ಬೆಂಗಳೂರು: ಬೆಳಕಿನ ಹಬ್ಬ ದೀಪಾವಳಿ ಸಂಭ್ರಮಾಚರಣೆಯಲ್ಲಿ ಪಟಾಕಿ ಸಿಡಿತದಿಂದ 78 ಮಂದಿ ಗಾಯಗೊಂಡಿದ್ದಾರೆ.
Advertisement
ಪಟಾಕಿ ಸಿಡಿತದಿಂದ ಹನಿಗೊಂಡವರು ಇದೀಗ ಮಿಂಟೋ ಆಸ್ಪತ್ರೆ, ನಾರಾಯಣ ನೇತ್ರಾಲಯ, ನೇತ್ರದಾಮ, ಶಂಕರ್ ಕಣ್ಣಿನ ಆಸ್ಪತ್ರೆ, ಅಸ್ಟರ್ ಸಿಎಂಐ, ಮೋದಿ ಕಣ್ಣಿನ ಆಸ್ಪತ್ರೆ, ವಿಕ್ಟೋರಿಯಾ ಸುಟ್ಟ ಗಾಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನೂ ಓದಿ: ಸಿನಿಮಾಗಿಂತ ಸುದ್ದಿಯಲ್ಲೇ ಉಳಿದು ಬಿಡ್ತಾರಾ ‘ಮಫ್ತಿ’ ಖ್ಯಾತಿಯ ನಿರ್ದೇಶಕ ನರ್ತನ್
Advertisement
Advertisement
ಪ್ರತಿ ವರ್ಷ ದೀಪಾವಳಿ ವೇಳೆ ಪಟಾಕಿ ಸಿಡಿಸಿ ಜನರು ಸಂಭ್ರಮಿಸುತ್ತಾರೆ. ಪಟಾಕಿ ಹೊಡೆಯುವ ವೇಳೆ ಅದೆಷ್ಟೋ ಮಂದಿ ಗಾಯಗೊಳ್ಳುತ್ತಾರೆ. ಅದರಲ್ಲಿಯೂ ಮಕ್ಕಳೇ ಹೆಚ್ಚಾಗಿ ಹಾನಿಗೊಳಗಾಗುತ್ತಾರೆ. ಅದರಂತೆ ಈ ಬಾರಿ ಕೂಡ 5 ರಿಂದ 18 ವರ್ಷದ ಒಳಗಿನ ಮಕ್ಕಳೇ ಪಟಾಕಿ ಸಿಡಿತಕ್ಕೆ ಹೆಚ್ಚಾಗಿ ಗಾಯಗೊಂಡಿದ್ದಾರೆ. ಸದ್ಯ ಬೆಳಕು ಚೆಲ್ಲಾಬೇಕಿದ್ದ ದೀಪಾವಳಿ, ಈ ಮಕ್ಕಳ ಬಾಳಲ್ಲಿ ಕತ್ತಲೆ ತಂದಿದೆ. ಇದೀಗ ಮಿಂಟೋ ಆಸ್ಪತ್ರೆ ಸೇರಿದಂತೆ ನಗರದ ಹಲವು ಕಣ್ಣಿನ ಆಸ್ಪತ್ರೆಯಲ್ಲಿ 78 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನೂ ಓದಿ: ಕೋಟಿ ಮೀರಿತು ಕನ್ನಡ ಗಾಯನಕ್ಕೆ ಕಂಠ ನೋಂದಣಿ – 1.50 ಕೋಟಿ ನೋಂದಣಿ ಮೀರುವ ನಿರೀಕ್ಷೆ
Advertisement
ನಗರದ ಯಾವ್ಯಾವ ಕಣ್ಣಿನ ಆಸ್ಪತ್ರೆಯಲ್ಲಿ ಎಷ್ಟೆಷ್ಟು ಪಟಾಕಿ ಹಾನಿ ಪ್ರಕರಣ?
1. ಮಿಂಟೋ ಆಸ್ಪತ್ರೆ – 17 ಕೇಸ್
2. ನಾರಾಯಣ ನೇತ್ರಾಲಯ – 23 ಕೇಸ್
3. ನೇತ್ರಧಾಮ – 20 ಕೇಸ್
4. ಶಂಕರ್ ಕಣ್ಣಿನ ಆಸ್ಫತ್ರೆ – 13 ಕೇಸ್
5. ಅಸ್ಟರ್ ಸಿಎಂಐ – 3 ಕೇಸ್ .
6. ಮೋದಿ ಕಣ್ಣಿನ ಆಸ್ಫತ್ರೆ – 1 ಕೇಸ್
7. ವಿಕ್ಟೋರಿಯಾ ಸುಟ್ಟ ಗಾಯ ಆಸ್ಪತ್ರೆ – 1 ಕೇಸ್