ಬೆಂಗಳೂರು: ಭಾರತಕ್ಕೆ ಸ್ವಾತಂತ್ರ‍್ಯ ಬಂದು 75 ನೇ ವರ್ಷದ ಸಂಭ್ರಮಕ್ಕೆ ದಿನಗಣನೆ ಶುರುವಾಗಿದೆ. ಆಗಸ್ಟ್ 15ಕ್ಕೆ ಭಾರತಕ್ಕೆ ಬ್ರಿಟಿಷರಿಂದ ಸ್ವಾತಂತ್ರ‍್ಯ ಸಿಕ್ಕಿ 75 ವರ್ಷಗಳು ತುಂಬುತ್ತಿದೆ. ಈ ಅಮೃತ ಸ್ವಾತಂತ್ರ‍್ಯ ಉತ್ಸವವನ್ನು ಮತ್ತಷ್ಟು ಸಂಭ್ರಮದಿಂದ ಆಚರಣೆ ಮಾಡಲು ಎಲ್ಲರೂ ಸಿದ್ಧರಾಗುತ್ತಿದ್ದಾರೆ.
Advertisement
ಪ್ರಧಾನಿ ನರೇಂದ್ರ ಮೋದಿ ಮನೆ ಅವರು ಮನೆಯಲ್ಲೂ ರಾಷ್ಟ್ರ ಧ್ವಜವನ್ನು ಹಾರಿಸಲು ಕರೆ ನೀಡಿರುವುದು ಗೊತ್ತೇ ಇದೆ. ಭಾರತದ ಸ್ವಾತಂತ್ರ‍್ಯ ಹೋರಾಟದಲ್ಲಿ ಭಾಗಿಯಾಗಿದ್ದ ಕಾಂಗ್ರೆಸ್ ಪಕ್ಷ ಸಹ ಭಾರತದ 75ನೇ ಸ್ವಾತಂತ್ರ‍್ಯ ದಿನಚಾರಣೆಯ ಪ್ರಯುಕ್ತ ಫ್ರೀಡಂ ರ‍್ಯಾಲಿಗೆ ಕರೆ ನೀಡಿದೆ. ಇದನ್ನೂ ಓದಿ: ಹೈಕಮಾಂಡ್ ಅವಕಾಶ ಕೊಟ್ಟರೇ ನಾವು ಸಿದ್ದರಾಮೋತ್ಸವಕ್ಕಿಂತಲೂ ಹೆಚ್ಚು ಜನರನ್ನು ಸೇರಿಸುತ್ತೇವೆ: ಕೆ.ಪಿ.ನಂಜುಂಡಿ
Advertisement
Advertisement
ಫ್ರೀಡಂ ಮಾರ್ಚ್ ಪ್ರಯುಕ್ತ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 75 ಕಿ.ಮೀ ನಡಿಗೆ ಮಾಡುವ ಕಾರ್ಯಕ್ರಮಕ್ಕೆ ಕೆಪಿಸಿಸಿ ಕರೆ ನೀಡಿದ್ದು, ಅದರ ಪ್ರಯುಕ್ತ ಇಂದು ಸರ್ವಜ್ಞ ನಗರ ವಿಧಾನಸಭಾ ಕ್ಷೇತ್ರದ ಗೋವಿಂದಪುರ ವಾರ್ಡ್ನ ಕಾಂಗ್ರೆಸ್ ಕಾರ್ಯಕರ್ತರು ರ‍್ಯಾಲಿಗೆ ಚಾಲನೆ ನೀಡಿದರು.
Advertisement
ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಸೈಯದ್ ಆಲಿ ನೇತೃತ್ವದಲ್ಲಿ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ಗೋವಿಂದಪುರ ವಾರ್ಡ್‌ನಲ್ಲಿ 9 ಕಿ.ಮೀ ಫ್ರೀಡಂ ಮಾರ್ಚ್ ಮಾಡಿದರು. 75 ಮೀ. ಉದ್ದದ ತ್ರಿವರ್ಣ ಧ್ವಜವನ್ನು ಇಡೀ ವಾರ್ಡ್‌ನಲ್ಲಿ ಪ್ರದರ್ಶನ ಮಾಡಿದ್ದು ವಿಶೇಷವಾಗಿತ್ತು. 75 ಮೀ. ಉದ್ದದ ತ್ರಿವರ್ಣ ಧ್ವಜವನ್ನು 500 ಜನ ಹಿಡಿದುಕೊಂಡು ನಡಿಗೆಯಲ್ಲಿ ಭಾಗಿಯಾಗಿದ್ದರು. ಇದನ್ನೂ ಓದಿ: ಪ್ರಧಾನಿ ಬಂದಾಗ ಮಾತ್ರ ರಸ್ತೆ ಮಾಡಿಸ್ತೀರಾ; ನಮ್ಮ ಮಕ್ಕಳು ಒಳ್ಳೆ ರಸ್ತೆಯಲ್ಲಿ ಓಡಾಡಬಾರದಾ – ಪ್ರಕಾಶ್ ರಾಜ್ ಪ್ರಶ್ನೆ