ಡಮಾಸ್ಕಸ್: ಯುದ್ಧಪೀಡಿತ ಸಿರಿಯಾದಿಂದ 75 ಮಂದಿ ಭಾರತೀಯರನ್ನು (Indians) ಸ್ಥಳಾಂತರಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಬುಧವಾರ ಮಾಹಿತಿ ನೀಡಿದೆ. ಅಲ್ಲದೇ ವಿದೇಶದಲ್ಲಿರುವ ಭಾರತೀಯ ಪ್ರಜೆಗಳ ಸುರಕ್ಷತೆ ಮತ್ತು ಭದ್ರತೆಗೆ ಹೆಚ್ಚಿನ ಒತ್ತು ನೀಡುತ್ತದೆ ಎಂದು ಒತ್ತಿ ಹೇಳಿದೆ.
Press release: Evacuation of Indian Nationals from Syria ⬇️https://t.co/7bESmhpKK2
— Randhir Jaiswal (@MEAIndia) December 10, 2024
Advertisement
ಇಸ್ಲಾಮಿಕ್ ಬಂಡುಕೋರು ಸಿರಿಯಾ (Syria) ಅಧ್ಯಕ್ಷ ಬಶರ್ ಅಲ್ ಅಸ್ಸಾದ್ (Bashar al-Assad) ಸರ್ಕಾರವನ್ನು ಪತನಗೊಳಿಸಿದ್ದು, ಸ್ವತಂತ್ರ ಸರ್ಕಾರ ರಚಿಸಲು ಮುಂದಾಗಿದ್ದಾರೆ. ಈ ಬೆಳವಣಿಗಳ ನಡುವೆ 75 ಭಾರತೀಯ ಪ್ರಜೆಗಳನ್ನು ಸಿರಿಯಾದಿಂದ ಸ್ಥಳಾಂತರಿಸಲಾಗಿದೆ. ಸ್ಥಳಾಂತರಿಸಿದವರಲ್ಲಿ ಸೈದಾ ಜೈನಾಬ್‌ನಲ್ಲಿ ಸಿಲುಕಿದ್ದ ಜಮ್ಮು ಮತ್ತು ಕಾಶ್ಮೀರದ 44 ‘ಜೈರೀನ್’ಗಳೂ (ಯಾತ್ರಿಕರೂ) ಸೇರಿದ್ದಾರೆ. ಇದನ್ನೂ ಓದಿ: ಕಣ್ಮರೆಯಾಗಿದ್ದ ವಿಮಾನ ಮಾಸ್ಕೋದಲ್ಲಿ ಲ್ಯಾಂಡ್ – ಪದಚ್ಯುತ ಸಿರಿಯಾ ಅಧ್ಯಕ್ಷ ಅಸ್ಸಾದ್‌ಗೆ ಪುಟಿನ್ ರಾಜಾಶ್ರಯ
Advertisement
Advertisement
ಎಲ್ಲಾ ಭಾರತೀಯ ಪ್ರಜೆಗಳು ಸುರಕ್ಷಿತವಾಗಿ ಲೆಬನಾನ್‌ಗೆ ದಾಟಿದ್ದು, ಲಭ್ಯವಿರುವ ವಾಣಿಜ್ಯ ವಿಮಾನಗಳ ಮೂಲಕ ಭಾರತಕ್ಕೆ ಹಿಂತಿರುಗುತ್ತಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. ಇದನ್ನೂ ಓದಿ: ನೋವಿಲ್ಲದ ಸಾವಿಗೆ ರಹದಾರಿ – ಯುಕೆನಲ್ಲಿ ಹೊಸ ಮಸೂದೆ ಮಂಡನೆ!
Advertisement
ಭಾರತ ಸರ್ಕಾರವು ವಿದೇಶದಲ್ಲಿರುವ ಭಾರತೀಯ ಪ್ರಜೆಗಳ ಸುರಕ್ಷತೆ ಮತ್ತು ಭದ್ರತೆಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಿದೆ. ಸಿರಿಯಾದಲ್ಲಿ ಉಳಿದಿರುವ ಭಾರತೀಯ ಪ್ರಜೆಗಳು ಡಮಾಸ್ಕಸ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯೊಂದಿಗೆ ಅವರ ತುರ್ತು ಸಹಾಯವಾಣಿ ಸಂಖ್ಯೆ +963 993385973 (ವಾಟ್ಸಾಪ್‌ನಲ್ಲಿಯೂ ಸಹ) ಮತ್ತು ಇಮೇಲ್ ಐಡಿ ([email protected])ಯೊಂದಿಗೆ ಸಂಪರ್ಕದಲ್ಲಿರಲು ಸೂಚಿಸಲಾಗಿದೆ. ಭಾರತ ಸರ್ಕಾರವು ಸಿರಿಯಾ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಹೇಳಿದೆ. ಇದನ್ನೂ ಓದಿ: ಉಗ್ರರು ಕೈವಶ ಮಾಡಿದ ಬೆನ್ನಲ್ಲೇ ಸಿರಿಯಾದ ಮೇಲೆ ಅಮೆರಿಕ ವಾಯು ದಾಳಿ