ಬೀದರ್: ನಗರದ ಪ್ರಮುಖ ರಸ್ತೆಗಳು ಕತ್ತಲ್ಲನಿಂದ ಕೂಡಿ ಜನ್ರಿಗೆ ತೊಂದರೆಯಾಗಬಾರದು ಹಾಗೂ ಸುಂದರವಾಗಿ ಕಾಣಬೇಕು ಎಂದು ಕೋಟಿ ಕೋಟಿ ಅನುದಾನದಲ್ಲಿ ಬಟರ್ ಫ್ಲೈ ಬೀದಿ ದೀಪಗಳನ್ನು ಅಳವಡಿಸಲಾಗಿದೆ. ಆದ್ರೆ ವಿಮಾನ ನಿಲ್ದಾಣ ಟು ಬುಡಾ ಕಮಾನ್ ವರೆಗೆ ಯಾವುದೇ ಬಟರ್ ಫ್ಲೈ ಬೀದಿ ದೀಪಗಳನ್ನು (Butterfly Road Light) ಹಾಕದೇ, ಹಾಕಿದ್ದೆವೆ ಎಂದು ಕೋಟ್ಯಂತರ ಹಣ ಗೋಲ್ಮಾಲ್ ಮಾಡಲಾಗಿದೆ.
ದಾಖಲೆಗಳ ಪ್ರಕಾರ ಎಲ್ಲಾ ಬೀದಿ ದೀಪಗಳನ್ನು ಅಳವಡಿಸಿಲಾಗಿದೆ ಎಂದು ಅನುದಾನ ಕೂಡಾ ಬಿಡುಗಡೆಯಾಗಿದೆ. ಆದ್ರೆ ಒಂದು ವರ್ಷವಾದ್ರೂ ಲೈಟ್ ಪೋಲ್ ಹಾಕದೇ ಇರೋದು ʻಪಬ್ಲಿಕ್ ಟಿವಿʼ ರಿಯಾಲಿಟಿ ಚೆಕ್ ನಲ್ಲಿ ಬಹಿರಂಗವಾಗಿದೆ.

ಬೀದರ್ ನಗರ ಅಂದವಾಗಿ ಮತ್ತು ಕತ್ತಲು ಮುಕ್ತವಾಗಲಿ ಎಂದು ಕೋಟಿ ಕೋಟಿ ಅನುದಾನದಲ್ಲಿ ಮಾಡಿದ ಬಟರ್ ಪ್ಲೈಯ್ ದೀಪಗಳ ಅಳವಡಿಕೆಯಲ್ಲಿ ಮಹಾ ಗೋಲ್ಮಾಲ್ ನಡೆದಿದೆ ಎಂಬುದು ಬೆಳಕಿಗೆ ಬಂದಿದೆ ಹೌದು ಬೀದರ್ ನಗರಸಭೆಯಿಂದ ಅಳವಡಿಸಿದ ಬಟರ್ ಫ್ಲೈ ಬೀದಿ ದೀಪಗಳಲ್ಲಿ ಬರೋಬ್ಬರಿ 73 ಲಕ್ಷ ಹಣ ಬಿಡುಗಡೆ ಆಗಿದೆ. ಆದರೆ ಯಾವುದೇ ಬೀದಿ ದೀಪಗಳನ್ನ ಅಳವಡಿಕೆ ಮಾಡದೇ ಹಣವನ್ನು ದುರುಪಯೋಗ ಮಾಡಿಕೊಂಡಿರುವುದು ʻಪಬ್ಲಿಕ್ ಟಿವಿʼ ರಿಯಾಲಿಟಿ ಚೆಕ್‌ನಲ್ಲಿ ಬಹಿರಂಗವಾಗಿದೆ.
2023 ಮತ್ತು 2024ನೇ ಸಾಲಿನ ಎಸ್‌ಸಿಪಿ ಹಾಗೂ ಟಿಎಸ್‌ಪಿ ಅಡಿಯಲ್ಲಿ ಬೀದರ್ ಹೊರ ವಲಯದ ವಿಮಾನ ನಿಲ್ದಾಣದಿಂದ ಬುಡಾ ಕಮಾನ್ ವರೆಗೆ ಬಟರ್ ಫ್ಲೈ ಸ್ಟ್ರೀಟ್ ಲೈಟ್ ಪೋಲ್‌ಗಳನ್ನ ಅಳವಡಿಸಲು ಬರೋಬ್ಬರಿ 73 ಲಕ್ಷ ಹಣ ಬಿಡುಗಡೆ ಮಾಡಲಾಗಿದೆ. ಆದ್ರೆ 2 ಕಿಮೀ ದೂರದ ಈ ರಾಜ್ಯ ಹೆದ್ದಾರಿಯಲ್ಲಿ ಒಂದು ವರ್ಷಗಳೇ ಕಳೆದ್ರೂ ಒಂದೇ ಒಂದು ಬಟರ್ ಫ್ಲೈ ಬೀದಿ ದೀಪಗಳನ್ನು ಅಳವಡಿಸದೇ ಲಕ್ಷಾಂತರ ರೂ ಹಣವನ್ನ ಗಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ನಾವು ಈ ಪೋಲ್‌ಗಳನ್ನ ಬೇರೆ ಕಡೆ ಹಾಕಿದ್ದೆವೆ ಎಂದು ಹೇಳಲಾಗುತ್ತಿದೆ. ಗುತ್ತಿಗೆದಾರರು, ಅಧಿಕಾರಿಗಳು ಮತ್ತು ಜನಪ್ರತಿನಿಗಳು ಸೇರಿಕೊಂಡು ಗೋಲ್ಮಾಲ್ ಮಾಡಲೇಂದೆ ಇಂದು ಬಟರ್ ಫ್ಲೈ ಬೀದಿ ಕಾಮಗಾರಿ ಕೈಗೆತ್ತುಕೊಂಡಿದ್ದಾರೆ ಎಂಬುದು ರಿಯಾಲಿಟಿ ಚೆಕ್‌ನಲ್ಲಿ ಬಹಿರಂಗವಾಗಿದೆ.

ಇನ್ನು ಪೌರಾಡಳಿತ ಸಚಿವ ರಹೀಂಖಾನ್ ಅವರ ನಿವಾಸದ ಬಳಿಯೇ ಈ ರಸ್ತೆ ಇದ್ದು ಸಚಿವರು ಈ ಬಗ್ಗೆ ಗಮನ ಹರಿಸದೇ ಇರೋದು ಮತ್ತಷ್ಟು ಅನುಮಾನಕ್ಕೆ ಕಾರಣವಾಗಿದೆ. ಮನೆಯ ಪಕ್ಕದಲ್ಲೇ ಇರುವ ನಗರದ ಪ್ರಮುಖ ರಸ್ತೆಯಲ್ಲಿ ಬೀದಿ ದೀಪಗಳು ಹಾಗೂ ಪೋಲ್‌ಗಳನ್ನ ಹಾಕದೇ ಹಾಕಿದ್ದೆವೆ ಎಂದು 73 ಲಕ್ಷ ಹಣ ಗುಳಂ ಮಾಡಿದ್ದಾರೆ. ಇದು ಸಚಿವರ ಗಮಕ್ಕೆ ಬಂದಿಲ್ವಾ ಎಂಬುದು ಪ್ರತಿಯೊಬ್ಬರಿಗೂ ಪ್ರಶ್ನೆ ಕಾಡತೊಡಗಿದೆ.
ಇನ್ನೂ ನಗರದಲ್ಲಿ ಸ್ಟ್ರೀಟ್‌ಲೈಟ್‌ಗಳ ದುರಸ್ತಿ ಮಾಡುತ್ತಿವೆ ಎಂದು 15 ಲಕ್ಷ ಹಾಗೂ ಇನ್ನಿತರ ಕಾಮಗಾರಿ ಹೆಸರಿನಲ್ಲಿ ಕೋಟಿ ಕೋಟಿ ಹಣ ಬಿಡುಗಡೆ ಮಾಡಲಾಗಿದೆ. ನಗರಸಭೆಯಿಂದ ಈಗಾ ಮಹಾನಗರ ಪಾಲಿಕೆಯಾಗಿದ್ದು, ಆದ್ರು ಅಭಿವೃದ್ಧಿ ಹೆಸರಿನಲ್ಲಿ ಇಲ್ಲಿನ ಅದಿಕಾರಿಗಳು ಕೋಟಿ ಕೋಟಿ ಹಣವನ್ನು ನುಂಗಿ ನೀರುಕುಡಿಯುತ್ತಿದ್ದಾರೆ. ಇನ್ನು ಈ ಬಗ್ಗೆ ಕಾಮಗಾರಿಯ ಇಂಜಿನಿಯರ್‌ಗೆ ಪ್ರಶ್ನೆ ಮಾಡಿದಾಗ ಮುಂದಿನ ಸಾರಿ ಇದನ್ನು ಸರಿಪಡುಸುತ್ತೆವೆ ಎಂದು ಬಟರ್ ಪ್ಲೈಯ್ ಬೀದಿ ದೀಪಗಳ ಗೋಲ್ಮಾಲ್‌ನ್ನು ಪರೋಕ್ಷವಾಗಿ ಒಪ್ಪಿಕೊಂಡ್ರು.