– ಮೋದಿ ಭಾರತದ ಅತ್ಯಂತ ಯಶಸ್ವಿ ಪ್ರಧಾನಿ
ನವದೆಹಲಿ: ಅಯೋಧ್ಯೆಯಲ್ಲಿ ರಾಮಮಂದಿರ (Ayodhya Ram Mandir) ನಿರ್ಮಾಣದಿಂದ 74% ಮುಸ್ಲಿಮರು ಸಂತಸಗೊಂಡಿದ್ದಾರೆ. ಅಲ್ಲದೇ ಪ್ರಧಾನಿ ನರೇಂದ್ರ ಮೋದಿಯವರು (Narendra Modi) ಭಾರತದ ಅತ್ಯಂತ ಯಶಸ್ವಿ ಪ್ರಧಾನಿ ಎಂದು ಅವರೆಲ್ಲ ನಂಬಿದ್ದಾರೆ ಎಂದು ರಾಷ್ಟ್ರೀಯವಾದಿ ಮುಸ್ಲಿಂ ಸಂಘಟನೆ `ಮುಸ್ಲಿಂ ರಾಷ್ಟ್ರೀಯ ಮಂಚ್’ (Muslim Rashtriya Manch) ಹೇಳಿಕೊಂಡಿದೆ.
ಗುಜರಾತ್‍ನ ಸ್ವತಂತ್ರ ಸಂಶೋಧನಾ ಮತ್ತು ಸಮೀಕ್ಷಾ ಸಂಸ್ಥೆ `ಆಯುರ್ವೇದ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್’ ಮೂಲಕ ದೇಶದ ಮುಸ್ಲಿಮರ ಸಮೀಕ್ಷೆ ನಡೆಸಿ ಈ ಬಗ್ಗೆ ವರದಿ ಬಿಡುಗಡೆ ಮಾಡಿದೆ. ಅದರಲ್ಲಿ ಈ ಅಂಶವನ್ನು ಉಲ್ಲೇಖಿಸಲಾಗಿದೆ ಎಂದು ಪತ್ರಿಕಾ ಪ್ರಕಟಣೆಯಯಲ್ಲಿ ಎಂಆರ್‍ಎಂ ತಿಳಿಸಿದೆ. ಇದನ್ನೂ ಓದಿ: ರಾಮಮಂದಿರ ಪ್ರಾಣಪ್ರತಿಷ್ಠೆಗೆ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್‌ಗೆ ಆಹ್ವಾನ
ಸಮೀಕ್ಷಾ ವರದಿಯಲ್ಲಿ, ಭಗವಾನ್ ರಾಮನು ಜನಮನದಲ್ಲಿ ನೆಲೆಸಿದ್ದಾನೆ. ಮೋದಿ ಭಾರತದ ಅತ್ಯಂತ ಯಶಸ್ವಿ ಪ್ರಧಾನಿಯಾಗಿದ್ದು ಅವರ ಮಾತುಗಳನ್ನು ಭಾರತ ಮಾತ್ರವಲ್ಲದೆ ಇಡೀ ಜಗತ್ತು ಕೇಳುತ್ತದೆ ಮತ್ತು ಸ್ವೀಕರಿಸುತ್ತದೆ. ಅಲ್ಲದೇ ಅಸಂಖ್ಯಾತ ಮುಸ್ಲಿಮರು ಇಸ್ಲಾಮ್ ಹೆಸರಿನಲ್ಲಿ ತಮ್ಮ ರಾಜಕೀಯ ಹಿತಾಸಕ್ತಿಗೆ ಪ್ರಯತ್ನಿಸುತ್ತಿರುವ ಉಲೇಮಾಗಳು, ಮೌಲಾನಾಗಳು ಮತ್ತು ವಿರೋಧ ಪಕ್ಷದ ನಾಯಕರನ್ನು ಸಂಪೂರ್ಣವಾಗಿ ಬಹಿಷ್ಕರಿಸಬೇಕೆಂದು ಬಯಸುತ್ತಾರೆ ಎಂದು ಸಮೀಕ್ಷಾ ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಎಂಆರ್‍ಎಂ ಹೇಳಿಕೊಂಡಿದೆ.
ಸಮೀಕ್ಷೆಯ ವೇಳೆ ಅಸಂಖ್ಯಾತ ಮುಸ್ಲಿಮರು ಜೈ ಶ್ರೀರಾಮ್ ಎಂದು ಬಹಿರಂಗವಾಗಿ ಹೇಳಿದ್ದಾರೆ. ಮಂದಿರ ನಿರ್ಮಾಣದಿಂದ 74%ರಷ್ಟು ಮುಸ್ಲಿಮರು ಸಂತಸಗೊಂಡಿದ್ದಾರೆ. 70%ರಷ್ಟು ಮುಸ್ಲಿಮರು ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ನಂಬಿದ್ದಾರೆ. ಇವರೆಲ್ಲ ಭಾರತ ವಿಶ್ವಶಕ್ತಿಯಾಗಿ ಹೊರಹೊಮ್ಮಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಮೋದಿ ಸರ್ಕಾರದ ಅಡಿಯಲ್ಲಿ ಮುಸ್ಲಿಮರು ಸುರಕ್ಷಿತರಾಗಿದ್ದಾರೆ. ಅಲ್ಲದೇ ಎಲ್ಲರಿಗೂ ಅಭಿವೃದ್ಧಿಗೆ ಸಮಾನ ಅವಕಾಶವಿದೆ ಎಂದು ಹೇಳಿಕೊಂಡಿದ್ದಾರೆ ಎಂದು ಸಮೀಕ್ಷೆಯ ವರದಿಯಲ್ಲಿ ಹೇಳಲಾಗಿದೆ.
ಸಮೀಕ್ಷೆಯ ವೇಳೆ ಹೆಚ್ಚಿನ ಜನ, ಇಸ್ಲಾಂ ಧರ್ಮದಲ್ಲಿ ಅನ್ಯ ಧರ್ಮದವರ ಪವಿತ್ರ ಸ್ಥಳವನ್ನು ನಾಶಮಾಡಿ ನಿರ್ಮಿಸಿದ ಮಸೀದಿಯಲ್ಲಿ ಪೂಜೆ ಸಲ್ಲಿಸುವುದು ಹರಾಮ್ ಎಂದು ಬಹಿರಂಗವಾಗಿ ಹೇಳಿದ್ದಾರೆ ಎಂದು ಎಂಆರ್‍ಎಂ ಹೇಳಿಕೊಂಡಿದೆ. ಇದನ್ನೂ ಓದಿ: ಬೆಂಗಳೂರಿನ ಮಾಲ್‍ಗಳಲ್ಲಿ ರಂಗೋಲಿಯಲ್ಲಿ ಅರಳಿದ ರಾಮಮಂದಿರ