– ಸ್ವಾತಂತ್ರ್ಯೋತ್ಸವ ಉದ್ದೇಶಿಸಿ ದೆಹಲಿಯ ಕೆಂಪು ಕೋಟೆಯಲ್ಲಿ ಪ್ರಧಾನಿ ಭಾಷಣ
ನವದೆಹಲಿ: ನಾವು ತೆಗೆದುಕೊಳ್ಳುವ ನಿರ್ಧಾರ ಮುಂದಿನ ಒಂದು ಸಾವಿರ ವರ್ಷ ಭಾರತ ದಿಕ್ಕನ್ನು ತೋರಿಸಲಿದೆ. ಈ ಅವಧಿಯಲ್ಲಿ ತೆಗೆದುಕೊಳ್ಳುವ ನಿರ್ಧಾರ ಮುಂದಿನ ಒಂದು ಸಾವಿರ ವರ್ಷದಲ್ಲಿ ಸುವರ್ಣ ಅಕ್ಷರಗಳಲ್ಲಿ ಬರೆದಿಡುವ ಸಮಯವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
77ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಕೆಂಪು ಕೋಟೆಯಲ್ಲಿ ಇಂದು (ಮಂಗಳವಾರ) ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಗುಲಾಮಿ ಮನಸ್ಥಿತಿಯಿಂದ ಹೊರ ಬರುವ ನಿರ್ಧಾರ ತೆಗೆದುಕೊಳ್ಳುವ ಸಮಯವಾಗಿದೆ. ಭಾರತ ಹೊಸ ಸಾಮರ್ಥ್ಯದೊಂದಿಗೆ ಎಲ್ಲರನ್ನು ಸೆಳೆಯಲಿದೆ. ಈ ಹಿಂದಿನ ಗುಲಾಮಿ ವ್ಯವಸ್ಥೆ ಮತ್ತು ಮುಂದಿನ ಒಂದು ಸಾವಿರ ವರ್ಷದ ಭವ್ಯ ಭಾರತದ ನಡುವೆ ನಾವಿದ್ದೇವೆ ಎಂದು ತಿಳಿಸಿದರು.
ಸ್ವಾತಂತ್ರ್ಯ ಹೋರಾಟಗಾರದಲ್ಲಿ ಹೋರಾಟ ಮಾಡಿದ, ಬಲಿದಾನ ನೀಡಿದ ಎಲ್ಲ ಹೋರಾಟಗಾರಿಗೆ ಗೌರವ ಸಲ್ಲಿಸುತ್ತೇನೆ. ಇದು ಅಮೃತ ಕಾಲದ ಮೊದಲ ವರ್ಷ. ಈ ಅವಧಿಯಲ್ಲಿ ನಾವು ತೆಗೆದುಕೊಳ್ಳುವ ನಿರ್ಧಾರ ದೇಶದ ಎಲ್ಲ ಜನರ ಹಿತಾಸಕ್ತಿ ಕಾಪಾಡಲಿದೆ. ಇಂದು ನಮ್ಮ ಯುವಕರಿಗೆ ಹೊಸ ಅವಕಾಶ ಸಿಕ್ಕಿದೆ. ನಮ್ಮ ಸರ್ಕಾರದ ನೀತಿಯೂ ಯುವ ಶಕ್ತಿಗೆ ಬಲ ನೀಡಲಿದೆ. ಸ್ಟಾರ್ಟ್ ಅಪ್‌ಗೆ ಅವಕಾಶ ನೀಡಿದೆ. ಭಾರತ ಈಗ ವಿಶ್ವದ ಮೂರನೇ ಅತಿದೊಡ್ಡ ಸ್ಟಾರ್ಟ್ ಅಪ್ ದೇಶವಾಗಿದೆ. T2, T3 ನಗರಗಳಿಂದಲೂ ಪ್ರತಿಭೆಗಳು ಹೊರ ಬರುತ್ತಿವೆ. ಸಣ್ಣ ಊರುಗಳು ಚಿಕ್ಕದಾಗಿರಬಹುದು, ಅವುಗಳ ಶಕ್ತಿ ದೊಡ್ಡದಿದೆ. ಬಡ ಕುಟುಂಬಗಳಿಂದ ಬರುವ ಯುವಕರು ಸಾಧನೆ ಮಾಡುತ್ತಿದ್ದಾರೆ. 100 ಕ್ಕೂ ಅಧಿಕ ಶಾಲಾ ಮಕ್ಕಳು ಸೆಟಲೈಟ್ ಉಡಾವಣೆ ಮಾಡುತ್ತಿವೆ. ಅವಕಾಶಗಳಿಗೆ ಕಡಿಮೆ ಏನು ಇಲ್ಲ. ಎಲ್ಲ ಅವಕಾಶಗಳನ್ನು ಸರ್ಕಾರ ನೀಡಲಿದೆ ಎಂದರು.
ಮಹಿಳೆಯರಿಂದ ದೇಶ ಮುಂದುವರಿಯುತ್ತಿದೆ. ದೇಶದ ಅಭಿವೃದ್ಧಿಗೆ ಕೆಲಸ ಮಾಡುತ್ತಿರುವ ಎಲ್ಲರಿಗೂ ನಾನು ಅಭಿನಂದನೆ ಸಲ್ಲಿಸುತ್ತೇನೆ. ದೇಶದಲ್ಲಿ ಜಿ20 ಕಾರ್ಯಕ್ರಮ ನಡೆಯುತ್ತಿವೆ. ದೇಶದ ಶಕ್ತಿ, ವಿವಿಧತೆಯನ್ನು ಪರಿಚಯಿಸಲಾಗುತ್ತಿದೆ. ಭಾರತ ಎಲ್ಲರನ್ನು ಆಕರ್ಷಿಸುತ್ತಿದೆ. ಭಾರತದ ರಪ್ತು ಹೆಚ್ಚಾಗುತ್ತಿದೆ. ಇನ್ನು ಭಾರತವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಕೊರೊನಾ ಕಾಲದಲ್ಲಿ ವಿಶ್ವ ನಮ್ಮ ಶಕ್ತಿಯನ್ನು ನೋಡಿದೆ. ಸಂಕಷ್ಟದ ಸಮಯದಲ್ಲೂ ಮಾನವೀಯತೆ ಮೆರೆದಿದ್ದೇವೆ. ಭಾರತದ ಮೇಲೆ ಹೊಸ ವಿಶ್ವಾಸ ಮೂಡಿದೆ. ಈ ಸಮಯವನ್ನು ನಾವು ಬಿಟ್ಟು ಕೊಡಬಾರದು ಎಂದು ಕರೆ ನೀಡಿದರು.
ಈ ಅವಧಿಯಲ್ಲಿ ಕೆಲಸ ಮಾಡಲು ಬಲಿಷ್ಠವಾದ ಮತ್ತು ಸ್ಥಿರ ಸರ್ಕಾರದ ಅವಶ್ಯಕತೆ ಇದೆ. ದೇಶದ ಜನರು ಅಂತಹ ಸ್ಥಿರ ಸರ್ಕಾರ ನೀಡಿದ್ದಾರೆ. ನಮ್ಮ ಸರ್ಕಾರ ದೇಶದ ಜನರ ಅಭಿವೃದ್ಧಿಗೆ ಕೆಲಸ ಮಾಡುತ್ತಿದೆ. ರಾಷ್ಟ್ರವೇ ಮೊದಲು ಎನ್ನುವುದು ನಮ್ಮ ಸರ್ಕಾರ ಧ್ಯೇಯ. 2014 ರಲ್ಲಿ ಮೋದಿ ಸರ್ಕಾರಕ್ಕೆ ಫಾರಂ ಮಾಡಿದ್ದೀರಿ. ಮೋದಿ ಸರ್ಕಾರ ದೇಶದಲ್ಲಿ ಸುಧಾರಣೆ ಮಾಡುತ್ತಿದೆ. ದೇಶದ ಜನರಿಗೆ ಶುದ್ಧ ಕುಡಿಯುವ ನೀರು ನೀಡಿದೆ. ವೈದ್ಯಕೀಯ ವ್ಯವಸ್ಥೆ ನೀಡಿದೆ. ಯೋಗ ಮತ್ತು ಆಯುಷ್ಯ ಹೊಸ ಗುರುತು ನೀಡಿದೆ ಎಂದು ಮಾತನಾಡಿದರು.
ಮೀನುಗಾರರ ಅಭಿವೃದ್ಧಿಗೆ ಪ್ರತ್ಯೇಕ ಸಚಿವಾಲಯ ಮಾಡಲಾಯ್ತು. ಸಹಕಾರಿ ವ್ಯವಸ್ಥೆಗೆ ಶಕ್ತಿ ನೀಡಲು ಪ್ರತ್ಯೇಕ ಸಚಿವಾಲಯ ಮಾಡಲಾಯ್ತು. ಬಡ ಜನರ ಅವಶ್ಯಕತೆ ಪೂರೈಸಲು ಕೆಲಸ ಮಾಡಲಾಗುತ್ತಿದೆ. ನಾವು ಅಧಿಕಾರಕ್ಕೆ ಬಂದಾಗ 10 ನೇ ಆರ್ಥಿಕ ದೇಶವಾಗಿದ್ದೆವು. ಇಂದು ಐದನೇ ಸ್ಥಾನವನ್ನು ತಲುಪಿದ್ದೇವೆ. ಇದು ಹಾಗೆಯೇ ಆಗಿಲ್ಲ, ಭ್ರಷ್ಟಾಚಾರ ದೇಶವನ್ನು ಬುಡಮೇಲು ಮಾಡಿತ್ತು. ಭ್ರಷ್ಟಾಚಾರ ನಿಯಂತ್ರಿಸಿ, ಬಡವರ ಕಲ್ಯಾಣಕ್ಕೆ ಕೆಲಸ ಮಾಡಿದ್ದೇವೆ. ದೇಶದ ಜನರಿಗೆ ಹಣ ಖರ್ಚು ಮಾಡುವ ಕೆಲಸ ಮಾಡಿದೆ. ಇದು ಜನರ ಶಕ್ತಿ ಹೆಚ್ಚಿಸುವ ಕೆಲಸ ಮಾಡಿತು. ಇದರಿಂದ ದೇಶದ ಆರ್ಥಿಕ ಬಲಿಷ್ಠವಾಗಲು ಸಾಧ್ಯವಾಯಿತು ಎಂದು ಅಭಿಪ್ರಾಯಪಟ್ಟರು.
ಹಿಂದೆ 30 ಲಕ್ಷ ಕೋಟಿ ರಾಜ್ಯಗಳಿಗೆ ನೀಡಲಾಗುತ್ತಿತ್ತು. ಇಂದು ಒಂದು ಲಕ್ಷ ಕೋಟಿ ರಾಜ್ಯಗಳಿಗೆ ನೀಡಲಾಗುತ್ತಿದೆ. ಬಡತನದಿಂದ ಮುಕ್ತವಾಗಿ ಮಧ್ಯಮ ವರ್ಗಕ್ಕೆ ಜನರ ಜೀವನ ಮಟ್ಟ ಬರುತ್ತಿದೆ. ಇದಕ್ಕಿಂತ ದೊಡ್ಡ ಖುಷಿ ಮತ್ತೊಂದಿಲ್ಲ. ವಿಶ್ವದ ಮೂರನೇ ಬಲಿಷ್ಠ ದೇಶವಾಗಲಿದೆ, ಇದು ಮೋದಿ ಗ್ಯಾರಂಟಿ. ನಗರದಲ್ಲಿ ಮನೆ ಇಲ್ಲದ ಜನರಿಗೆ ಹೊಸ ಯೋಜನೆ ತರಲಿದ್ದೇವೆ. ಅಂತಹ ಜನರಿಗೆ ಬ್ಯಾಂಕ್ ಸಾಲದಲ್ಲಿ ಬಡ್ಡಿ ರಿಯಾಯಿತಿ ನೀಡಿ ಮನೆ ಕಟ್ಟುವ ಕನಸು ನನಸು ಮಾಡುವ ಕೆಲಸ ಮಾಡಲಿದ್ದೇವೆ ಎಂದು ಭರವಸೆ ನೀಡಿದರು.
ಅತಿ ಕಡಿಮೆ ದರದಲ್ಲಿ ಡೇಟಾ ಲಭ್ಯವಾಗುತ್ತಿದೆ. ದೇಶ ಹೊಸ ಶಕ್ತಿಗಳ ಮೇಲೆ ಆಧಾರದ ಮೇಲೆ ಕೆಲಸ ಮಾಡುತ್ತಿದೆ. ಮೆಟ್ರೋ ಅಭಿವೃದ್ಧಿಯಾಗುತ್ತಿದೆ. ವಂದೇ ಭಾರತ ಟ್ರೇನ್ ಓಡುತ್ತಿದೆ. ಹಳ್ಳಿಹಳ್ಳಿಗೂ ಇಂಟರ್ನೆಟ್ ತಲುಪುತ್ತಿದೆ. ಪ್ಯಾರಾ ಒಲಿಂಪಿಕ್‌ನಲ್ಲಿ ಸಾಧನೆ ಮಾಡುತ್ತಿದೆ. ನಮ್ಮ ಸರ್ಕಾರದಲ್ಲಿ ನಾವು ಆರಂಭಿಸುವ ಕೆಲಸವನ್ನು ನಾವೇ ಉದ್ಘಾಟನೆ ಮಾಡುತ್ತೇವೆ. ಈಗ ಶಂಕುಸ್ಥಾಪನೆ ಮಾಡಿರುವ ಕೆಲಸಗಳನ್ನು ನಾವೇ ಉದ್ಘಾಟನೆ ಮಾಡಲಿದ್ದೇವೆ. 6G ಕಡೆಗೆ ಕೆಲಸ ಆರಂಭಿಸಿದ್ದೇವೆ. 500 ಬಿಲಿಯನ್ ಡಾಲರ್ ರಫ್ತು ಬಗ್ಗೆ ಮಾತನಾಡಿದ್ದೆವು, ಪೂರೈಸಿದ್ದೇವೆ. ಸಂಸತ್ ಭವನವನ್ನು ಅವಧಿಗೂ ಮುಂಚೆ ನಿರ್ಮಿಸಿದ್ದೇವೆ. ಇದು ಮೋದಿ ಸರ್ಕಾರ, ಅವಧಿಗೂ ಮುನ್ನ ಕೆಲಸ ಮಾಡಿ ಮುಗಿಸುತ್ತದೆ ಎಂದು ಕೇಂದ್ರದ ಅಭಿವೃದ್ಧಿ ಕಾರ್ಯಗಳ ಬಗ್ಗೆ ತಿಳಿಸಿದರು.
ನಮ್ಮ ಗಡಿ ಮೊದಲಗಿಂತ ಬಲಿಷ್ಠವಾಗಿವೆ. ನಮ್ಮ ಸೈನಿಕರು ದೇಶವನ್ನು ಕಾಯುತ್ತಿದ್ದಾರೆ. ಅವರಿಗೂ ನಾನು ಶುಭಾಶಯ ಕೋರುತ್ತೇನೆ. ಮೊದಲು ಬಾಂಬ್ ದಾಳಿಯ ಸುದ್ದಿಗಳು ಕೇಳಿ ಬರುತ್ತಿದ್ದವು. ಇಂದು ದೇಶದಲ್ಲಿ ಶಾಂತಿ ನೆಲೆಸಿದೆ. ಭಯೋತ್ಪಾದಕ ದಾಳಿ ಕಡಿಮೆಯಾಗಿದೆ. ನಕ್ಸಲ್ ಚಟುವಟಿಕೆ ಕಡಿಮೆಯಾಗಿದೆ. ಭಾರತದ ಮಣಿಪುರ, ಕೇರಳ, ಮಹಾರಾಷ್ಟ್ರ ಹೀಗೆ ಯಾವುದೇ ರಾಜ್ಯದಲ್ಲಿ ಕೆಟ್ಟ ಘಟನೆಗಳು ನಡೆದರೆ ಅದು ಭಾರತದ ಅವಿಭಾಜ್ಯ ಅಂಗಕ್ಕೆ ದಕ್ಕೆಯಾದಂತೆ ಎಂದರು.
ಕೃಷಿ ವಲಯದಲ್ಲಿ ಡ್ರೋನ್ ಬಳಕೆ ಆದ್ಯತೆ ನೀಡಲಾಗುವುದು. ಮಹಿಳಾ ಸ್ವ ಸಹಾಯ ಗುಂಪುಗಳಿಗೆ ಟ್ರೈನಿಂಗ್ ನೀಡಲಾಗುವುದು. ಮೊದಲ ಹಂತದಲ್ಲಿ ಹದಿನೈದು ಸಾವಿರ ಗುಂಪುಗಳ ಮೂಲಕ ಕೆಲಸ ಆರಂಭಿಸಲಿದ್ದೇವೆ. ಮಾತೃ ಭಾಷೆಗಳಿಗೆ ಆದ್ಯತೆ ನೀಡಲಾಗುತ್ತಿದೆ. ಕೋರ್ಟ್ ಆದೇಶಗಳು ಮಾತೃ ಭಾಷೆಯಲ್ಲೇ ಇರಲಿದೆ. ಸುಪ್ರೀಂ ಕೋರ್ಟ್ ಈ ಬಗೆಗೆ ನಿರ್ಧಾರ ತೆಗೆದುಕೊಂಡಿದೆ ಎಂದು ಹೇಳಿದರು.
Web Stories