ವಾಷಿಂಗ್ಟನ್: 72 ವರ್ಷದ ಬ್ರಿಟಿಷ್ ವ್ಯಕ್ತಿಯೊಬ್ಬರು 305 ದಿನಗಳಿಂದ ಕೊರೊನಾ ಸೋಂಕಿಗೆ ಒಳಗಾಗಿದ್ದರು. ಅಂದರೆ ಸುಮಾರು 10 ತಿಂಗಳ ಕಾಲ ಸತತವಾಗಿ ಸೋಂಕು ಹೊಂದಿರುವ ಈ ಪ್ರಕರಣ ಇದಾಗಿದೆ.
Advertisement
ಬ್ರಿಸ್ಟಲ್‍ನ ಡೇವ್ ಸ್ಮಿತ್ ಸೋಂಕಿಗೆ ಒಳಗಾಗಿರುವ ವ್ಯಕ್ತಿ. 2020ರಲ್ಲಿ ಕೊರೊನಾ ಮೊದಲನೇ ಅಲೆ ಆರಂಭವಾದಾಗ ಡೇವ್ ಸ್ಮಿತ್‍ರವರಿಗೆ ಕೊರೊನಾ ದೃಢಪಟ್ಟಿತ್ತು. ಈವರೆಗೂ 10 ತಿಂಗಳಲ್ಲಿ ಕೊರೊನಾ ಪರೀಕ್ಷೆ ನಡೆಸಿದಾಗ 43 ಬಾರಿ ಸೋಂಕಿಗೆ ಒಳಗಾಗಿದ್ದಾರೆ ಮತ್ತು 7 ಬಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
Advertisement
Advertisement
ಈ ಕುರಿತಂತೆ ಡೇವ್ ಸ್ಮಿತ್‍ರವರು, ನನ್ನ ಆರೋಗ್ಯ ಕೆಟ್ಟಗಾಲೆಲ್ಲಾ ನಾನು ಸಾವಿನ ಅಂಚಿಗೆ ಹೋಗಿ ತಲುಪುತ್ತಿದ್ದೆ. ನನ್ನ ಪತ್ನಿ ಐದು ಬಾರಿ ನನ್ನ ಅಂತ್ಯಕ್ರಿಯೆಗೆ ವ್ಯವಸ್ಥೆಗೊಳಿಸಿದ್ದರು. 2019ರಲ್ಲಿ ಲ್ಯುಕೇಮಿಯಾದಿಂದ ಗುಣವಾಗುತ್ತಿದ್ದಂತೆಯೇ, ಮಾರ್ಚ್ 2020ರಲ್ಲಿ ನನಗೆ ಕೊರೊನಾ ವೈರಸ್ ರೋಗಲಕ್ಷಣಗಳು ಕಾಣಿಸಿಕೊಂಡಿತ್ತು. ಆದರೂ ಏಪ್ರಿಲ್‍ವರೆಗೂ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳದೇ ಇದ್ದರಿಂದ ಕೊನೆಗೆ ಎದೆ ನೋವಿನಿಂದ ಆಸ್ಪತ್ರೆಗೆ ದಾಖಲಾದೆ.
Advertisement
ನಾನು ಸಂಪೂರ್ಣ ಶಕ್ತಿಯನ್ನು ಕಳೆದುಕೊಂಡಿದ್ದು, ವಾಸನೆ ಹಾಗೂ ರುಚಿ ಕಂಡು ಹಿಡಿಯುವ ಪ್ರಜ್ಞೆಯನ್ನು ಕಳೆದುಕೊಂಡೆ, ನಂತರ ಮತ್ತೆ ಅದೆಲ್ಲವೂ ಹಿಂದಿರುಗಲಿಲ್ಲ. ಅಲ್ಲದೇ ಅನಾರೋಗ್ಯದಿಂದ 117 ಕೆಜಿ ತೂಕ ಇದ್ದ ನಾನು 63 ಕೆಜಿಗೆ ಇಳಿದೆ.
ಇನ್ನೇನು ನಾನು ಪ್ರಾಣಕಳೆದುಕೊಂಡು ಕುಟುಂಬದಿಂದ ದೂರವಾಗುತ್ತೇನೆ ಎಂದು ಕೊಂಡಾಗ ಯುಎಸ್ ಕಂಪನಿಯ ಆಂಟಿ-ವೈರಲ್ ಔಷಧಿಯನ್ನು ಚಿಕಿತ್ಸೆಯಾಗಿ ನೀಡಲಾಯಿತು. ಆಗ ನನ್ನ ಆರೋಗ್ಯ ತಕ್ಷಣಕ್ಕೆ ಸುಧಾರಿಸಲಿಲ್ಲ. ಆದರೆ ಕೆಲವು ವಾರಗಳ ಬಳಿಕ ಆರೋಗ್ಯದಲ್ಲಿ ಚೇತರಿಕೆ ಕಂಡಿತು ಎಂದಿದ್ದಾರೆ. ಈ ಔಷಧಿಯನ್ನು ಪಡೆದ ನಲವತ್ತೈದು ದಿನಗಳ ನಂತರ ಡೇವ್ ಸ್ಮಿತ್‍ರವರಿಗೆ ಕೊರೊನಾ ನೆಗಟಿವ್ ಬಂದಿತು. ಇದನ್ನೂ ಓದಿ: ಕಲ್ಯಾಣ ಮಂಟಪ, ಹೋಟೆಲ್ ಪಾರ್ಟಿ ಹಾಲ್, ರೆಸಾರ್ಟ್ ಆರಂಭಕ್ಕೆ ಗ್ರೀನ್ ಸಿಗ್ನಲ್