ಕ್ಯಾರೋಲಿನಾ: 13ರ ಪೋರನೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ ಹಿನ್ನೆಲೆಯಲ್ಲಿ 72 ವರ್ಷದ ಮಹಿಳೆಯನ್ನು ಕಳೆದ ವಾರ ಪೊಲೀಸರು ಬಂಧಿಸಿದ್ದಾರೆ.
ಉತ್ತರ ಕ್ಯಾರೋಲಿನಾದ ರೆಫೋರ್ಡ್ ನಗರದ ನಿವಾಸಿ 72 ವರ್ಷದ ಮೆಕ್ಗಿ ಪಿಟ್ ಬಂಧಿತ ಮಹಿಳೆ. ಈಕೆ ಏಪ್ರಿಲ್ ನಿಂದ ಆಗಸ್ಟ್ ತಿಂಗಳ ನಡುವೆ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸೆಗಿದ್ದಾಳೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಪ್ರಕರಣ ಬೆಳಕಿಗೆ ಬಂದ ಕೂಡಲೇ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ. ಆದ್ರೆ ಮಹಿಳೆಗೂ ಮತ್ತು ಬಾಲಕನಿಗೂ ಹೇಗೆ ಪರಿಚಯ ಎಂಬ ಮಾಹಿತಿ ಲಭ್ಯವಾಗಿಲ್ಲ. ಡಿಸೆಂಬರ್ 23ರಂದು ಮಹಿಳೆಯ ಮೇಲೆ ಅಪ್ರಾಪ್ತನೊಂದಿಗೆ ಅಸಭ್ಯ ವರ್ತನೆ, ಮಕ್ಕಳ ದುರುಪಯೋಗ, ಅನೈಸರ್ಗಿಕ ಕ್ರಿಯೆ, ಬೆದರಿಕೆ ಸೇರಿದಂತೆ ಹಲವು ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಲಾಗಿದೆ.
ನವದೆಹಲಿಯಲ್ಲಿ ಲೈಂಗಿಕ ಕ್ರಿಯೆಗೆ ಒಪ್ಪದ 13ರ ಬಾಲಕನಿಗೆ ನೆರೆಮನೆ ಆಂಟಿ ಆತನ ಮರ್ಮಾಂಗಕ್ಕೆ ಬರೆ ಹಾಕಿದ್ದಳು. ಮಹಿಳೆ ವಿರುದ್ಧ ಐಪಿಸಿ ಸೆಕ್ಷನ್ 323, 324, 342, 363 ಮತ್ತು 506ರ ಅಡಿಯಲ್ಲಿ ಎಫ್‍ಐಆರ್ ದಾಖಲಿಸಲಾಗಿತ್ತು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv