ಚೆನ್ನೈ: ದಕ್ಷಿಣ ಭಾರತದ ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ 78ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.
Advertisement
ಈ ವಿಶೇಷದಿನದಂದು ಅಭಿಮಾನಿಗಳು ತಮ್ಮ ನೆಚ್ಚಿನ ಹಾಡುಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಇಳಯರಾಜರವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸುತ್ತಿದ್ದಾರೆ. ಇಳಯರಾಜರವರು 1,000ಕ್ಕೂ ಹೆಚ್ಚು ಸಿನಿಮಾಗಳಿಗೆ 7,000ಕ್ಕೂ ಹೆಚ್ಚು ಹಾಡುಗಳಿಗೆ ಸಂಗೀತಾ ಸಂಯೋಜಿಸಿದ್ದಾರೆ. ವಿಶ್ವದ ಅತ್ಯುತ್ತಮ ಸಂಗೀತ ನಿರ್ದೇಶಕರಲ್ಲಿ ಇಳಯರಾಜವರು ಕೂಡ ಒಬ್ಬರಾಗಿದ್ದಾರೆ ಎಂದು ಗುರುತಿಸಲಾಗಿದೆ.
Advertisement
Happy Birthday to our beloved RAJA sir. May God bless you with a long happy healthy and peaceful musical life. Enjoy your Birthday dear sir????????????????????#KSChithra #Isaignani #Maestro #Ilaiyaraaja #KrishnaDigiDesign #Audiotracs pic.twitter.com/Kf9E8HTups
— K S Chithra (@KSChithra) June 2, 2021
Advertisement
ಕೊರೊನಾ ವೈರಸ್ ಲಾಕ್‍ಡೌನ್‍ನಿಂದ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿರುವ ಇಳಜರಾಜರವರು ತಮ್ಮ ಚೆನ್ನೈ ನಿವಾಸದಲ್ಲಿ ಕುಟುಂಬದೊಂದಿಗೆ ಸರಳವಾಗಿ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಇಳಯರಾಜರವರಿಗೆ ಅಭಿಮಾನಿಗಳು ಸೇರಿದಂತೆ ಚಿತ್ರರಂಗದ ಗಣ್ಯರು ಸೋಶಿಯಲ್ ಮೀಡಿಯಾದಲ್ಲಿ ಶುಭಾಶಯ ಕೋರುತ್ತಿದ್ದಾರೆ.
Advertisement
Happy Birthday Legend Music Director Ilaiyaraaja sir ????????
On Behalf Of Thalapathy Vijay Fans ✨@actorvijay#HBDIlaiyaraaja ❤️ pic.twitter.com/r5Vmw3gNQu
— Jᴇʀᴏᴍᴇ ッ (@JudeJerome6) June 2, 2021
ಇಳಯರಾಜರವರು ನಾಲ್ಕು ದಶಕದ ತಮ್ಮ ವೃತ್ತಿ ಜೀವನದಲ್ಲಿ ಸಾವಿರಾರು ಹಿಟ್ ಹಾಡುಗಳನ್ನು ನೀಡುವ ಮೂಲಕ ಯಶಸ್ಸು ಪಡೆದುಕೊಂಡಿದ್ದಾರೆ. ಅಲ್ಲದೆ ತಮಿಳು, ತೆಲುಗು, ಮಲಯಾಳಂ, ಕನ್ನಡ ಮತ್ತು ಹಿಂದಿ ಸಿನಿಮಾಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ದಕ್ಷಿಣ ಭಾರತದ ಚಲನಚಿತ್ರಗಳಿಗೆ ಪಾಶ್ಚತ್ಯ ಮಾದರಿಯ ಸಂಗೀತ ತಂತ್ರಗಳನ್ನು ಪರಿಚಯಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.
Wishing the music legend, the Maestro, my all time favorite #Ilaiyaraaja Gaaru, a very Happy Birthday!
Your compositions are really something that can change my mood instantly, it’s a pleasure meeting you sir. ❤️ #HappyBirthdayIlaiyaraaja pic.twitter.com/QrOQXAEPXk
— Ramesh Varma (@DirRameshVarma) June 2, 2021
2010 ಮತ್ತು 2018ರಲ್ಲಿ ಇಳಯರಾಜರವರಿಗೆ ಸರ್ಕಾರ ಪದ್ಮಭೂಷಣ ಮತ್ತು ಪದ್ಮವಿಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು. ಇದನ್ನು ಓದಿ: ಸಿಬಿಎಸ್‍ಇ ಪರೀಕ್ಷೆ ರದ್ದು – ಕರ್ನಾಟದಲ್ಲಿ ಏನು?