ಮೈಸೂರು: ನಗರದಲ್ಲಿ 77 ವರ್ಷದ ವೃದ್ಧರೊಬ್ಬರು ಮಹಾಮಾರಿ ಕೊರೊನಾವನ್ನು ಗೆದ್ದು ಬೀಗಿದ್ದು, ಇಂದು ಆಸ್ಪತ್ರೆಯಿಂದ ಬಿಡುಗಡೆ ಆಗಲಿದ್ದಾರೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ವೆಂಕಟೇಶ್ ತಿಳಿಸಿದ್ದಾರೆ.
ಈ ಸಂಬಂಧ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ರೋಗಿ 273 ಆಗಿರೋ 77 ವರ್ಷದ ವೃದ್ಧ ಇಂದು ಡಿಸ್ಚಾರ್ಜ್ ಆಗುತ್ತಿದ್ದಾರೆ. ಇದು ಸಂತೋಷದ ವಿಚಾರ. ನಿಜಾಮುದ್ದೀನ್ ತಬ್ಲಿಘಿಗಳಲ್ಲಿ ಈಗಾಗಲೇ 8 ಜನ ಗುಣಮುಖರಾಗಿದ್ದಾರೆ. ಕೇವಲ 2 ಮಂದಿ ಮಾತ್ರ ಆಸ್ಪತ್ರೆಯಲ್ಲಿದ್ದಾರೆ. ಅವರು ಕೂಡ ಬೇಗ ಡಿಸ್ಚಾರ್ಜ್ ಆಗಲಿದ್ದಾರೆ. ಆದಷ್ಟು ಬೇಗ ಮೈಸೂರು ಕೊರೊನಾ ಮುಕ್ತವಾಗಲಿದೆ ಎಂದು ಅವರು ಮಾಹಿತಿ ನೀಡಿದರು. ಇದನ್ನೂ ಓದಿ: ಶುಭ ಸುದ್ದಿ, ಕೊರೊನಾ ಗೆದ್ದ ವೃದ್ಧ ದಂಪತಿ ಡಿಸ್ಚಾರ್ಜ್- ಆಹಾರ ಏನಿತ್ತು?
Advertisement
Advertisement
ಮೈಸೂರಲ್ಲಿ ಕೊರೊನಾ ಸೋಂಕಿಗೆ ಒಳಗಾಗಿರುವ 7 ಮಂದಿ ಗುಣಮುಖರಾಗಿ ಇಂದು ಡಿಸ್ಚಾರ್ಜ್ ಆಗಲಿದ್ದಾರೆ. ಒಂದು ವೇಳೆ ಇಂದು ಕೊರೊನಾ ಪ್ರಕರಣ ಪತ್ತೆಯಾಗದೇ ಇದ್ದರೆ ಜಿಲ್ಲೆಯಲ್ಲಿ ಆಕ್ಟೀವ್ ಕೊರೊನಾ ಕೇಸ್ 46ರಿಂದ 39ಕ್ಕೆ ಇಳಿಕೆಯಾಗಲಿದೆ. ಈ ಮೂಲಕ ಕೊರೊನಾ ರೆಡ್ ಝೋನ್ ಆಗಿರೋ ಮೈಸೂರಲ್ಲಿ ಸಮಾಧಾನದ ನಿಟ್ಟುಸಿರು ಬಿಡುವಂತಾಗಿದೆ. ಇದನ್ನೂ ಓದಿ: ಕೋವಿಡ್ 19 ಗೆದ್ದ ವ್ಹೀಲ್‌ಚೇರ್‌ನಲ್ಲಿ ಓಡಾಡೋ 92 ವರ್ಷದ ಅಜ್ಜಿ