ಬೆಂಗಳೂರು: 78 ವರ್ಷದ ವೃದ್ಧ ಕೊರೊನಾದಿಂದ ಗುಣಮುಖರಾಗಿ ವಿಕ್ಟೋರಿಯಾ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಗುಜರಾತ್ ಮೂಲದ ವೃದ್ಧ ಕರ್ನಾಟಕದಲ್ಲೇ ವಾಸವಾಗಿದ್ದರು. ಮೊದಲು ವೃದ್ಧನಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಆಸ್ಪತ್ರೆಗೆ ದಾಖಲಾದಾಗ ಕೋವಿಡ್-19 ಸೋಂಕು ತಗುಲಿರೋದು ದೃಢಪಟ್ಟಿತ್ತು.
Advertisement
ತಮ್ಮ ಆತ್ಮಮನೋಬಲದಿಂದ ಡೆಡ್ಲಿ ಕೊರೊನಾಗೆ ಸೆಡ್ಡು ಹೊಡೆದು ಬಂದಿದ್ದಾರೆ. ಮಾರ್ಚ್ 1ಕ್ಕೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದ ವೃದ್ಧ ಮಾರ್ಚ್ 17ರಂದು ಗುಣಮುಖರಾಗಿ ಹೊರ ಬಂದಿದ್ದರು. ತಮಗೆ ಹೇಗೆ ಚಿಕಿತ್ಸೆ ನೀಡಲಾಯ್ತು ಎಂಬಿತ್ಯಾದಿ ವಿಷಯಗಳನ್ನ ವೃದ್ಧ ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ.
Advertisement
Advertisement
ನಾನು ಫೆಬ್ರವರಿ 17ರಂದು ದುಬೈನಲ್ಲಿ ನಡೆದ ಮೊಮ್ಮಗನ ಮದುವೆಯಲ್ಲಿ ಭಾಗಿಯಾಗಿ ಬಂದಿದ್ದೆ. ಆದ್ರೆ ಮಾರ್ಚ್ 1ರಂದು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳಲು ಆರಂಭಿಸಿದೆ. ಆಸ್ಪತ್ರೆಯ ವೈದ್ಯರು, ನರ್ಸ್ ಹಾಗೂ ಇತರೆ ಸಿಬ್ಬಂದಿ ನನ್ನನ್ನು ಚೆನ್ನಾಗಿ ನೋಡಿಕೊಂಡರು. ಚಿಕಿತ್ಸೆ ವೇಳೆ ನನಗೆ ಆತ್ಮಸ್ಥೈರ್ಯ ಇತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ವೇಳೆ ವಿಡಿಯೋ ಕಾಲ್ ಮೂಲಕ ಪತ್ನಿಯ ಜೊತೆ ಮಾತನಾಡಿಸಿದ್ರು. ಆಸ್ಪತ್ರೆಯಲ್ಲಿ ಪ್ರತಿನಿತ್ಯ ಹಣ್ಣುಗಳ ಜ್ಯೂಸ್ ನೀಡುತ್ತಿದ್ದರು. ಕೊರೊನಾ ಬಂದ್ರೆ ಯಾರು ಭಯಪಡಬೇಡಿ. ವೈದ್ಯರು ನೀಡುವ ಸೂಚನೆಗಳನ್ನು ಪಾಲಿಸಿದ್ರೆ ನಮಗೆ ಒಳ್ಳೆಯದು. ಎಲ್ಲ ಕೋವಿಡ್-19 ರೋಗಿಗಳು ಧ್ಯಾನ ಮಾಡುವದನ್ನು ಅಭ್ಯಾಸ ಮಾಡಿಕೊಳ್ಳಿ ಎಂದು ಹಿರಿಯ ವೃದ್ಧ ಸಲಹೆ ನೀಡಿದ್ದಾರೆ.