StatesBengaluru CityDistrictsKarnatakaLatestLeading NewsMain Post

ಪ್ರಪ್ರಥಮ ಬಾರಿಗೆ ಚಾಮರಾಜಪೇಟೆ ಮೈದಾನದಲ್ಲಿ ಗಣರಾಜ್ಯೋತ್ಸವ ಆಚರಣೆ

ಬೆಂಗಳೂರು: ಪ್ರಪ್ರಥಮ ಬಾರಿಗೆ ಚಾಮರಾಜಪೇಟೆ (Chamarajapete) ಮೈದಾನದಲ್ಲಿ ಗಣರಾಜ್ಯೋತ್ಸವ ಆಚರಣೆ ನಡೆಯಿತು. ಸಮಯಕ್ಕೆ ಸರಿಯಾಗಿ ಬೆಳಿಗ್ಗೆ 8ಕ್ಕೆ ಧ್ವಜಾರೋಹಣ ನೆರವೇರಿಸಲಾಯಿತು. ಕಂದಾಯ ಇಲಾಖೆಯಿಂದಲೇ ಸ್ವಾತಂತ್ರ್ಯ ದಿನಾಚರಣೆಯ ರೀತಿಯಲ್ಲಿ ಕಾರ್ಯಕ್ರಮ ನಡೆಯಿತು.

ಪ್ರಪ್ರಥಮ ಬಾರಿಗೆ ಚಾಮರಾಜಪೇಟೆ ಮೈದಾನದಲ್ಲಿ ಗಣರಾಜ್ಯೋತ್ಸವ ಆಚರಣೆ

ಧ್ವಜರೋಹಣವನ್ನು ಬೆಂಗಳೂರು ಉತ್ತರ ಅಸಿಸ್ಟೆಂಟ್ ಕಮೀಷನರ್ ಡಾ.ಶಿವಣ್ಣ ನೆರವೇರಿಸಿದರು. ಬೆಂಗಳೂರು ಕೇಂದ್ರ ಸಂಸದ ಪಿಸಿ ಮೋಹನ್ (PC Mohan), ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ (Zameer Ahmed) ಉಪಸ್ಥಿತರಿದ್ದರು. 100ಕ್ಕೂ ಅಧಿಕ ಶಾಲ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಬ್ಯಾಂಡ್ ಸೆಟ್, ಕಂಸಾಳೆ ಸೇರಿದಂತೆ ಹಲವು ವಿಶೇಷತೆಗಳು ನೋಡುಗರ ಕಣ್ಮನ ಸೆಳೆಯಿತು. ಸಂತ ತೆರೆಸ ಬಾಲಕಿಯರ ಶಾಲೆ, ಚಾಮರಾಜಪೇಟೆ ಬಾಲಕಿಯರ ಶಾಲೆ, ಸರ್ಕಾರಿ ಕನ್ನಡ, ಆಂಗ್ಲ ಪ್ರಾಥಮಿಕ ಶಾಲೆ ಸೇರಿದಂತೆ 5 ಶಾಲೆಗಳಿಂದ ಮಕ್ಕಳು ಭಾಗಿಯಾಗಿದ್ದರು.ಇದನ್ನೂ ಓದಿ: 74ನೇ ಗಣರಾಜ್ಯೋತ್ಸವಕ್ಕೆ ಕರ್ತವ್ಯಪಥ ಸಜ್ಜು- ಪರೇಡ್‍ನಲ್ಲಿ ಮಿಂಚಲಿದೆ ಕರ್ನಾಟಕ ಟ್ಯಾಬ್ಲೋ

ಪ್ರಪ್ರಥಮ ಬಾರಿಗೆ ಚಾಮರಾಜಪೇಟೆ ಮೈದಾನದಲ್ಲಿ ಗಣರಾಜ್ಯೋತ್ಸವ ಆಚರಣೆ

ಚಾಮರಾಜಪೇಟೆ ನಾಗರೀಕರಿಂದ ಜೈಕಾರ: ಸನಾತನ ಹಿಂದೂಧರ್ಮಕ್ಕೆ ಜೈ ಮತ್ತು ಭಾರತಮಾತೆಗೆ ಜೈಕಾರವನ್ನು ಕಾರ್ಯಕ್ರಮದ ವೇಳೆ ಚಾಮರಾಜಪೇಟೆ ನಾಗರೀಕರು ಕೂಗಿದರು.

ಸಿಸಿಟಿವಿ ಮಾನಿಟರಿಂಗ್: ಕಾರ್ಯಕ್ರಮ ಮುಗಿದ ನಂತರ ಮೈದಾನದಿಂದ ನಿರ್ಗಮಿಸಲು ಸೂಚನೆ ನೀಡಲಾಯಿತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರೂ ಸಜ್ಜಾಗಿದ್ದರು. ಸಿಸಿಟಿವಿ ಅಳವಡಿಸಿ ಮಾನಿಟರಿಂಗ್ ಮಾಡುವುದಕ್ಕೆ ಕೊಠಡಿ ಸಜ್ಜು ಮಾಡಲಾಗಿತ್ತು. ಒಟ್ಟಿನಲ್ಲಿ ಬಿಗಿ ಪೊಲೀಸ್ ಭದ್ರತೆಯಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು.

ಸರ್ಕಾರಕ್ಕೆ ಮತ್ತೆ ಈದ್ಗಾ ವಿವಾದ ಟೆನ್ಷನ್- ಜ. 21ರೊಳಗೆ ನಿಲುವು ಪ್ರಕಟಿಸಲು ಡೆಡ್‍ಲೈನ್

ಚಾಮರಾಜಪೇಟೆ ನಾಗರೀಕರ ಒಕ್ಕೂಟಕ್ಕೆ ಸಿಕ್ಕ ಜಯ: ಇದು ಚಾಮರಾಜಪೇಟೆ ನಾಗರೀಕರ ಒಕ್ಕೂಟ ಹಾಗೂ ಹಿಂದೂ ಸಂಘಟನೆಗಳ ಹೋರಾಟಕ್ಕೆ ದಕ್ಕಿದ ಪ್ರತಿಫಲವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಲಾಗುತ್ತಿದ್ದು, ಧ್ವಜಾರೋಹಣ ಮಾತ್ರವಲ್ಲದೆ ಸಾಂಸ್ಕೃತಿಕ ಕಾರ್ಯಕ್ರಮಕ್ಕೂ ಅವಕಾಶಕ್ಕೆ ಒಕ್ಕೂಟ ಒತ್ತಾಯ ಮಾಡಿದ್ದರು. ನಮ್ಮ ದೇಶದ ಹಬ್ಬವನ್ನು ಆಚರಿಸಲು ಯಾಕೆ ಹಿಂದೇಟು ಹಾಕಬೇಕು ಎಂದು ಪ್ರಶ್ನೆ ಕೇಳಿದ್ದರು. ಸೂಕ್ಷ್ಮ ಪ್ರದೇಶವಾಗಿರುವುದರಿಂದ ಇತರ ಕಾರ್ಯಕ್ರಮಗಳಿಗೆ ಅವಕಾಶವಿಲ್ಲ ಎಂದು ಈ ಮೊದಲು ಎನ್ನಲಾಗಿತ್ತು.

Live Tv

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Leave a Reply

Your email address will not be published. Required fields are marked *

Back to top button