ತಿರುಗುವ ಮನೆ ನಿರ್ಮಿಸಿ ಪತ್ನಿಗೆ ಗಿಫ್ಟ್ ಕೊಟ್ಟ 72ರ ಪತಿ

Public TV
2 Min Read
old m3n 1

ಸರೆಜೆವೊ: ಎಲ್ಲರೂ ತಮ್ಮ ಪತ್ನಿಯರನ್ನು ಇಂಪ್ರೆಸ್ ಮಾಡಲು ಅವರಿಗೆ ಇಷ್ಟವಾದ ಏನಾದರೂ ಮಾಡುತ್ತಾರೆ. ಆದರೆ ಇಲ್ಲೊಬ್ಬ ಉತ್ತರ ಬೋಸ್ನಿಯಾದ 72 ವರ್ಷದ ವ್ಯಕ್ತಿ ತನ್ನ ಪತ್ನಿಗೆ ತಿರುಗುವ ಮನೆಯನ್ನು ನಿರ್ಮಿಸುವ ಮೂಲಕ ಯುವಪ್ರೇಮಿಗಳಿಗೆ ಸ್ಫೂರ್ತಿಯನ್ನು ನೀಡಿದ್ದಾರೆ.

ಸ್ರ್ಬಾಕ್ ನ ನಿವಾಸಿಯಾದ 72 ವರ್ಷದ ವೋಜಿನ್ ಕುಸಿಕ್ ಪತ್ನಿಗಾಗಿ ಹೊಸ ರೀತಿಯಲ್ಲಿ ಮನೆಯನ್ನು ವಿನ್ಯಾಸಗೊಳಿಸಿದ್ದಾರೆ. ವೋಜಿನ್ ಕುಸಿಕ್ ಅವರು ತನ್ನ ಪತ್ನಿ ಲುಬಿಕಾ ಅವರ ಕಿಟಕಿಗಳಿಂದ ಹೊರಗೆ ನೋಡಿದಾಗ ಅವರು ಏನನ್ನು ನೋಡಲು ಬಯಸುತ್ತಾರೆ ಆ ರೀತಿ ಮನೆಯ ದಿಕ್ಕನ್ನು ಬದಲಾಯಿಸುವ ರೀತಿ ಮನೆಯನ್ನು ನಿರ್ಮಿಸಲಾಗಿದೆ. ಈ ಮನೆಯನ್ನು ಹಸಿರು ಮುಂಭಾಗ ಮತ್ತು ಕೆಂಪು ಲೋಹದ ಮೇಲ್ಛಾವಣಿಯಿಂದ ನಿರ್ಮಿಸಲಾಗಿದೆ.

old m3n 2

ಈ ಕುರಿತು ಮಾತನಾಡಿದ ಕುಸಿಕ್, ನಾನು ಈ ವಯಸ್ಸಿಗೆ ಬಂದಾಗ ನನ್ನ ಮಕ್ಕಳು ನನ್ನ ಮನೆಯ ಎಲ್ಲ ವ್ಯವಹಾರವನ್ನು ತೆಗೆದುಕೊಂಡರು. ನಂತರ ನನಗೆ ನನ್ನ ಪತ್ನಿಯ ಆಸೆಯನ್ನು ನೆರವೇರಿಸಲು ಪೂರ್ತಿ ಸಮಯ ಸಿಕ್ಕಿತು ಎಂದು ಸಂತೋಷದಿಂದ ಹೇಳಿದ್ದಾರೆ. ಇದನ್ನೂ ಓದಿ: ಭಾರತದ ಹಾಡಿಗೆ ಅಮೆರಿಕದ ಕುಟುಂಬದ ಡ್ಯಾನ್ಸ್ – ವಿಡಿಯೋ ವೈರಲ್

ಈ ಹಿಂದೆಯು ಕುಸಿಕ್ ಅವರು ಲುಬಿಕಾ ಅವರನ್ನು ಮದುವೆಯಾದ ನಂತರ ಮೂರು ಕೋಣೆಗಳಿರುವ ಮನೆಯನ್ನು ನಿರ್ಮಿಸಿದ್ದರು. ಈ ವೇಳೆ ಲುಬಿಕಾ ತನ್ನ ಮೇಲೆ ಸೂರ್ಯನ ಕಿರಣಗಳು ಬೀಳಬೇಕೆಂದು ಬಯಸಿದ್ದರು. ಆದರೆ ಸೂರ್ಯನ ಕಿರಣಗಳು ಲಿವಿಂಗ್ ರೂಮಿಗೆ ಬೀಳುತ್ತಿದ್ದು, ರೂಮಿಗೆ ಅಲ್ಲಿಗೂ ತುಂಬಾ ಅಂತರವಿತ್ತು. ಅದು ಅಲ್ಲದೇ ಲುಬಿಕಾ ನಮ್ಮ ಮನೆಯ ಅಂಗಳಕ್ಕೆ ಯಾರು ಬರುತ್ತಿದ್ದಾರೆ ಎಂದು ತಿಳಿದುಕೊಳ್ಳಲು ಕಷ್ಟ ಪಡಬೇಕಿತ್ತು. ಅದಕ್ಕೆ ಅವಳಿಗೆ ಇಷ್ಟವಾದ ದಿಕ್ಕಿಗೆ ಈಗ ಕೋಣೆಯನ್ನು ತಿರುಗಿಸಿಕೊಳ್ಳಬಹುದು. ಅದಕ್ಕೆ ಈ ಮನೆಯನ್ನು ನಿರ್ಮಾಣ ಮಾಡಿದೆ ಎಂದು ಬಹಳ ಸಂತಸದಿಂದ ತಿಳಿಸಿದರು.

ನಾನು ನಮ್ಮ ಎರಡು ಮಲಗುವ ಕೋಣೆಗಳ ನಡುವಿನ ಗೋಡೆಯನ್ನು ಕೆಡವಬೇಕಾಯಿತು. ಅವುಗಳನ್ನು ವಾಸದ ಕೋಣೆಯನ್ನಾಗಿ ಮಾಡಲು ಮತ್ತು ಎಲ್ಲ ಅಂದರೆ ವಿದ್ಯುತ್ ಮತ್ತು ಇತರೇ ಸವಲತ್ತುಗಳನ್ನು ಮಾಡಲು ಬಹಳ ಸಮಯ ಬೇಕಾಯಿತು. ಆದರೆ ನಾನು ಅವಳಿಗೆ ಬೇಕಾದುದನ್ನು ಮಾಡಿದೆ. ಈಗ, ನಮ್ಮ ಮುಂಭಾಗದ ಬಾಗಿಲು ಕೂಡ ತಿರುಗುತ್ತದೆ, ಹಾಗಾಗಿ ಅನಗತ್ಯ ಅತಿಥಿಗಳು ನಮ್ಮ ದಾರಿಯಲ್ಲಿ ಹೋಗುವುದನ್ನು ಲುಬಿಕಾ ನೋಡಬಹುದು. ಮತ್ತೆ ಅವರನ್ನು ಮನೆಯ ಜೊತೆ ತಿರುಗಿಸುವಂತೆ ಮಾಡಬಹುದು ಎಂದು ಕಾಮಿಡಿ ಮಾಡಿದರು. ಇದನ್ನೂ ಓದಿ: ಕಾಲುವೆಗೆ ಬಿದ್ದು 10 ವರ್ಷದ ಮಗು ಸಾವು

ಕಾಲೇಜಿಗೆ ಹೋಗದ ಕುಸಿಕ್, ಎಲೆಕ್ಟ್ರಿಕ್ ಮೋಟಾರ್‌ಗಳು ಮತ್ತು ಹಳೆಯ ಮಿಲಿಟರಿ ಸಾರಿಗೆ ವಾಹನದ ಚಕ್ರಗಳನ್ನು ಬಳಸಿ ತನ್ನ ತಿರುಗುವ ಮನೆಯನ್ನು ತಾನೇ ವಿನ್ಯಾಸಗೊಳಿಸಿ ನಿರ್ಮಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *