82 ವರ್ಷದ ವೃದ್ಧನಿಂದ 78ರ ವೃದ್ಧೆ ಮೇಲೆ ವರದಕ್ಷಿಣೆ ಕಿರುಕುಳ!

Public TV
1 Min Read
old couples 1

ಲಕ್ನೋ: 78 ವರ್ಷದ ವೃದ್ಧೆಯೊಬ್ಬಳಿಗೆ 82ರ ಪತಿ ವರದಕ್ಷಿಣೆ ಕಿರುಕುಳ ನೀಡುತ್ತಿದ್ದಾರೆ ಎಂದು ಪೊಲೀಸ್ ಠಾಣೆಯ ಮೇಟ್ಟಿಲೇರಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಉತ್ತರ ಪ್ರದೇಶದ ಕಾನ್ಪುರದ ಚಕೇರಿ ಪ್ರದೇಶದಲ್ಲಿ ವೃದ್ಧ ಪತಿ, ಪತ್ನಿಗೆ ಕಿರುಕುಳ ನೀಡುತ್ತಿದ್ದಾನೆ. ಸಂತ್ರಸ್ತೆ ನ್ಯಾಯಕ್ಕಾಗಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಆಕೆಯ ದೂರಿನ ಮೇರೆಗೆ ಪೊಲೀಸರು ವೃದ್ಧೆಯ ಪತಿ ಗಣೇಶ್ ನರೇನ್ ಶುಕ್ಲಾ ಮತ್ತು ಅವರ ಅಳಿಯ ಸೇರಿದಂತೆ ಆರು ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

BRIBE

ವೃದ್ಧೆಯ ದೂರಿನ ಪ್ರಕಾರ, ಪತಿ ವರದಕ್ಷಿಣೆ ವಿಚಾರವಾಗಿ ಕಿರುಕುಳ ನೀಡುತ್ತಿದ್ದ ಎಂದು ಹೇಳಲಾಗಿದೆ. ಪತಿಯ ಕಾಟ ತಾಳದ ವೃದ್ಧೆ ಪೊಲೀಸ್ ಠಾಣೆಯ ಮೊರೆ ಹೋಗಿದ್ದಾರೆ. ಇನ್ನು ಪತಿ ನರೇನ್ ಶುಕ್ಲಾ ಆತನ ಅಳಿಯ ಸೇರಿದಂತೆ ಒಟ್ಟು ಆರು ಜನರ ಮೇಲೆ ಕೇಸ್ ದಾಖಲಿಸಿದ್ದಾರೆ.

gay couple holding hands

ವೃದ್ಧ ದಂಪತಿಯ ಪುತ್ರ ರಜನೀಶ್ ಸುದ್ದಿಗಾರರೊಂದಿಗೆ ಮಾತನಾಡಿ, ತನ್ನ ತಾಯಿ ಎಲ್ಲಾ ಕುಟುಂಬ ಸದಸ್ಯರೊಂದಿಗೆ ಚೆನ್ನಾಗಿ ವರ್ತಿಸುತ್ತಾಳೆ. ಆದರೆ ಕೆಲವು ಸಂಬಂಧಿಕರ ಪ್ರಭಾವದಿಂದ  ಪ್ರಕರಣವನ್ನು ದಾಖಲಿಸಿದ್ದಾರೆ ಎಂದು ಹೇಳಿದ್ದಾರೆ. ಓದಿ: ಯಾವುದೇ ಒತ್ತಡವಿಲ್ಲ, ಸ್ವ-ಇಚ್ಛೆಯಿಂದ ಆತ್ಮಹತ್ಯೆ- ಸೆಲ್ಫಿ ವೀಡಿಯೋ ಮಾಡಿ ಯುವಕ ಬಾವಿಗೆ ಹಾರಿದ!

MONEY

ಇದೇ ವೇಳೆ ವಕೀಲ ಶಿವೇಂದ್ರ ಕುಮಾರ್ ಪಾಂಡೆ ಮಾತನಾಡಿ, ಮೂಲಗಳ ಪ್ರಕಾರ, ಇಡೀ ವಿಷಯವು ಕೌಟುಂಬಿಕ ಕಲಹಕ್ಕೆ ಸಂಬಂಧಿಸಿದೆ. ಮದುವೆಯಾಗಿ ಇಷ್ಟು ವರ್ಷಗಳಾದರೂ ವರದಕ್ಷಿಣೆ ಕಿರುಕುಳದ ಆರೋಪದಲ್ಲಿ ಅರ್ಥವಿಲ್ಲ. ಆದ್ದರಿಂದ ದಂಪತಿ ನಡುವಿನ ಪರಸ್ಪರ ಮಾತುಕತೆಯಿಂದ ವಿವಾದವನ್ನು ಇತ್ಯರ್ಥಪಡಿಸಬಹುದು ಎಂದು ಪಾಂಡೆ ಹೇಳಿದರು.

Share This Article