ಕೋಲ್ಕತ್ತಾ: ಸುಂದರ್ ಬನ್ಸ್ ನದಿಯಲ್ಲಿ ಸಿಕ್ಕಿಬಿದ್ದ 75 ಕೆಜಿಯ ದೈತ್ಯ ಮೀನನ್ನು 36 ಲಕ್ಷ ರೂಪಾಯಿಗೆ ಮಾರಾಟ ಮಾಡಿರುವುದು ಸುದ್ದಿಯಾಗಿದೆ.
ಸುಮಾರು 7 ಅಡಿ ಉದ್ದ ಮತ್ತು 78.4 ಕಿಲೋ ತೂಕದ ದೈತ್ಯಾಕಾರದ ಟೆಲಿಯಾ ಭೋಲಾ ಮೀನು ಇದಾಗಿದೆ. ಈ ಬೃಹತ್ ಗಾತ್ರದ ಮೀನು ಹಿಡಿದ 5 ಜನ ಮೀನುಗಾರರಿಗೆ ಆಶ್ಚರ್ಯವಾಗಿತ್ತು. ತಮ್ಮ ಬಲೆಗೆ ಸಿಕ್ಕಿಬಿದ್ದ ಬೃಹತ್ ಮೀನುಗಳನ್ನು ಮೇಲಕ್ಕೆ ಎಳೆದು ತಂದಿದ್ದರು. ಈ ಬೃಹತ್ ಮತ್ತು ಅಪರೂಪದ ಮೀನನ್ನು ನೋಡಲು ಸ್ಥಳೀಯರು ಜಮಾಯಿಸಿದರು. ಇದನ್ನೂ ಓದಿ: ಚಿಕ್ಕಬಳ್ಳಾಪುರದಲ್ಲಿ ಮಳೆ ಅವಾಂತರ- ಹೂ ತೋಟಗಳು ಜಲಾವೃತ
Advertisement
Advertisement
ಬಲೆಗೆ ಬಿದ್ದ ದೈತ್ಯ ಮೀನನ್ನು ಮೀನುಗಾರರು ಸಂಜೆ ಕ್ಯಾನಿಂಗ್ ಮಾರುಕಟ್ಟೆಗೆ ಹರಾಜಿಗಾಗಿ ತಂದರು. ಇದೇ ಮೊದಲ ಬಾರಿಗೆ ಇಷ್ಟೊಂದು ಬೃಹತ್ ಗಾತ್ರದ ಮೀನನ್ನು ಹರಾಜಿಗಾಗಿ ಮಾರುಕಟ್ಟೆಗೆ ತರಲಾಗಿದೆ ಎಂದು ಮೀನುಗಾರರೊಬ್ಬರು ತಿಳಿಸಿದ್ದಾರೆ. ಈ ಮೀನನ್ನು 36, 53,605 ರೂಪಾಯಿಗೆ ಹರಾಜು ಮಾಡಲಾಗಿದ್ದು, ಕೋಲ್ಕತ್ತಾ ಮೂಲದ ಕೆಎಂಪಿ ಎಂಬ ಮೀನು ವ್ಯಾಪಾರ ಕಂಪನಿ ಅದನ್ನು ಖರೀದಿಸಿದೆ ಎಂದು ಖಾಸಗಿವಾಹಿನಿಯೊಂದು ವರದಿ ಮಾಡಿದೆ. ಇದನ್ನೂ ಓದಿ: ಬೆಂಗಳೂರು ನಗರ ಸೇರಿ 15 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್
Advertisement
Advertisement
ಈ ಮಾರುಕಟ್ಟೆಯಲ್ಲಿ ಅಂತಹ ದೈತ್ಯ ಮೀನನ್ನು ನಾವು ನೋಡಿರಲಿಲ್ಲ. ಹರಾಜಿನಲ್ಲಿ ಪ್ರತಿ ಕಿಲೋಗೆ ರೂ.47,880 ದರದಲ್ಲಿ ಮೀನನ್ನು ಮಾರಾಟ ಮಾಡಲಾಗಿದೆ ವ್ಯಾಪಾರಿಯೊಬ್ಬರು ಹೇಳಿದ್ದಾರೆ.
ಈ ಮೀನು ತುಂಬಾ ದುಬಾರಿ ಯಾಕೆ?: ಮೀನುಗಾರರ ಪ್ರಕಾರ, ಆಡುಮಾತಿನಲ್ಲಿ ಟೆಲಿಯಾ ಭೋಲಾ ಎಂದು ಕರೆಯಲ್ಪಡುವ ಈ ದೈತ್ಯ ಮೀನು ಅಪಾರ ಪ್ರಮಾಣದ ಔಷಧೀಯ ಮೌಲ್ಯವನ್ನು ಹೊಂದಿದೆ. ಮೀನಿನ ಹೊಟ್ಟೆಯಲ್ಲಿ ಕೆಲವು ಅಮೂಲ್ಯವಾದ ಸಂಪನ್ಮೂಲಗಳಿವೆ ಎಂದು ಹೇಳಲಾಗುತ್ತದೆ. ಅದು ತುಂಬಾ ದುಬಾರಿಯಾಗಿದೆ. ಈ ಮೀನು ಸಾಗರೋತ್ತರ ಮಾರುಕಟ್ಟೆಗಳಲ್ಲಿ ಹೆಚ್ಚಿನ ಬೇಡಿಕೆಯಿದೆ ಮತ್ತು ಔಷಧಿಗಳ ತಯಾರಿಕೆಯಲ್ಲಿ ಬಳಸಲು ರಫ್ತು ಮಾಡಲಾಗುತ್ತದೆ ಎಂದಿದ್ದಾರೆ.
ಇತ್ತೀಚೆಗೆ, ಮಹಾರಾಷ್ಟ್ರದ ಪಾಲ್ಘರ್‍ನಲ್ಲಿ ಮೀನುಗಾರರೊಬ್ಬರು 1.33 ಕೋಟಿ ಮೌಲ್ಯದ 157 ಘೋಲ್ ಮೀನುಗಳನ್ನು ಹಿಡಿದಿದ್ದರು. ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಹೆಚ್ಚಾಗಿ ಕಂಡುಬರುವ ಘೋಲ್ ಮೀನು ವಿಶ್ವದ ಅತ್ಯಂತ ದುಬಾರಿ ಸಮುದ್ರ ಮೀನುಗಳಲ್ಲಿ ಒಂದಾಗಿದೆ. ಪೂರ್ವ ಏಷ್ಯಾದಲ್ಲಿ ಮೀನನ್ನು ಅದರ ಔಷಧೀಯ ಗುಣಗಳಿಗಾಗಿ ಪ್ರಶಂಶಿಸಲಾಗುತ್ತದೆ.