ಮುಂಬೈ: ಬಾಲಿವುಡ್ ಬಿಗ್- ಬಿ ಅಮಿತಾಬ್ ಬಚ್ಚನ್ ಅವರ ಲಿವರ್ ಶೇ. 75ರಷ್ಟು ಹಾಳಾಗಿದ್ದು, ಕೇವಲ ಶೇ. 25ರಷ್ಟು ಲಿವರ್ ಸಹಾಯದಿಂದ ಬದುಕುತ್ತಿದ್ದಾರೆ.
ಅಮಿತಾಬ್ ಅವರು ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ‘ಕೌನ್ ಬನೇಗಾ ಕರೋಡ್‍ಪತಿ’ ಕಾರ್ಯಕ್ರಮದಲ್ಲಿ ಬ್ಯುಸಿಯಾಗಿದ್ದಾರೆ. ಈ ಕಾರ್ಯಕ್ರಮದ 11ನೇ ಸೀಸನ್ ಸೋಮವಾರ ರಾತ್ರಿಯಿಂದ ಶುರುವಾಗಿದೆ. ಈ ವೇಳೆ ಅವರು ತಮ್ಮ ಆರೋಗ್ಯದ ಬಗ್ಗೆ ಬಹಿರಂಗವಾಗಿ ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಅಮಿತಾಬ್, ಜನರು ತಮ್ಮ ದೇಹದ ರೆಗ್ಯೂಲರ್ ಚೆಕಪ್ ಮಾಡಿಸುತ್ತಾನೆ ಇರಬೇಕು ಎಂದರು. ಬಳಿಕ ತಮ್ಮ ಉದಾಹರಣೆ ನೀಡಿ, ನನ್ನ ಲಿವರ್ ಶೇ. 75ರಷ್ಟು ಹಾಳಾಗಿದ್ದು, ಕೇವಲ ಶೇ. 25ರಷ್ಟು ಲಿವರ್ ಸಹಾಯದಿಂದ ಬದುಕುತ್ತಿದ್ದೇನೆ ಎಂದು ವಿಷಯ ನನಗೆ ತಿಳಿಯಿತು. ನನಗೆ ಟ್ಯೂಬರ್‌ಕ್ಯೂಲೋಸಿಸ್ ಸಮಸ್ಯೆ ಹಾಗೂ ಹಲವು ಸಮಸ್ಯೆಗಳು ಇದೆ. ಸಮಯಕ್ಕೆ ಸರಿಯಾಗಿ ರೋಗಗಳು ಪತ್ತೆಯಾದರೆ ಅವುಗಳ ಚಿಕಿತ್ಸೆ ಸಾಧ್ಯ ಎಂದು ಹೇಳಿದ್ದಾರೆ.
ಅಮಿತಾಬ್ ಅವರು 76ನೇ ವಯಸ್ಸಿನಲ್ಲೂ ಫಿಟ್ ಆಗಿರುತ್ತಾರೆ. ಅಲ್ಲದೆ ನಿರಂತರವಾಗಿ ಸಿನಿಮಾಗಳಲ್ಲಿ ಬ್ಯುಸಿಯಾಗಿರುತ್ತಾರೆ. ಅಮಿತಾಬ್ ಅವರಿಗೆ ಹಲವು ಸಮಸ್ಯೆಗಳು ಇದೆ. ಆದರೆ ಅವರು ತಮ್ಮ ಸಮಸ್ಯೆಗಳನ್ನು ಬೇರೆಯವರ ಬಳಿ ಹೇಳಿಕೊಳ್ಳುವುದಿಲ್ಲ. ಸದ್ಯ ಅಮಿತಾಬ್ ‘ಬದ್ಲಾ’ ಚಿತ್ರದಲ್ಲಿ ನಟಿಸಿದ್ದಾರೆ. ಕೆಲವು ದಿನಗಳ ಹಿಂದೆ ಅವರು ‘ಗುಲಾಬೋ ಸಿತಾಬೋ’ ಚಿತ್ರದ ಶೂಟಿಂಗ್ ಪೂರ್ಣಗೊಳಿಸಿದ್ದಾರೆ. ಈ ಚಿತ್ರಗಳನ್ನು ಹೊರತುಪಡಿಸಿ ಅಮಿತಾಬ್, ‘ಬ್ರಹ್ಮಾಸ್ತ್ರ’, ‘ಚೆಹರೆ’ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.