿಯ ನಂತರ ಛಾವಣಿ ಕುಸಿದಾಗ, ಖ್ಯಾತ ಡೊಮಿನಿಕನ್ ಮೆರೆಂಗ್ಯೂ ಗಾಯಕ ರಬ್ಬಿ ಪೆರೆಜ್ ವೇದಿಕೆಯಲ್ಲಿ ಹಾಡುತ್ತಿರುವುದು ವೀಡಿಯೋದಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಡೀಸೆಲ್ ಬೆಲೆ ಹೆಚ್ಚಳ – ಪ್ರತಿ ವಿದ್ಯಾರ್ಥಿಗೆ 500-600 ರೂ. ಹೆಚ್ಚುವರಿ ಹೊರೆ
🇩🇴 The death toll from a nightclub roof collapse in #SantoDomingo, Dominican Republic, has risen to 79. pic.twitter.com/9kxZF2q1Cn
— Hamdan News (@HamdanWahe57839) April 9, 2025
ಜೆಟ್ ಸೆಟ್ ನೈಟ್‌ಕ್ಲಬ್‌ನಲ್ಲಿ ರಾಜಕಾರಣಿಗಳು, ಕ್ರೀಡಾಪಟುಗಳು ಮತ್ತು ಇತರ ಪ್ರಮುಖ ವ್ಯಕ್ತಿಗಳು ಇದ್ದರು. ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯಗಳು ನಡೆಯುತ್ತಿದ್ದು, ಅವಶೇಷಗಳಡಿ ಸಿಲುಕಿದ್ದವರನ್ನು ರಕ್ಷಣೆ ಮಾಡಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: Gadag | ತಂದೆಯಿಂದಲೇ ಅಪ್ರಾಪ್ತ ಮಗಳ ಮೇಲೆ ನಿರಂತರ ಅತ್ಯಾಚಾರ ಆರೋಪ
ಡೊಮಿನಿಕನ್ ರಿಪಬ್ಲಿಕ್ ಅಧ್ಯಕ್ಷ ಲೂಯಿಸ್ ಅಬಿನಾಡರ್ (Luis Abinader) ಘಟನಾ ಸ್ಥಳಕ್ಕೆ ಭೇಟಿ ನೀಡಿ ಮೂರು ದಿನಗಳ ರಾಷ್ಟ್ರೀಯ ಶೋಕಾಚರಣೆಯನ್ನು ಘೋಷಿಸಿದರು.